ಸರ್ಕಾರಿ ಬಸ್‌ನಲ್ಲಿ ಉಚಿತ ಕುಡಿಯುವ ನೀರು
ಬಿಸಿಲಿಗೆ ದಣಿದು ಬಸ್ ಹತ್ತುವ ಜನರಿಗೆ ಉಚಿತ ಕುಡಿಯುವ ನೀರು ಒದಗಿಸುವ ಕೆಲಸವನ್ನು ಮೈಸೂರಿನ ಗ್ರಾಮದ ಸರ್ಕಾರಿ ಬಸ್ ಚಾಲಕ ಹಾಗೂ ನಿರ್ವಾಕ ಮಾಡುತ್ತಿದ್ದಾರೆ.
ಮೈಸೂರು(ನ.20): ಬಿಸಿಲಿಗೆ ದಣಿದು ಬಸ್ ಹತ್ತುವ ಜನರಿಗೆ ಉಚಿತ ಕುಡಿಯುವ ನೀರು ಒದಗಿಸುವ ಕೆಲಸವನ್ನು ಮೈಸೂರಿನ ಗ್ರಾಮದ ಸರ್ಕಾರಿ ಬಸ್ ಚಾಲಕ ಹಾಗೂ ನಿರ್ವಾಕ ಮಾಡುತ್ತಿದ್ದಾರೆ.
ದಣಿದು ಬಂದ ಜನರಿಗೆ ಬಸ್‌ನಲ್ಲಿಯೇ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ದಣಿದು ಬಂದ ಜನ ಈ ಉಚಿತ ಸೇವೆಯ ಸದುಪಯೋಗವನ್ನು ಪಡೆಯುತ್ತಿದ್ದು, ಉತ್ತಮ ಸ್ಪಂದನೆ ದೊರೆತಿದೆ.
ತಮ್ಮ ಮಕ್ಕಳೊಂದಿಗೆ ರಸ್ತೆ ಗುಂಡಿ ಮುಚ್ಚಿದ ಶಿಕ್ಷಕ ದಂಪತಿ
ಸುತ್ತೂರು ಗ್ರಾಮದ ಬಸ್‌ನಿಲ್ದಾಣದಿಂದ ಹೊಸಕೋಟೆ, ಬಿಳುಗಲಿ, ವರುಣ ಮಾರ್ಗವಾಗಿ ಮೈಸೂರಿಗೆ ಹೋಗುವ ಬಸ್ ನಂಬರ್ 346ನಲ್ಲಿ ಸರ್ಕಾರಿ ಬಸ್‌ನಲ್ಲಿ ಸಾರ್ವಜನಿಕರಿಗಾಗಿ ಉಚಿತವಾಗಿ ಕುಡಿಯುವ ನೀರನ್ನು ಒದಗಿಸಲಾಗಿರುತ್ತದೆ.
ಚಾಲಕ ಸತೀಶ್ ಹಾಗೂ ನಿರ್ವಾಹಕ ಮಹದೇವಸ್ವಾಮಿ ಮಾತನಾಡಿ ಸಾರ್ವಜನಿಕರು, ಶಾಲಾ ಮಕ್ಕಳಿಗೆ ಪ್ರಯಾಣ ಮಾಡುವಾಗ ಬಿಸಿಲಿನ ಬೇಗೆಗೆ ನೀರಿನ ದಾಹ ಇಂಗಿಸಲು ನಾವು ಸಹಾ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರನ್ನು ಮಿನಿ ಟ್ಯಾಂಕ್ ಮೂಲಕ ಒದಗಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಗೊತ್ತು ಗುರಿ ಇಲ್ಲ'..!