ಹುಬ್ಬಳ್ಳಿ(ಜ.30): ಇದೇ ಫೆ. 15 ರಿಂದ ಹುಬ್ಬಳ್ಳಿ- ವಿಜಯಪುರ ನಡುವೆ ಇಂಟರ್‌ಸಿಟಿ ರೈಲು ಸಂಚಾರ ಪ್ರಾರಂಭವಾಗಲಿದ್ದು, ತನ್ಮೂಲಕ ಈ ಭಾಗದ ಜನರ ಪ್ರಮುಖ ಬೇಡಿಕೆ ಈಡೇರಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ.

ಇಲ್ಲಿನ ದೇಸಾಯಿ ಸರ್ಕಲ್‌ನಲ್ಲಿ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಜಯಪುರ- ಹುಬ್ಬಳ್ಳಿ ಮಾರ್ಗದಲ್ಲಿ ಇಂಟರ್‌ಸಿಟಿ ರೈಲು ಪ್ರಾರಂಭಿಸಬೇಕೆಂಬ ಬೇಡಿಕೆ ಬಹು ಕಾಲದಿಂದ ಇತ್ತು. ಈ ನಿಟ್ಟಿನಲ್ಲಿ ಸಭೆ ನಡೆಸಿದ್ದು, ಇದೇ ಫೆ.15 ರಿಂದ ರೈಲು ಓಡಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

ಬೆಂಗಳೂರು- ಹುಬ್ಬಳ್ಳಿ ನಡುವೆ ನಾಲ್ಕೈದು ಗಂಟೆಗಳಲ್ಲಿ ಕ್ರಮಿಸುಂತಾಗಬೇಕು. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕನಿಷ್ಠ ತಾಸಿಗೆ 150 ಕಿಲೋ ಮೀಟರ್‌ ವೇಗದಲ್ಲಿ ರೈಲು ಸಂಚರಿಸಬೇಕು. ಪುಣಾ- ಬೆಂಗಳೂರು ಡಬ್ಲಿಂಗ್‌ ಕೆಲಸ ಪ್ರಗತಿಯಲ್ಲಿ ಸಾಗಿದೆ ಎಂದು ತಿಳಿಸಿದ್ದಾರೆ.