ಬೆಂಗಳೂರಿನಲ್ಲಿ ರಾತ್ರಿ ವೇಳೆ ಮನೆಗೆ ಹೋಗುತ್ತಿದ್ದ ಅಮಾಯಕ ದಂಪತಿಯಿಂದ ಸುಳ್ಳು ಕಾರಣವನ್ನು ಹೇಳಿ ಕ್ಯೂ ಆರ್‌ ಕೋಡ್‌ ಮೂಲಕ 1 ಸಾವಿರ ರೂ. ಹಣವನ್ನು ವಸೂಲಿ ಮಾಡಿದ್ದ ಹೊಯ್ಸಳದ ಪಡೆಯ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಬೆಂಗಳೂರು (ಡಿ.11) : ಬೆಂಗಳೂರಿನಲ್ಲಿ ಕ್ಯೂ ಆರ್‌ ಕೋಡ್‌ ಮೂಲಕ 1 ಸಾವಿರ ರೂ. ಹಣವನ್ನು ವಸೂಲಿ ಮಾಡಿದ್ದ ಹೊಯ್ಸಳದ ಪಡೆಯ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಆದರೆ, ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಈ ಬಗ್ಗೆ ಕಾರ್ತಿಕ್‌ ಎನ್ನುವವರಿಂದ ದೂರು ದಾಖಲಾಗಿದ್ದು, ಇದನ್ನು ಪರಿಗಣಿಸಿ ಪರಿಶೀಲನೆ ಮಾಡಿದಾಗ ಹಣವನ್ನು ಪಡೆದಿರುವುದು ಬಯಲಿದೆ ಬಂದಿದ್ದು, ಲಂಚದಾಸೆಗೆ ಅಮಾನತ್ತಾಗಿ ಮನೆಯಲ್ಲಿ ಕೂರುವಂತಾಗಿದೆ.

ಸಿಲಿಕಾನ್‌ ಸಿಟಿಯಲ್ಲಿ ಪುಡಿ ರೌಡಿಗಳು, ಕಳ್ಳ ಕಾಕರ ಹಾವಳಿ ಹೆಚ್ಚಾಗಿರುವಂತೆಯೇ ಪೊಲೀಸರಿಂದಲೂ ಕೆಲವು ಬಾರಿ ಸಾರ್ವಜನಿಕರು ಮೋದ ಹೋಗುವುದು ಕಂಡುಬರುತ್ತಿದೆ. ಸಾರ್ವಜನಿಕರಿಂದ ಸುಳ್ಳು ಕಾರಣಕ್ಕೆ ಹಣ ವಸೂಲಿ ಮಾಡಿದ ಘಟನೆಗಳು ಸಾಕಷ್ಟಿವೆ. ಆದರೆ, ಬೆಂಗಳೂರಿನ ಸಂಪಿಗೆಹಳ್ಳಿಯ ಇಬ್ಬರು ಪೊಲೀಸ್‌ ಕಾನ್ಸ್‌ಸ್ಟೇಬಲ್‌ಗಳು ಅಮಾನತು ಆಗಿದ್ದಾರೆ. ಇನ್ನು ಕಳೆದ ಎರೆಉ ದಿನಗಳ ಹಿಂದೆ ದಂಪತಿ ತಮ್ಮ ಕುಟುಂಬ ಸದಸ್ಯರೊಬ್ಬರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ರಾತ್ರಿ 11 ಗಂಟೆಗೆ ಮನೆಗೆ ಹೋಗುತ್ತಿದ್ದರು.ಈ ವೇಳೆ ಹೊಯ್ಸಳ ವಾಹನದಲ್ಲಿ ಗಸ್ತು ತಿರುಗುವಾಗ ಪೊಲೀಸರು ದಂಪತಿಯನ್ನು ತಡೆದು ರಾತ್ರಿ ವೇಳೆ ಹೀಗೆ ಸಂಚಾರ ಮಾಡಬಾರದು. ಇದು ಅಪರಾಧ ಕೃತ್ಯವಾಗಿದ್ದು ದಂಡ ಕಟ್ಟುವಂತೆ ಕೇಳಿದ್ದಾರೆ. ಈ ವೇಳೆ ಹಣವಿಲ್ಲ ಎಂದಾಗ ಕ್ಯೂ ಆರ್‌ ಕೋಡ್‌ ಮೂಲಕ ಆನ್‌ಲೈನ್‌ನಲ್ಲಿ ಹಣವನ್ನು ಪಡೆದಿದ್ದರು. 

Scroll to load tweet…

ಇಸ್ಪೀಟ್‌ ಹಣ ವಶಪಡಿಸಿಕೊಂಡು ಕೇಸು ಹಾಕದ 4 ಪೊಲೀಸರ ಸಸ್ಪೆಂಡ್‌

ಟ್ವಿಟರ್‌ ಮೂಲಕ ದೂರು: ಇನ್ನು ದಂಪತಿಯಿಂದ ಹೊಯ್ಸಳ ಗಸ್ತು ಪಡೆಯ ಪೊಲೀಸರು ಹಣವನ್ನು ಪಡೆದಿರುವ ಬಗ್ಗೆ ಕಾರ್ತಿಕ್‌ ಎನ್ನುವವರು ದೂರು ನೀಡಿದ್ದರು. ಜೊತೆಗೆ ಇದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಟ್ಯಾಗ್‌ ಮಾಡುವ ಮೂಲಕ ವಿಚಾರವನ್ನು ದೊಡ್ಡದಾಗಿ ವೈರಲ್‌ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಅನೈಪ್‌ ಶೆಟ್ಟಿ ಅವರ ನೇತೃತ್ವದ ಪಡೆಯು ಟ್ವಿಟರ್‌ ಮೂಲಕ ಬಂದಿರುವ ಆರೋಪವನ್ನು ಪರಿಗಣಿಸಿ ಪರಿಶೀಲನೆ ಆರಂಭಿಸಿತ್ತು. ಈ ವೇಳೆ ಹಣ ಪಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿಯೇ ಅಮಾನತು ಮಾಡಲಾಗಿದೆ.

Scroll to load tweet…

ಹೆಡ್‌ ಕಾನ್ಸ್‌ಸ್ಟೇಬಲ್‌ ಸಸ್ಪೆನ್ಸನ್: ಈ ಕುರಿತು ಮಾಹಿತಿ ನಿಡಿರುವ ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಅವರು, ಮುಗ್ದ ದಂಪತಿಯಿಂದ ರಾತ್ರಿ ವೇಳೆ ಸಂಚಾರ ಮಾಡಬಾರದು ಎಂದು ಹೇಳಿ ಹೊಯ್ಸಳ ಪಡೆಯ ಸಿಬ್ಬಂದಿ ಹಣ ಪಡೆದಿದ್ದರು. ಇದರ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಹೆಡ್‌ ಕಾನ್ಸ್‌ಸ್ಟೇಬಲ್ ರಾಜೇಶ್, ಪೊಲೀಸ್‌ ಕಾನ್ಸ್‌ಸ್ಟೇಬಲ್ ನಾಗೇಶ್ ಅವರನ್ನು ಅಮಾನತು ಮಾಡಲಾಗಿದೆ. ಇನ್ನು ಹಣವನ್ನು ಕೊಟ್ಟ ಸಂತ್ರಸ್ಥರಿಂದ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದರು.