7 ಸ್ಥಾನಗಳಲ್ಲಿ 6 ಸ್ಥಾನ ಬಿಜೆಪಿಗೆ : ಭರ್ಜರಿ ವಿಜಯ
ಬಿಜೆಪಿಗೆ ಅತ್ಯಧಿಕ ಸ್ಥಾನಗಳು ಲಭ್ಯವಾಗಿದ್ದು, ಭರ್ಜರಿ ಜಯಗಳಿಸಿದೆ. ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಮುಖಂಡರು ಅಧಿಕಾರ ಪಡೆದುಕೊಂಡಿದ್ದಾರೆ.
ತುಮಕೂರು (ಫೆ.04): ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬುಧವಾರ ನಡೆದ 7 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರ ಚುನಾವಣೆ ಪೈಕಿ 6 ರಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರು ಪದಗ್ರಹಣ ಮಾಡಿದರು ಎಂದು ಮಾಜಿ ಶಾಸಕ ಬಿ. ಸುರೇಶ ಗೌಡ ತಿಳಿಸಿದರು.
ತುಮಕೂರಿನಲ್ಲಿ ನೂತನವಾಗಿ ಆಯ್ಕೆ ಅದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಸನ್ಮಾನಿಸಿ ಬಿ.ಸುರೇಶಗೌಡ ಮಾತನಾಡಿದರು.
ನಾವು ಪಕ್ಷದಿಂದ ಹೊರಗಿದ್ರು ಗೆಲ್ತೀವಿ : ದೂರ ಸರಿವ ಸೂಚನೆ ಕೊಟ್ಟರಾ ಬಿಜೆಪಿ ಶಾಸಕ..? .
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರಗಳ ಆಯ್ಕೆ ಚುನಾವಣೆಯಲ್ಲಿ ಗಳಿಗೆನಹಳ್ಳಿ, ಕೆಸರುಮಡು, ಮಲ್ಲಸಂದ್ರ, ಸ್ವಾಂದೇನಹಳ್ಳಿ, ದೊಡ್ಡನಾರವಂಗಲ, ತಿಮ್ಮರಾಜನಹಳ್ಳಿ. ಗ್ರಾಮಪಂಚಾಯಿತಿಗಳ ಅಧ್ಯಕ್ಷರುಗಳಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರು ಆಯ್ಕೆಯಾಗಿದ್ದಾರೆ ಎಂದು ಸುರೇಶ್ ಗೌಡ ತಿಳಿಸಿದರು.