Asianet Suvarna News Asianet Suvarna News

ಪ್ರಗತಿಪರ ರೈತ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ

ಪ್ರಗತಿಪರ ರೈತ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. 

Farmer Contest in Grama Panchayat Election in malavalli snr
Author
Bengaluru, First Published Dec 19, 2020, 3:07 PM IST

ಮಳವಳ್ಳಿ (ಡಿ.19):  ಗ್ರಾಪಂ ಚುನಾವಣೆಯಲ್ಲಿ ಪ್ರಗತಿಪರ ರೈತ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವುದು ಗಮನ ಸೆಳೆಯುತ್ತಿದೆ.

ತಾಲೂಕಿನ ಕಿರುಗಾವಲು ಗ್ರಾಪಂಗೆ ಸೇರಿದ ಗ್ರಾಮದ 5ನೇ ಬ್ಲಾಕ್‌ನಲ್ಲಿ ರೈತ ಸೈಯದ್‌ ಘನಿ ಖಾನ್‌ ರಾಜಕೀಯ ಬೆಂಬಲ ಪಡೆಯದೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.

ದೇಶೀಯ ತಳಿ ಸೇರಿದಂತೆ ವಿವಿಧ ದೇಶಗಳ 800 ತಳಿಯ ಭತ್ತ, 120 ಜಾತಿಯ ಮಾವಿನ ಮರಗಳು, 30ಕ್ಕೂ ಹೆಚ್ಚು ವೈವಿಧ್ಯಮಯ ತರಕಾರಿ ತಳಿಗಳ ಬೀಜಗಳನ್ನು ಸಂರಕ್ಷಣೆ ಮಾಡುತ್ತಾ ಕೃಷಿ ವಿಜ್ಞಾನಿ ಎಂದೇ ಪ್ರಗತಿಪರ ರೈತ ಸೈಯದ್‌ ಘನಿ ಖಾನ್‌ರನ್ನು ಕರೆಯುತ್ತಾರೆ.

ಕಾಂಗ್ರೆಸ್ ಸಂಬಂಧವನ್ನೇ ಮುರಿದ್ಕೊಂಡು ಜೆಡಿಎಸ್‌ ಸೇರಲು ತೀರ್ಮಾನಿಸಿದ ಹಿರಿಯ ನಾಯಕ ...

1996ರಿಂದ ಬೀಜ ಸಂಗ್ರಹ ಕಾರ್ಯದಲ್ಲಿ ನಿರತರಾಗಿರುವ ಸೈಯದ್‌ ನಿಜವಾದ ವಿಜ್ಞಾನಿಯಾಗಿದ್ದಾರೆ. ಇವರ ಜಮೀನಿಗೆ ಅನೇಕ ರೈತರು, ವಿಜ್ಞಾನಿಗಳು ಭೇಟಿ ಕೊಡುತ್ತಲೇ ಇರುತ್ತಾರೆ. ಬೀಜ ಪಡೆದುಕೊಂಡ ರೈತ ತಾನು ಬೆಳೆದ ನಂತರ ಸೈಯದ್‌ ಕೊಟ್ಟಬೀಜದ ಎರಡು ಪಟ್ಟು ಬೀಜಗಳನ್ನು ವಾಪಸ್‌ ಕೊಡಬೇಕೆಂಬ ಷರತ್ತಿನೊಂದಿಗೆ ರೈತರಿಗೆ ಉಚಿತವಾಗಿ 1 ಅಥವಾ 2 ಕೆಜಿಯಷ್ಟುಭತ್ತದ ಬೀಜಗಳನ್ನು ಕೊಡುವುದರ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಸರ್ಕಾರದಿಂದ ಸಿಗುವ ಹಲವು ಸೌಲಭ್ಯಗಳು ಅರ್ಹ ಫಲಾನುಭವಿ ರೈತರಿಗೆ ಇಂದಿಗೂ ತಲುಪುತ್ತಿಲ್ಲ. ಕೇವಲ ಉಳ್ಳವರಿಗೆ ಮಾತ್ರ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇಂದಿಗೂ ಕೂಡ ಗ್ರಾಮೀಣ ಪ್ರದೇಶದಲ್ಲಿ ಹಲವಾರು ಮೂಲ ಸಮಸ್ಯೆಗಳು ತಾಂಡವವಾಡುತ್ತಿವೆ. ಹಳ್ಳಿಗಳಲ್ಲಿ ಕೃಷಿಯೇ ಪ್ರಧಾನವಾಗಿದ್ದರೂ ಕೂಡ ಕೃಷಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಯಾವುದೇ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚುನಾಯಿತ ಜನಪ್ರತಿನಿಧಿಗಳು ಗ್ರಾಮಗಳಲ್ಲಿ ನಡೆಯುವ ಗ್ರಾಮಸಭೆಗಳ ಬಗ್ಗೆ ಸರಿಯಾಗಿ ಜನರಿಗೆ, ರೈತರಿಗೆ ಮಾಹಿತಿ ನೀಡುತ್ತಿಲ್ಲ. ಇದರಿಂದ ಸರ್ಕಾರದ ಸೌಲಭ್ಯಗಳು ಜನಸಾಮಾನ್ಯರು, ರೈತರಿಗೆ ಸರಿಯಾಗಿ ತಲುಪುತ್ತಿಲ್ಲ. ಸಿಗುವ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಹೇಳಿದರು.

ನಾನು ಹೊಸ ಆಶಯಗೊಂದಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ಕಿರುಗಾವಲು ಗ್ರಾಪಂ ಅನ್ನು ಮಾದರಿಯನ್ನಾಗಿ ಮಾಡಲು ಶ್ರಮಿಸುತ್ತೇನೆ. ರೈತರ ಅಭ್ಯುದಯಕ್ಕಾಗಿ ಚುನಾವಣೆಯಲ್ಲಿ ಮತದಾರರು ಅವಕಾಶ ಮಾಡಿಕೊಡಬೇಕೆಂದು ಮತದಾರರಲ್ಲಿ ಕೇಳುತ್ತೇನೆ ಎಂದು ಪ್ರಗತಿಪರ ರೈತ ಘನಿ ಖಾನ್‌ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಯಾವುದೇ ರಾಜಕೀಯ ಪಕ್ಷಗಳ ಬೆಂಬಲ ಪಡೆಯದೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಘನಿಖಾನ್‌ ಗೆಲ್ಲುವ ಉತ್ಸುಹದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

Follow Us:
Download App:
  • android
  • ios