ಹುಬ್ಬಳ್ಳಿ (ಡಿ. 20)  ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತನ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಿದೆ. ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು  ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಜೊತು ಬಿದ್ದ ವಿದ್ಯುತ್ ತಂತಿಯಿಂದ ಅಗ್ನಿ ಅವಘಡ ಸಂಭವಿಸಿದೆ. ಬೆಳೆದು ನಿಂತಿದ್ದ ಲಕ್ಷಾಂತರ ಮೌಲ್ಯದ ಕಬ್ಬು ಸುಟ್ಟುಹೋಗಿದೆ.  ಕಲಘಟಗಿ ತಾಲೂಕಿನ ರುಸ್ತುಂ ಸಾಬ್ ಕೆರೆ ಪಕ್ಕದ ಜಮೀನಿನಲ್ಲಿ ಘಟನೆ ನಡೆದಿದೆ. 

ಪ್ರಗತಿಪರ ರೈತನೀಗ ರಾಜಕಾರಣಿ

ಹಲವು ಬಾರಿ ದೂರು ನೀಡಿದ್ರು ಸರಿಪಡಿಸಿದ ಹೆಸ್ಕಾಂ ಸಿಬ್ಬಂದಿ ರೈತರು ಹಿಡಿಶಾಪ ಹಾಕಿದ್ದಾರೆ. ರೈತ ಪ್ರಕಾಶ ಚಿನ್ನಪ್ಪ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆ ಸುಟ್ಟಿದ್ದು ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ.