Hubli: ದೇವಾಲಯ ಅರ್ಚಕನಿಗೆ ಕಾಲಿನಿಂದ ಒದ್ದ ಗ್ರಾಮಸ್ಥರು: ಕಂಪ್ಲಿಕೊಪ್ಪ ಗ್ರಾಮದಲ್ಲಿ ಅಮಾನವೀಯ ಘಟನೆ

ಹುಬ್ಬಳ್ಳಿ ಸಮೀಪದ ಕಂಪ್ಲಿಕೊಪ್ಪ ಗ್ರಾಮದ ಬಸವಣ್ಣ ದೇವಾಲಯದ ಅರ್ಚಕನ ಮೇಲೆ ಗ್ರಾಮಸ್ಥರು ಮನಸೋ ಇಚ್ಛೆ ಕಾಲುಗಳಿಂದ ಒದ್ದು, ಹಲ್ಲೆ ಮಾಡಲಾಗಿದೆ.

Hubli Villagers kick temple priest Inhumane incident in Kamplikoppa village sat

ಹುಬ್ಬಳ್ಳಿ (ಫೆ.21): ರಾಜ್ಯದಲ್ಲಿ ಮಠ, ಮಂದಿರ, ದೇವಸ್ಥಾನಗಳಲ್ಲಿ ಪೂಜೆ ಮಾಡುವಂತಹ ಅರ್ಚಕರು, ಪೂಜಾರಿಗಳಿಗೆ ದೇವರಿಗೆ ನೀಡುವಷ್ಠ ಗೌರವ, ಭಕ್ತಿಯನ್ನು ನೀಡಲಾಗುತ್ತದೆ. ಆದರೆ, ಹುಬ್ಬಳ್ಳಿ ಸಮೀಪದ ಕಂಪ್ಲಿಕೊಪ್ಪ ಗ್ರಾಮದ ಬಸವಣ್ಣ ದೇವಾಲಯದ ಅರ್ಚಕನ ಮೇಲೆ ಗ್ರಾಮಸ್ಥರು ಮನಸೋ ಇಚ್ಛೆ ಕಾಲುಗಳಿಂದ ಒದ್ದು, ಹಲ್ಲೆ ಮಾಡಲಾಗಿದೆ.

ಹಿಂದೂ ಧರ್ಮ, ಸಂಪ್ರದಾಯ, ಸಂಸ್ಕೃತಿ, ಆಚಾರ- ವಿಚಾರಗಳಲ್ಲಿ ದೇವರಿಗೆ ವಿಶೇಷ ಪ್ರತಿನಿಧ್ಯ ನೀಡಲಾಗುತ್ತದೆ. ಇನ್ನು ದೇವರನ್ನು ಪೂಜೆ ಮಾಡಲು ಒಬ್ಬ ಪೂಜಾರಿಗಳು, ಮಠಗಳಲ್ಲಿ ಅರ್ಚಕರು, ಮಠಾಧೀಶರು ಸೇರಿ ಅನೇಕರು ಕಾರ್ಯ ನಿರ್ವಹಿಸುತ್ತಾರೆ. ಇಬರು ಪೂಜೆ- ಪುನಸ್ಕಾರ ಕಾರ್ಯಗಳ ಜೊತೆಗೆ ದೇವಾಲಯ ಹಾಗೂ ಮಠಗಳನ್ನು ನಿರ್ವಹಣೆ ಮಾಡುತ್ತಿರುತ್ತಾರೆ. ಅರ್ಚಕರು, ಪೂಜಾರಿಗಳಿಗೆ ದೇವರಿಗೆ ಸಲ್ಲಿಸುವ ಭಕ್ತಿ, ಗೌರವವನ್ನು ಅವರಿಗೂ ಸಲ್ಲಿಕೆ ಮಾಡಲಾಗುತ್ತದೆ. ಆದರೆ, ಹುಬ್ಬಳ್ಳಿ ಸಮೀಪದ ಕಂಪ್ಲಿಕೊಪ್ಪ ಗ್ರಾಮದಲ್ಲಿ ಮಠದ ಪೂಜಾರಿ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿರುವುದು ಕಂಡುಬಂದಿದೆ. 

