Asianet Suvarna News Asianet Suvarna News

Uttara Kannada: ಹೊನ್ನಾವರದ ತೊಪ್ಪಲಕೆರೆ ನಿವಾಸಿಗಳಿಗೆ ಕಡಲ್ಕೊರೆತದ ಸಂಕಷ್ಟ

ಜಿಲ್ಲೆಯ ಮಲೆನಾಡು, ಬಯಲುಸೀಮೆಯಲ್ಲಿ ಮಳೆ ಕಾಟವಾದ್ರೆ, ಕರಾವಳಿ‌ಯಲ್ಲಿ ಮಾತ್ರ ಭಾಗದಲ್ಲಿ ಕಡಲ್ಕೊರೆತದ ಕಾಟ ಮುಂದುವರಿದೆ. ಹೊನ್ನಾವರದ ಕರ್ಕಿಯ ತೊಪ್ಪಲಕೆರೆಯಲ್ಲಂತೂ ಭಾರೀ ಕಡಲಕೊರೆತ ಉಂಟಾಗಿದ್ದು, ಸಮುದ್ರ ತೀರದ ಜನರು ಆತಂಕದಲ್ಲೇ ದಿನದೂಡುತ್ತಿದ್ದಾರೆ.

Huge Sea Erosion at Karki In Uttara Kannada gvd
Author
First Published Sep 3, 2022, 10:25 PM IST

ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಸೆ.03): ಜಿಲ್ಲೆಯ ಮಲೆನಾಡು, ಬಯಲುಸೀಮೆಯಲ್ಲಿ ಮಳೆ ಕಾಟವಾದ್ರೆ, ಕರಾವಳಿ‌ಯಲ್ಲಿ ಮಾತ್ರ ಭಾಗದಲ್ಲಿ ಕಡಲ್ಕೊರೆತದ ಕಾಟ ಮುಂದುವರಿದೆ. ಹೊನ್ನಾವರದ ಕರ್ಕಿಯ ತೊಪ್ಪಲಕೆರೆಯಲ್ಲಂತೂ ಭಾರೀ ಕಡಲಕೊರೆತ ಉಂಟಾಗಿದ್ದು, ಸಮುದ್ರ ತೀರದ ಜನರು ಆತಂಕದಲ್ಲೇ ದಿನದೂಡುತ್ತಿದ್ದಾರೆ. ಅಲ್ಲದೇ, ತಮ್ಮ ಸಮಸ್ಯೆಗೆ ಸ್ಪಂದಿಸದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ. 

ಹೌದು! ಉತ್ತರಕನ್ನಡ ಜಿಲ್ಲೆಯ ಮಲೆನಾಡು ಹಾಗೂ ಬಯಲುಸೀಮೆ ಭಾಗವಾದ ಶಿರಸಿ, ಬನವಾಸಿ, ಮುಂಡಗೋಡದಲ್ಲಿ ಆಗಾಗ ಭಾರೀ ಮಳೆ ಕಾಣಿಸಿಕೊಳ್ಳುತ್ತಿದೆ. ಆದರೆ, ಜಿಲ್ಲೆಯ ಕರಾವಳಿ‌ ಭಾಗಗಳಲ್ಲಿ ಮಳೆ ಕಡಿಮೆಯಿದ್ರೂ, ಕಡಲ್ಕೊರೆತದ ಕಾಟ ಮಾತ್ರ ಮುಂದುವರಿದೆ. ಸದ್ಯ ಈ ಸಮಸ್ಯೆಯನ್ನು ಹೊನ್ನಾವರದ ಕರ್ಕಿಯ ತೊಪ್ಪಲಕೆರೆಯ ನಿವಾಸಿಗಳು ಎದುರಿಸುತ್ತಿದ್ದು, ಸಮುದ್ರ ತೀರದ ಜನರು ಆತಂಕದಲ್ಲೇ ದಿನದೂಡುತ್ತಿದ್ದಾರೆ. ಇಲ್ಲಿನ ಸಮುದ್ರ ತೀರದಲ್ಲಿ ಕಡಲ್ಕೊರೆತದಿಂದ ರಕ್ಷಣೆ ನೀಡಲು ಆಳೆತ್ತರದ ಕಲ್ಲುಗಳ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. 

