ಆರ್‌.ಆರ್‌. ನಗರದಲ್ಲಿ ಎಂ.ಎನ್‌.ಸಿ ಸ್ವಿಮ್ಮಿಂಗ್‌ನಿಂದ ನಿರ್ಮಾಣ| ಏಪ್ರಿಲ್‌ನಲ್ಲಿ ಆರಂಭವಾಗುವ ಶಿಬಿರದಲ್ಲಿ ಭಾಗವಹಿಸುವವರಿಗೆ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಹಾಗೂ ಉಚಿತ ಪರಿಕರ ವಿತರಣೆ| ಎರಡು ತಿಂಗಳ ಕಾಲ ನಡೆಯುವ ಶಿಬಿರ|  

ಬೆಂಗಳೂರು(ಮಾ.31): ಕೋವಿಡ್‌ 19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಬಿಸಿ ನೀರಿನ ಈಜುಕೊಳಕ್ಕೆ ಹೆಚ್ಚು ಬೇಡಿಕೆ ಬಂದಿದೆ. ಜನರ ಸುರಕ್ಷತೆ ಹಾಗೂ ಕೊರೋನಾ ಹರಡದಂತೆ ಮುನ್ನೆಚ್ಚರಿಕೆ ದೃಷ್ಟಿಯಿಂದ ರಾಜರಾಜೇಶ್ವರಿ ನಗರದಲ್ಲಿ ಎಂ.ಎನ್‌.ಸಿ ಸ್ವಿಮ್ಮಿಂಗ್‌ ಅಕಾಡೆಮಿಯಿಂದ ಅಧುನಿಕ ತಂತ್ರಜ್ಞಾನ ಸಹಿತ ಬಿಸಿ ನೀರಿನ ಈಜುಕೊಳ ನಿರ್ಮಾಣವಾಗಿದೆ.

ಉಷ್ಣ ರಹಿತ ವಾತಾವರಣದಲ್ಲಿ ಕೊರೋನಾ ಸೋಂಕಿಗೆ ಹೆಚ್ಚು ಕಾಲ ಬದುಕುವ ಮತ್ತು ಹೆಚ್ಚು ಹರಡಬಲ್ಲ ಸಾಮರ್ಥ್ಯ ಇದೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಆರೋಗ್ಯ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸುವ ಜಲಕ್ರೀಡೆಗಾಗಿ ಜನರು ಬಿಸಿನೀರಿನ ಈಜುಕೊಳಕ್ಕೆ ಆದ್ಯತೆ ನೀಡುತ್ತಿದ್ದಾರೆ.

ತಣ್ಣೀರಿನ ಈಜುಕೊಳದಲ್ಲಿ ಸಾಮೂಹಿಕವಾಗಿ ಜನರು ಈಜುವುದರಿಂದ ಸೋಂಕು ಬೇಗ ವ್ಯಾಪಿಸಬಹುದೆಂಬ ಸಮಸ್ಯೆಗೆ ವೈದ್ಯಲೋಕ ಉತ್ತರ ನೀಡಿದೆ. ತಜ್ಞ ವೈದ್ಯರ ಸಲಹೆ ಮೇರೆಗೆ ಆರ್‌.ಆರ್‌.ನಗರದ ಚನ್ನಸಂದ್ರದಲ್ಲಿರುವ ಎಂ.ಎನ್‌.ಸಿ ಸ್ವಿಮ್ಮಿಂಗ್‌ ಅಕಾಡೆಮಿಯು ವಿಶೇಷವಾಗಿ ಬಿಸಿನೀರಿನ ಈಜುಕೊಳದ ಸೌಲಭ್ಯ ಕಲ್ಪಿಸಿದೆ. ಅಕಾಡೆಮಿಯಿಂದ ಸಾವಿರಾರು ಈಜುಪಟುಗಳು ತರಬೇತಿ ಪಡೆದಿದ್ದಾರೆ. ಪ್ರಸ್ತುತದಲ್ಲೂ ಕೂಡ ಮಹಿಳೆಯರು, ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. ಇವರೆಲ್ಲರ ಆರೋಗ್ಯ ಗಮನದಲ್ಲಿಟ್ಟುಕೊಂಡು ಕೊರೋನಾ ಕಾಲದಲ್ಲಿ ಅಕಾಡೆಮಿಯು ಬಿಸಿನೀರು ಈಜುಕೊಳ ನಿರ್ಮಿಸಿದೆ. ಇಂತಹ ಈಜುಕೊಳ ಕೆಲವೇ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಹೊರತು ಪಡಿಸಿದರೆ ಪಂಚತಾರಾ ಹೋಟಲ್‌ಗಳಲ್ಲೂ ಲಭ್ಯವಿಲ್ಲ. ಇಂತಹ ಆರೋಗ್ಯಕರ ಸೌಲಭ್ಯವನ್ನು ಅಕಾಡೆಮಿ ಸಾರ್ವಜನಿಕರಿಗೆ ತರಬೇತಿಗೆ ಮುಕ್ತವಾಗಿಸಿದೆ.

