ಹುಬ್ಬಳ್ಳಿ 18 ವರ್ಷದ ಯುವತಿ 50 ವರ್ಷದ ಅಂಕಲ್ ಜೊತೆ ಪರಾರಿ; ಮಗಳಿಗಾಗಿ ಹೆತ್ತವರ ಕಣ್ಣೀರು!

ಹುಬ್ಬಳ್ಳಿಯ 18 ವರ್ಷದ ಯುವತಿಯೊಬ್ಬಳು 50 ವರ್ಷದ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದಾಳೆ. ಕೊಲ್ಲಾಪುರದ ಅಜ್ಜಿ ಮನೆಗೆ ಹೋಗುವುದಾಗಿ ಹೇಳಿ ಹೋದ ಯುವತಿ ನಾಪತ್ತೆಯಾಗಿದ್ದು, ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

Hubballi 18 year old girl runs away with 50 year old uncle parents cry for daughter sat

ಹುಬ್ಬಳ್ಳಿ (ಫೆ.13): ಹುಬ್ಬಳ್ಳಿಯಿಂದ ಕೊಲ್ಲಾಪುರದ ಅಜ್ಜಿ ಮನೆಗೆ ಹೋಗುವುದಾಗಿ ಹೋದ 18 ವರ್ಷದ ಮಗಳು 50 ವರ್ಷದ ಅಂಕಲ್‌ನೊಂದಿಗೆ ಪರಾರಿಯಾಗಿದ್ದಾಳೆ ಎಂದು ಯುವತಿ ಮನೆಯವರು ಕಣ್ಣೀರು ಹಾಕಿದ್ದಾರೆ. ಇದೀಗ ಅಂಕಲ್‌ ವಿರುದ್ಧ ಯುವತಿ ಮನೆಯವರು ದೂರು ನೀಡಿದ್ದಾರೆ.

ಇದು ಹುಬ್ಬಳ್ಳಿಯಲ್ಲಿ ನಡೆದಿರುವ ವಿಚಿತ್ರ ಪ್ರೇಮ್ ಕಹಾನಿ. 18 ವರ್ಷ ಹುಡುಗಿ ಜೊತೆಗೆ 50 ವರ್ಷ ಅಂಕಲ್ ಲವ್ ಸ್ಟೋರಿ? ಆಗಿದೆ. ಎರಡು ಮಕ್ಕಳ ತಂದೆಯ ಜೊತೆಗೆ 18 ವರ್ಷ ಯುವತಿಯ 'ಪ್ರೇಮ ಪುರಾಣ' ಇದೀಗ ಬಹಿರಂಗವಾಗಿದೆ. ಅಜ್ಜಿ ಮನೆಗೆ ಹೋಗಿದ್ದ ಹುಡುಗಿ ದಿಢೀರ್ ನಾಪತ್ತೆ ಆಗಿದ್ದಾಳೆ. ನಾಪತ್ತೆಯಾದ ಮಗಳನ್ನು ಹುಡುಕಿಕೊಡುವಂತೆ ಪಾಲಕರ ಕಣ್ಣೀರು ಹಾಕುತ್ತಿದ್ದಾರೆ. ಮಗಳ ಪೋಟೋ ಹಿಡಿದು ಹುಡುಕಿಕೊಡುವಂತೆ ಪೋಷಕರ ಪೊಲೀಸರು, ಮಾಧ್ಯಮಗಳು ಹಾಗೂ ಕಂಡ ಕಂಡವರ ಮುಂದೆ ಮನವಿ ಮಾಡುತ್ತಿದ್ದಾರೆ.

ಯುವತಿ ಕರೀಷ್ಮಾ ಅಪ್ರಾಪ್ತೆ ಇದ್ದಾಗಲೇ ಪ್ರೀತಿ, ಪ್ರೇಮ ಅಂತಾ ಅಂಕಲ್‌ ಜೊತೆಗೆ ಸುತ್ತಾಡಿರಬಹುದು. ಆದರೆ, ಇದೀಗ 18 ವರ್ಷ ತುಂಬುತ್ತಿದ್ದಂತೆ ತಾನು ಮೇಜರ್ ಎಂದು ತಿಳಿದು ಅಂಕಲ್ ಪ್ರಕಾಶ್‌ ಗೋಪಿ ಜೊತೆಗೆ ಓಡಿ ಹೋಗಿರಬಹುದು. ಹುಬ್ಬಳ್ಳಿಯ ಚಾಲುಕ್ಯ ನಗರದಲ್ಲಿ ಕರಿಷ್ಮಾ ಮನೆಯಿದ್ದರೆ, ತುಸು ದೂರದಲ್ಲಿ ಪ್ರಕಾಶ್ ಗೋಪಿ ಕೂಡ ವಾಸವಾಗಿದ್ದರು. ಪ್ರಕಾಶ್‌ಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೂ, ಕಳೆದ 3 ವರ್ಷದಿಂದ ಕರಿಷ್ಮಾ ಹಿಂದೆ ಬಿದ್ದಿದ್ದಾನೆ. ಕಳೆದ ವರ್ಷ ಇದೇ ವಿಚಾರವಾಗಿ ಯುವತಿ ಕರೀಷ್ಮಾ ಮನೆಯವರು ಅಂಕಲ್‌ ಪ್ರಕಾಶ್ ವಿರುದ್ಧ ನಮ್ಮ ಮಗಳನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ: 10ನೇ ತರಗತಿ ತಂಗಿ ಅಣ್ಣನಿಗೆ ಬರೆದ ಪ್ರೀತಿಯ ಪತ್ರ ವೈರಲ್: 13 ನಿಯಮ ಹಾಕಿದ ಸಹೋದರಿ!

ಇದಾದ ಬಳಿಕ ಕರಿಷ್ಮಾಳ ಪೋಷಕರು ಆಕೆಯನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಅಜ್ಜಿಯ ಮನೆಗೆ ಕಳುಹಿಸಿದ್ದರು. ಇದೀಗ ಅಜ್ಜಿ ಮನೆಯಿಂದಲೇ ಕರಿಷ್ಮಾ ನಾಪತ್ತೆ ಆಗಿದ್ದಾಳೆ. ಜ.2ರಂದು ಕರೀಷ್ಮಾ ಮನೆಯೊಂದ ಓಡಿ ಹೋಗಿದ್ದು, ಈವರೆಗೂ ಪತ್ತೆಯಾಗಿಲ್ಲ. ಇನ್ನು ಹುಬ್ಬಳ್ಳಿ ಚಾಲುಕ್ಯ ನಗರದಲ್ಲಿ ಪ್ರಕಾಶ್ ಇದ್ದಾನೆಯೇ ಎಂದು ನೋಡಿದರೂ ಆತನೂ ನಾಪತ್ತೆ ಆಗಿದ್ದಾನೆ. ಹೀಗಾಗಿ, ಕೊಲ್ಲಾಪುರದ ಅಜ್ಜಿ ಮನೆಯಿಂದಲೇ ಅಂಕಲ್ ಜೊತೆಗೆ ಪರಾರಿಯಾಗಿದ್ದಾಳೆ ಎಂದು ಯುವತಿ ಮನೆಯವರು ಆರೋಪ ಮಾಡಿದ್ದಾರೆ. 40 ದಿನವಾದರೂ ಕರಿಷ್ಮಾ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದ್ದರಿಂದ ಮಗಳನ್ನು ನೆನೆದು ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ.

Latest Videos
Follow Us:
Download App:
  • android
  • ios