ದೇವತೆಗಳನ್ನು ಪೂಜಿಸುವ ಅರ್ಚಕರು ಮಹಾನ್‌ ಶಕ್ತಿವಂತರು: ಸಚಿವ ಬಿ.ಸಿ.ಪಾಟೀಲ

ಮಠದ ಪೂಜೆ ವಿಚಾರಕ್ಕೆ ಗ್ರಾಮಸ್ಥರು ಅರ್ಚಕರ ನಡುವೆ ವೈಷಮ್ಯ:  ಮಠದ ಪೂಜೆ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಹಾಗೂ ಅರ್ಚಕನ ನಡುವೇ ಮಾರಾಮಾರಿ ನಡೆದ ಘಟನೆ ಹುಬ್ಬಳ್ಳಿ ತಾಲೂಕಿನ ಕಂಪ್ಲಿಕೊಪ್ಪ ಗ್ರಾಮದಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ 30-40 ವರ್ಷಗಳಿಂದ ಗ್ರಾಮದ ಬಸವಣ್ಣ ದೇವಸ್ಥಾನದಲ್ಲಿ ಪ್ರಕಾಶ್ ಮುಳುಗಂದಮಠ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ‌. ಇವರ ಕಾರ್ಯವೈಖರಿ ಬಗ್ಗೆ ಬೇಸತ್ತ ಗ್ರಾಮಸ್ಥರು ಅರ್ಚಕರನ್ನು ಪೂಜೆ ಮಾಡದಂತೆ ಹೇಳಿದ್ದಾರೆ. ಆದರೂ, ಗ್ರಾಮಸ್ಥರ ಮಾತನ್ನು ಧಿಕ್ಕರಿಸಿ ಅರ್ಚಕ ಪೂಜಾ ಕಾರ್ಯಗಳನ್ನು ದಿನಂಪ್ರತಿ ಮುಂದುವರೆಸಿದ್ದಾರೆ. 

ದೇವಸ್ಥಾನದಲ್ಲಿಯೇ ಅರ್ಚಕರ ಮೇಲೆ ಹಲ್ಲೆ:  ಮಠದ ಪೂಜೆ ವಿಷಯವಾಗಿ ಗ್ರಾಮಸ್ಥರು ಅರ್ಚಕರ ನಡುವೆ ಮಾತಿಗೆ ಮಾತು ನಡೆದಿದೆ. ಇದು ವಿಕೋಪಕ್ಕೆ ತಿರುಗಿ ದೇವಸ್ಥಾನದಲ್ಲಿಯೇ ಅರ್ಚಕೊಂದಿಗೆ ಗ್ರಾಮಸ್ಥರ ಗಲಾಟೆ ಮಾಡಿಕೊಂಡಿದ್ದಾರೆ. ಅರ್ಚಕ ಪ್ರಕಾಶ್ ಮುಳುಗಂದಮಠಗೆ ಥಳಿಸಿದ್ದಾರೆ. ಅದರಲ್ಲಿ ಕೆಲವು ಯುವಕರು ಅರ್ಚಕರನ್ನು ಗೋಡೆಗೆ ತಳ್ಳಿ ಓಡೋಡಿ ಬಂದು, ಕಾಲಿನಿಂದ ಹಾರಿ ಹಾರಿ ಒದ್ದಿದ್ದಾರೆ. ಮನಸೀ ಇಚ್ಛೆಯಿಂದ ತೀವರವಾಗಿ ಹಲ್ಲೆ ಮಾಡಿದ್ದಾರೆ. ಈ ಘಟನೆಯ ಬಗ್ಗೆ ಕೆಲವರು ವೀಡಿಯೋ ಮಾಡಿದ್ದು, ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. 

Swara Bhaskar ಮದುವೆ ಅಸಿಂಧು ಎಂದ ಧರ್ಮಗುರು: ರಕ್ಷಣೆಗೆ ಬಂದ ಆರ್​ಜೆ ಸಯೇಮಾ

ಬೇರೊಬ್ಬ ಅರ್ಚಕರನ್ನು ನೇಮಿಸಲು ಕುತಂತ್ರ: ಕಳೆದ ಹಲವು ವರ್ಷಗಳಿಂದ  ಪೂಜೆ ವಿವಾದ ನಡೆಯುತ್ತಿದೆ. ದೇವಸ್ಥಾನಕ್ಕೆ ಬೇರೆ ಅರ್ಚಕನನ್ನು ನೇಮಿಸಲು ಗ್ರಾಮಸ್ಥರು ಮುಂದಾಗಿದ್ದಾರೆ. ಆದರೆ ನಾನೇ ಪೂಜೆ ಮಾಡ್ತೀನಿ ಎಂದು ಮುಳುಗಂದಮಠ ಪಟ್ಟು ಹಿಡಿದಿದ್ದಾರೆ. ಇದೇ ವಿಚಾರಕ್ಕೆ ಹಲವು ಬಾರಿ ವಾಗ್ವಾದ ನಡೆದಿದ್ದು, ಅಧಿಕಾರಿಗಳು ಗ್ರಾಮ ವಾಸ್ತವ್ಯ ಇರುವ ಸಂದರ್ಭದಲ್ಲಿಯೇ ಗ್ರಾಮಸ್ಥರು ಹಾಗೂ ಅರ್ಚಕರು ಹೊಡೆದಾಡಿಕೊಂಡಿದ್ದಾರೆ. ಇನ್ನು ಗಲಾಟೆಯ ವೇಳೆ ಗ್ರಾಮಸ್ಥರನ್ನು ತಡೆಯಲು ಮುಂದಾಗಿದ್ದ ಅರ್ಚಕನ ಮಗನಿಗೂ ಥಳಿಸಿದ್ದಾರೆ. ಇನ್ನು ಕಲಘಟಗಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ಕಂಡುಬಂದಿದೆ. 

Latest Videos
Follow Us:
Download App:
  • android
  • ios