ಕೊರೋನಾ ಭೀತಿ: ಈಜುಕೊಳ ತೆರೆದು ತಿಂಗಳಾದ್ರೂ ಜನರಿಲ್ಲ..!

ಹೇಗಿದೆ ಬಿಸಿನೀರಿನ ಈಜುಕೊಳ?

ನಿರಂತರವಾಗಿ ಬಿಸಿನೀರು ಲಭ್ಯವಾಗುವಂತೆ ಈಜುಕೊಳ ಪಕ್ಕ ಗೀಜರ್‌ ಅಳವಡಿಸಲಾಗಿದೆ. ಕೊಳಕ್ಕೆ ಬ್ಲೀಚಿಂಗ್‌ ಪೌಡರ್‌, ಕ್ಲೋರಿನ್‌ ಮತ್ತು ಆ್ಯಸಿಡ್‌ ಮತ್ತಿತರ ರಸಾಯನಿಕ ಹಾಕದೆ ಸ್ವಚ್ಛತೆಗಾಗಿ ಸ್ವಯಂ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಜತೆಗೆ ಆಧುನಿಕ ತಂತ್ರಜ್ಞಾನ ಓಝೋನ್‌ ಸಂಪರ್ಕ ಮೂಲಕ ನೀರು ಸ್ವಾಭಾವಿಕವಾಗಿ ಶುದ್ಧವಾಗುವಂತೆ ನೋಡಿಕೊಳ್ಳಲಾಗುತ್ತದೆ. ಅಲ್ಲದೇ ನೀರಿಗಿಳಿದವರಿಗೆ ಅಂಟುರೋಗ ಮತ್ತು ಚರ್ಮ ಸಮಸ್ಯೆ ಬರದಂತೆ ವೈಜ್ಞಾನಿಕ ಕ್ರಮ ವಹಿಸಲಾಗಿದೆ.

ವಿಶೇಷ ರಿಯಾಯಿತಿ ಲಭ್ಯ

ಎಂ.ಎನ್‌.ಸಿ. ಸ್ವಿಮ್ಮಿಂಗ್‌ ಅಕಾಡೆಮಿ ಈ ಬಾರಿ ಕೋವಿಡ್‌ ತಡೆ ಸುರಕ್ಷತೆಯೊಂದಿಗೆ ವಿಶೇಷ ಬೇಸಿಗೆ ಶಿಬಿರ ಹಮ್ಮಿಕೊಂಡಿದೆ. ಏಪ್ರಿಲ್‌ನಲ್ಲಿ ಆರಂಭವಾಗುವ ಈ ಶಿಬಿರದಲ್ಲಿ ಭಾಗವಹಿಸುವವರಿಗೆ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಹಾಗೂ ಉಚಿತ ಪರಿಕರ ವಿತರಿಸುತ್ತಿದೆ. ಎರಡು ತಿಂಗಳ ಕಾಲ ನಡೆಯುವ ಶಿಬಿರದಲ್ಲಿ ಬೆಳಗ್ಗೆ 6ರಿಂದ 9ರವರೆಗೆ ತರಬೇತಿ ನಿಡಲಾಗುತ್ತದೆ, ಹೆಚ್ಚಿನ ಮಾಹಿತಿಗೆ 9741265773/ 9620211455ಗೆ ಸಂಪರ್ಕಿಸಬಹುದು.

ಕೊರೋನಾ ತಡೆಯುವ ಸಲುವಾಗಿ ಸೀಮಿತ ಜನರಿಗೆ ಮಾತ್ರ ತರಬೇತಿ ಆರಂಭಿಸಲಾಗಿದೆ. ಈ ಸಂದರ್ಭದಲ್ಲಿ ಮಾಸ್ಕ್‌ ಮತ್ತು ಸ್ಯಾನಿಟೈಸರ್‌ಗಳ ಮೂಲಕ ನಿರಂತರ ಜಾಗ್ರತೆ ವಹಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಈಜುಪಟುಗಳಿಂದ ತರಬೇತಿ ಕೊಡಿಲಾಗುತ್ತದೆ ಎಂದು ಎಂ.ಎನ್‌.ಸಿ. ಸ್ವಿಮ್ಮಿಂಗ್‌ ಅಕಾಡೆಮಿ ಮಾಲೀಕ ಎನ್‌.ಲೋಕೇಶ್‌ ತಿಳಿಸಿದ್ದಾರೆ.