ತಾಕತ್ತಿದ್ದರೆ ನನ್ನನ್ನು ಬಂಧಿಸಲಿ: ಹುನಗುಂದ ಮಾಜಿ ಶಾಸಕ ಕಾಶಪ್ಪನವರ

ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದ ಕಾಶಪ್ಪನವರ, ಇಂತಹ ಸಾಕಷ್ಟು ಕೇಸುಗಳನ್ನು ಹಾಕಿದರೂ ಹೆದರುವವನು ನಾನಲ್ಲ ಎಂದರು.

Hungund Former MLA Vijayanad Kashappanavar Slams Doddanagouda Patil grg

ಬಾಗಲಕೋಟೆ(ಡಿ.07): ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ನನ್ನ ವಿರುದ್ಧ ಸುಳ್ಳು ಕೇಸ್‌ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ತಾಕತ್‌ ಇದ್ದರೆ ನನ್ನನ್ನು ಬಂಧಿಸಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಇಳಕಲ್‌ ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ಇಳಕಲ್‌ನಲ್ಲಿ ನಡೆಯಬೇಕಿದ್ದ ಭಾವೈಕ್ಯ ಸಮಾವೇಶದ ಅನುಮತಿ ರದ್ದು ಮಾಡಿದ ನಂತರ ನಡೆದ ಪ್ರತಿಭಟನೆ ವೇಳೆ ಹಾಗೂ ನಂತರ ಹಾಕಿರುವ ಪ್ರಕರಣಗಳ ಕುರಿತು ಸವಾಲು ಹಾಕಿದ ಅವರು, ನಾವು ಯಾರಿಗೂ ಬಗ್ಗುವುದಿಲ್ಲ-ಜಗ್ಗುವುದಿಲ್ಲ. ಹೆದರುವ ಪ್ರಶ್ನೆಯಂತೂ ಇಲ್ಲವೇ ಇಲ್ಲ ಎಂದು ಹೇಳಿದರು.

ಗುಜರಾತ್‌ನಲ್ಲಿ ಎಎಪಿ ಗೆಲವು ನಿಶ್ಚಿತ: ಪೃಥ್ವಿ ರೆಡ್ಡಿ

ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದ ಕಾಶಪ್ಪನವರ, ಇಂತಹ ಸಾಕಷ್ಟು ಕೇಸುಗಳನ್ನು ಹಾಕಿದರೂ ಹೆದರುವವನು ನಾನಲ್ಲ ಎಂದರು. ಇಳಕಲ್ಲಿನಲ್ಲಿ ಭಾವೈಕ್ಯ ಸಮಾವೇಶದ ಅನುಮತಿ ರದ್ದು ಮಾಡಿದ ದಿನ ಪ್ರತಿಭಟನೆ ಮಾಡಿದ ಕಾರಣಕ್ಕೆ ಮಾಜಿ ಶಾಸಕ ಕಾಶಪ್ಪನವರ ಸೇರಿ 27 ಜನರ ವಿರುದ್ಧ ಅಧಿಕಾರಿಗಳನ್ನು ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸಲಾಗಿತ್ತು.
 

Latest Videos
Follow Us:
Download App:
  • android
  • ios