ಕಾಫಿನಾಡಲ್ಲಿ ಅನುಮಾಸ್ಪದವಾಗಿ 35 ವರ್ಷದ ಕಾಡಾನೆ ಸಾವು!
ಕಾಡಾನೆಯೊಂದು ಕಾಫಿ ತೋಟದಲ್ಲಿ ಕರೆಂಟಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿಯ ಕಂಚಿಕಲ್ ದುರ್ಗಾ ಸಮೀಪದ ಕೆರೆಹಕ್ಲು ಗ್ರಾಮದಲ್ಲಿ ನಡೆದಿದೆ. ಮೃತ ಆನೆ ಸುಮಾರು 35 ವರ್ಷದ ಗಂಡು ಆನೆಯಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು : ಕಾಡಾನೆಯೊಂದು ಕಾಫಿ ತೋಟದಲ್ಲಿ ಕರೆಂಟಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿಯ ಕಂಚಿಕಲ್ ದುರ್ಗಾ ಸಮೀಪದ ಕೆರೆಹಕ್ಲು ಗ್ರಾಮದಲ್ಲಿ ನಡೆದಿದೆ. ಮೃತ ಆನೆ ಸುಮಾರು 35 ವರ್ಷದ ಗಂಡು ಆನೆಯಾಗಿದೆ.
ಸೂಕ್ತ ತನಿಖೆ ನಡೆಸುವಂತೆ ಪರಿಸರವಾದಿಗಳ ಆಗ್ರಹ :
ಆಲ್ದೂರು ಹೋಬಳಿ ಸಮೀಪದ ಕುಗ್ರಾಮವೊಂದರಲ್ಲಿ ಆನೆ ದಾಳಿಗೆ ಕಾರ್ಮಿಕನೋರ್ವ ಸಾವನಪ್ಪಿದ್ದನು. ಆತನನ್ನ ಸಾಯಿಸಿದ್ದು ಇದೆ ಆನೆ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ, ವಿದ್ಯುತ್ ಶಾಕ್ ನಿಂದ ಆನೆ ಸಾವನ್ನಪ್ಪಿದ್ದು ಆನೆ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪರಿಸರವಾದಿಗಳು ಹಾಗೂ ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ.
ಕಾಫಿನಾಡ ಮಳೆಗೆ ಮೂರನೇ ಬಲಿ; ನಡೆದು ಹೋಗುತ್ತಿದ್ದ ಮಹಿಳೆ ಮೇಲೆ ಮುರಿದುಬಿದ್ದ ಮರ
ಆನೆ ದಾಳಿಗೆ ಮೂವರು ಬಲಿ :
ಆಲ್ದೂರು ಹೋಬಳಿಯ ಸುತ್ತಮುತ್ತ ಕಳೆದ ಐದಾರು ತಿಂಗಳಿನಿಂದಲೂ ಕೂಡ ಕಾಡಾನೆ ಹಾವಳಿ ಮಿತಿಮೀರಿ ಇತ್ತು. ಆಲ್ದೂರು ಭಾಗದಲ್ಲಿಯೇ ಆನೆ ದಾಳಿಗೆ ಮೂವರು ಸಾವನ್ನಪ್ಪಿದ್ದಾರೆ. ಕಳೆದ ವಾರ ಆನೆ ದಾಳಿಯಿಂದ ಕಾಫಿ ತೋಟದ ಕಾರ್ಮಿಕನೋರ್ವ ಸಾವನ್ನಪ್ಪಿದ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಸೆರೆ ಹಿಡಿಯಲು ಮುಂದಾಗಿದ್ದರು. ಆದರೆ, ಇಂದು ಕಾಫಿ ತೋಟದಲ್ಲಿ ವಿದ್ಯುತ್ ಶಾಕ್ ನಿಂದ ಕಾಡಾನೆ ಸಾವನ್ನಪ್ಪಿದೆ. ಆಲ್ದೂರು ಭಾಗದಲ್ಲಿ ಕಾಡಾನೆ ಹಾವಳಿ ಯಥೇಚ್ಛವಾಗಿದ್ದ ಕಾರಣ ಕೂಲಿ ಕಾರ್ಮಿಕರು ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದರು. ಇದೀಗ ವಿಷಯ ತಿಳಿದು ಆಲ್ದೂರು ಭಾಗದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