ಮೈಸೂರು(ನ.20): ಹುಣಸೂರು ಉಪ ಚುನಾವಣೆಯಲ್ಲಿ ಈ ಬಾರಿ ಒಟ್ಟು 21 ಮಂದಿ ಕಣದಲ್ಲಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಜಿದ್ದಾಜಿದ್ದಿಯ ತ್ರಿಕೋನ ಸ್ಪರ್ಧೆಗೆ ವೇದಿಕೆ ಸಿದ್ದಗೊಂಡಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆದ್ದು ಶಾಸಕರಾಗಿದ್ದ ಎಚ್‌. ವಿಶ್ವನಾಥ್‌ ಅವರು ರಾಜಿನಾಮೆ ನೀಡಿ ನಂತರ ಅನರ್ಹಗೊಂಡಿದ್ದರಿಂದ ತೆರವಾದ ಈ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. 1952 ರಿಂದ 2019ರವರೆಗೆ ನಾಲ್ಕು ಉಪಚುನಾವಣೆಗಳು ನಡೆದಿವೆ, ಆದರೆ ಮೂರು ಉಪಚುನಾವಣೆಯಲ್ಲಿ ಆಡಳಿತ ಪಕ್ಷದವರೇ ಗೆದ್ದಿದ್ದಾರೆ. ಈ ಉಪ ಚುನಾವಣೆಯಲ್ಲಿ ಯಾರಿಗೆ ವರದಾನವಾಗಲಿದೆ ಎಂದು ಕಾದು ನೋಡಬೇಕಿದೆ.

21 ಮಂದಿ ಕಣದಲ್ಲಿ:

ಬಿಜೆಪಿಯಿಂದ ಎಚ್‌. ವಿಶ್ವನಾಥ್‌, ಕಾಂಗ್ರೆಸ್‌ನಿಂದ ಎಚ್‌.ಪಿ. ಮಂಜುನಾಥ್‌, ಜೆಡಿಎಸ್‌ನಿಂದ ದೇವರಹಳ್ಳಿ ಸೋಮಶೇಖರ್‌, ಎಸ್‌ಡಿಪಿಐನಿಂದ ಪುಟ್ಟನಂಜಯ್ಯ, ಬಿಎಸ್ಪಿಯಿಂದ ಇಮ್ತಿಯಾಜ್‌ ಅಹಮದ್‌, ಉತ್ತಮ ಪ್ರಜಾಕೀಯ ಪಕ್ಷದಿಂದ ಸಿ.ಪಿ. ದಿವಾಕಾರ್‌, ಕೆಜೆಪಿಯಿಂದ ಜಗದೀಶ್‌ ಹಾಗೂ ಪಕ್ಷೇತರವಾಗಿ ಯಡಿಯೂರಪ್ಪ, ಸತ್ಯನಾರಾಯಣ್‌, ರೇವಣ್ಣ, ವೆಂಕಟೇಶನಾಯಕ, ಶಬೀರ್‌ ಅಹಮದ್‌ಖಾನ್‌, ಮಜಾಜ್‌ ಅಹಮದ್‌, ಉಮೇಶ್‌, ಎಸ್‌. ಜಗದೀಶ್‌, ಪ್ರೇಮಕುಮಾರ್‌, ಸುಬ್ಬಯ್ಯ, ಗುರುಲಿಂಗಯ್ಯ, ಹರೀಶ್‌, ಎಂ. ದೇವರಾಜು, ಕರಿಯಪ್ಪ, ತಿಮ್ಮಭೋವಿ ಅವರ ನಾಮಪತ್ರ ಸರಿಯಾಗಿದ್ದು, 21 ಮಂದಿ ಕಣದಲ್ಲಿದ್ದಾರೆ.

ಸರ್ಕಾರಿ ಬಸ್‌ನಲ್ಲಿ ಉಚಿತ ಕುಡಿಯುವ ನೀರು

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದ ವಿಶ್ವನಾಥ್‌ ಈ ಬಾರಿ ಬಿಜೆಪಿಯಿಂದ ಸ್ಪರ್ಧೆಯೊಡ್ಡಿದ್ದಾರೆ. ಮಾಜಿ ಶಾಸಕ ಎಚ್‌.ಪಿ. ಮಂಜುನಾಥ್‌ ಮತ್ತೆ ಕಾಂಗ್ರೆಸ್‌ ಅಭ್ಯರ್ಥಿ. ಜೆಡಿಎಸ್‌ನ ಸೋಮಶೇಖರ್‌ ಹೊಸಮುಖ. ಸಮಾಜವಾದಿಯಲ್ಲಿದ್ದ ಸತ್ಯನಾರಾಯಣ್‌ ಈಗ ಪಕ್ಷೇತರ ಹೀಗೆ ಹಲವಾರು ಮಂದಿ ಹೊಸಬರು ಹಳಬರು ಮತ್ತೆ ಈ ಉಪ ಚುನಾವಣೆಯ ಸಮರದಲ್ಲಿ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದಾರೆ.

ಒಂದಲ್ಲ, ಎರಡಲ್ಲ, ಮೂರು ಬಾರಿ ನಾಮಪತ್ರ ಸಲ್ಲಿಸಿದ BJP ಅಭ್ಯರ್ಥಿ

ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ರಾಜ್ಯ ನಾಯಕರು ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬೀದಿಗಿಳಿದು ಒಬ್ಬರಿಗೊಬ್ಬರು ಕೆಸರು ಎರಚಿ ಹಣ ಅಮಿಷವೊಡ್ಡಿ ಮತ ಭಿಕ್ಷೆಗೆ ಪ್ರಯತ್ನ ನಡೆಯುತ್ತಿದೆ.

ತ್ರಿಕೋನ ಸ್ಪರ್ಧೆ

ಈ ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ತ್ರಿಕೋನವಾಗಿ ಪೈಪೋಟಿ ನಡೆಯುತ್ತಿದೆ. ಈ ನಡುವೆ ಆಡಳಿತಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ತಮ್ಮ ಪ್ರಣಾಳಿಕೆ ಬಗ್ಗೆ ಜನರು ಒಂದಡೆ ಚಿಂತನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಜಾತಿ ಲೆಕ್ಕಚಾರ ಮತ್ತು ಮತ್ತಿತರ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ವಾಪಸ್‌ ಪಡೆಯುತ್ತಾರೆ? ಇಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಹಿಂಬದಿಯಿಂದ ಬೆಂಬಲ ನೀಡುತ್ತಾರೆ ಅಥವಾ ಸ್ಪರ್ಧೆವೊಡ್ಡಿ ಮೂರು ಪಕ್ಷಗಳ ಅಭ್ಯರ್ಥಿಗಳಿಗೆ ಸೆಡ್ಡು ಹೊಡೆಯುತ್ತಾರ ಕಾದು ನೋಡಬೇಕಿದೆ.

-ಧರ್ಮಾಪುರ ನಾರಾಯಣ್‌