Rain in Uttara Kannada: ಹಲವೆಡೆ ಗುಡುಗು ಸಹಿತ ಭಾರೀ ಮಳೆ

ಆದರೆ, ಕಡಲಿನ‌ ಅಲೆಗಳ ಏಟಿಗೆ ಸುಮಾರು ಒಂದು ಕಿ.ಮೀ‌. ದೂರದವರೆಗೆ ತಡೆಗೋಡೆ ಪುಡಿಪುಡಿಯಾಗಿ ನೀರಿನಲ್ಲಿ ಕೊಚ್ಚಿ ಹೋಗಿದೆ.‌ ಕಳೆದೆರಡು ತಿಂಗಳಲ್ಲಿ ಸುರಿದ ಭಾರೀ ಮಳೆಯೊಂದಿಗೆ ಕಡಲ್ಕೊರೆತವೂ ಹೆಚ್ಚಾಗಿ ಈ ಪ್ರದೇಶದಲ್ಲಿ ಸುಮಾರು 50 ತೆಂಗಿನ ಮರಗಳು ನಾಶವಾಗಿ, ಹಲವು ಮನೆಗಳಿಗೆ ನೀರು ಹೊಕ್ಕಿತ್ತು. ಆದರೆ, ಪ್ರಸ್ತುತ, ಕರಾವಳಿ ಭಾಗದಲ್ಲಿ ಮಳೆಯಿಲ್ಲದಿದ್ರೂ, ಕಡಲ್ಕೊರೆತ ಮುಂದುವರಿದ ಕಾರಣ ಅಡಿಭಾಗದ ಮಣ್ಣು ಕೊಚ್ಚಿ ಮತ್ತಷ್ಟು ತೆಂಗಿನ ಮರಗಳು ಉರುಳುವ ಸ್ಥಿತಿಗೆ ತಲುಪಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಕೇವಲ ಆಶ್ವಾಸನೆಯೊಂದಿಗೆ ಹಿಂತಿರುಗಿದ್ದಾರೆ. 

ಈವರೆಗೆ ಕಡಲ್ಕೊರೆತಕ್ಕೆ ತಡೆಗೋಡೆ ನಿರ್ಮಾಣವಾಗಲೀ, ಜನರಿಗೆ ಪರಿಹಾರ ಒದಗಿಸುವುದಾಗಲೀ ಮಾಡಿಲ್ಲ ಎಂದು ಸ್ಥಳೀಯರು ಅಸಮಾಧನ ವ್ಯಕ್ತಪಡಿಸಿದ್ದಾರೆ. ಇನ್ನು ಕರಾವಳಿಯಲ್ಲಿ ಮಳೆಯ ಪ್ರಮಾಣ ಹೆಚ್ಚಾದಾಗ ಸ್ಥಳೀಯ ನಿವಾಸಿಗಳ ಮನೆಯ ಅಂಗಣದವರೆಗೆ ಸಮುದ್ರದ ನೀರು ಹೊಕ್ಕುತ್ತದೆ. ಕಡಲ್ಕೊರೆತದ ಸಮಸ್ಯೆಯಿಂದಾಗಿ ಈಗಾಗಲೇ ಸ್ಥಳೀಯ ನಿವಾಸಿಯೋರ್ವರ ಕುಡಿಯುವ ನೀರಿನ ಬಾವಿ ಹಾಗೂ ತೆಂಗಿನ ಮರಗಳು ಸಂಪೂರ್ಣ ನಾಶವಾಗಿ ಹೋಗಿದೆ‌. ಕುಡಿಯಲು ನೀರಿನಲ್ಲದೇ ಪ್ರಸ್ತುತ ಇತರ ಮನೆಗಳಿಗೆ ತೆರಳಿ ಅಲ್ಲಿಂದ ನೀರು ತರುವ ಪರಿಸ್ಥಿತಿಯಲ್ಲಿ ಇಲ್ಲಿನ ನಿವಾಸಿಗಳಿದ್ದು, ರಾತ್ರಿ ನಿದ್ರೆಯಿಲ್ಲದೇ ಭೀತಿಯಲ್ಲೇ ದಿನದೂಡುತ್ತಿದ್ದಾರೆ.‌ 

Cylinder blast: ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ: ತಪ್ಪಿದ ಭಾರೀ ದುರಂತ

ದಿನದಿಂದ ದಿನಕ್ಕೆ ಇಲ್ಲಿನ ತೀರ ಪ್ರದೇಶವನ್ನು ಸಮುದ್ರ ಆವರಿಸಿಕೊಳ್ಳುತ್ತಿರುವುದರಿಂದ ಜನರು ಆತಂಕಿತರಾಗಿದ್ದು, ಗಟ್ಟಿ ತಡೆಗೋಡೆ ನಿರ್ಮಾಣ ಮಾಡುವುದಲ್ಲದೇ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಗೀಡಾದವರಿಗೆ ಪರಿಹಾರ ಒದಗಿಸಬೇಕೆಂದು ಸಂತ್ರಸ್ತರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಕರಾವಳಿ ತೀರ ಪ್ರದೇಶವಾದ ಹೊನ್ನಾವರ ಭಾಗದಲ್ಲಿ ಭಾರೀ ಕಡಲ್ಕೊರೆತಗಳಾಗುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕಿದೆ. ಅಲ್ಲದೇ, ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಜನಜೀವನ ರಕ್ಷಿಸಬೇಕಿದೆ.

Follow Us:
Download App:
  • android
  • ios