Asianet Suvarna News Asianet Suvarna News

ಸಿಎ ಸೈಟ್‌ ವಾಪಸ್‌ ಪಡೆಯಲು ಹುಡಾ ನೋಟಿಸ್‌

  •  ನಿಯಮ ಪಾಲಿಸದವರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಬಿಸಿ 
  • ದುರುಪಯೋಗ ಪಡಿಸಿಕೊಂಡಿರುವ 40 ಸೈಟ್‌ಗೆ ನೋಟಿಸ್‌
  • ಮತ್ತೆ ಸೈಟ್ ಮಾಡಿದರೆ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ 125 ಕೋಟಿ ಆದಾಯ
Hubli Urban Development Authority  notice to take back CA site gow
Author
Bengaluru, First Published Jul 13, 2022, 12:39 PM IST

 ಹುಬ್ಬಳ್ಳಿ (ಜು.13): ಮಹಾನಗರದಲ್ಲಿ ನಾಗರಿಕ ಸೌಕರ್ಯ ನಿವೇಶನ ಪಡೆದ ಸಂಘ-ಸಂಸ್ಥೆಗಳು ಅವುಗಳನ್ನು ಸದುಪಯೋಗ ಮಾಡಿಕೊಳ್ಳದೆ ಇರುವುದು ಹಾಗೂ ಬೇರೆ ಉದ್ದೇಶಕ್ಕೆ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಹುಡಾ ನೀಡಿರುವ 359 ಸೈಟ್‌ಗಳಲ್ಲಿ 200ಕ್ಕಿಂತ ಹೆಚ್ಚು ಸೈಟ್‌ ಸಮರ್ಪಕ ಬಳಕೆಯಾಗಿಲ್ಲ ಎಂದು ಸರ್ವೇಯಲ್ಲಿ ಅಂದಾಜಿಸಿದ್ದು ಇವುಗಳನ್ನು ಮರಳಿ ಪಡೆಯಲಾಗುವುದು ಎಂದು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ತಿಳಿಸಿದ್ದಾರೆ. ಯಾವುದೇ ಲೇಔಟ್‌ ನಿರ್ಮಾಣ ಮಾಡಬೇಕಾದಲ್ಲಿ ಸಿಎ ಸೈಟಿಗಾಗಿ ಜಾಗ ಮೀಸಲಿಡಬೇಕು ಎನ್ನುವುದು ನಿಯಮ. ಅಂತಹ ಸೈಟ್‌ನ್ನು ನಾಗರಿಕ ಮೂಲ ಸೌಕರ್ಯ ಸಲುವಾಗಿ ಕಾಲಕಾಲಕ್ಕೆ ಅರ್ಜಿ ಕರೆದು ಹಂಚಿಕೆ ಮಾಡಿ ಅಲ್ಲಿ ಕೇಂದ್ರ, ರಾಜ್ಯ ಸರ್ಕಾರ, ಸಮುದಾಯ ಭವನ, ಆಸ್ಪತ್ರೆ, ಶೈಕ್ಷಣಿಕ, ಸಾಂಸ್ಕೃತಿಕ ಭವನ, ಧಾರ್ಮಿಕ, ಶಿಶುಪಾಲನೆ, ಕ್ರೀಡಾ ಚಟುವಟಿಕೆ, ವ್ಯಾಯಾಮ ಶಾಲೆ, ನ್ಯಾಯಬೆಲೆ ಅಂಗಡಿ, ಹಣ್ಣಿನ ಅಂಗಡಿ, ತರಕಾರಿ ಮಳಿಗೆ, ಸಾಮಾಜಿಕ ಕಾರ್ಯಗಳಿಗೆ ಅರ್ಜಿ ಕರೆದು ಸಿಎ ಸೈಟ್‌ನ್ನು ಹುಡಾ ನೀಡುತ್ತದೆ. ಈ ಸೈಟ್‌ನಲ್ಲಿ ಸ್ವಂತ ಉದ್ಯೋಗ, ವಾಣಿಜ್ಯ ಚಟುವಟಿಕೆ ಅಥವಾ ಮನೆ ನಿರ್ಮಾಣಕ್ಕಾಗಿ ಅವಕಾಶವಿಲ್ಲ. ಆದರೆ, ಕೆಲವೆಡೆ ನಿಯಮ ಉಲ್ಲಂಘಿಸಿ ಮನೆ, ವಾಣಿಜ್ಯ ಕಟ್ಟಡ , ಫಾರ್ಮಹೌಸ್‌ ನಿರ್ಮಾಣ, ಖಾಲಿ ಬಿಟ್ಟಿರುವುದು ಗಮನಕ್ಕೆ ಬಂದಿವೆ.

ಸ್ಥಳೀಯ ಲೇಔಟ್‌ನಲ್ಲಿರುವ ನಿವೇಶನ ಮಾಲೀಕರು ಸಹ ಪ್ರಾಧಿಕಾರಕ್ಕೆ ಬಂದು ದೂರು ನೀಡಿದ್ದರಿಂದ ನೀಡಿರುವ ಸೈಟ್‌ನ್ನು ವಾಪಸ್‌ ಪಡೆಯಲು ಮುಂದಾಗಿದೆ. ಈಗಾಗಲೇ 200ಕ್ಕಿಂತ ಹೆಚ್ಚು ಸಿಎ ಸೈಟ್‌ ಗುರುತಿಸಿದ್ದು ದುರುಪಯೋಗ ಪಡಿಸಿಕೊಂಡಿರುವ 40 ಸೈಟ್‌ಗೆ ನೋಟಿಸ್‌ ನೀಡಲಾಗಿದೆ. ಒಂದು ತಿಂಗಳಲ್ಲಿ ಪರಿಶೀಲಿಸಿ ನೋಟಿಸ್‌ ನೀಡಿದ ಸೈಟ್‌ನ್ನು ರದ್ದುಪಡಿಸಿ ಪುನಃ ಸಿಎ ಸೈಟ್‌ಗೆ ಅರ್ಜಿ ಕರೆಯಲಾಗುವುದು. ಇದರಿಂದಾಗಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ 125 ಕೋಟಿ ಆದಾಯ ಹರಿದು ಬರಲಿದೆ  ಎಂದು ನಾಗೇಶ್ ಕಲಬುರ್ಗಿ ತಿಳಿಸಿದ್ದಾರೆ.

ಈಗಾಗಲೇ ಹುಬ್ಬಳ್ಳಿ ಧಾರವಾಡ ಅವಳಿ‌ನಗರದಲ್ಲಿ 359 ಸಿಎ ನಿವೇಶನಗಳನ್ನು ಹು-ಡಾ ಹಂಚಿಕೆ ಮಾಡಿದ್ದು ಅದರಲ್ಲಿ ಕನಿಷ್ಠ 200ಕ್ಕಿಂತ ಹೆಚ್ಚು ನಿವೇಶನಗಳಿ ಸರಿಯಾಗಿ ಬಳಕೆಯಾಗಿಲ್ಲ ಎಂದು ಸರ್ವೆಯಲ್ಲಿ ಅಂದಾಜಿಸಲಾಗಿದೆ.  ಬಳಕೆಯಾಗದೇ ಇರುವ ಸೈಟ್ ಗಳನ್ನು ಹುಡಾ ಮರಳಿ ಪಡೆಯಲಿದೆ ಎಂದು ಹುಡಾ ಅಧ್ಯಕ್ಷರಾದ ನಾಗೇಶ ಕಲಬುರ್ಗಿ ತಿಳಿಸಿದ್ದಾರೆ.   

Follow Us:
Download App:
  • android
  • ios