ಬೆಂಗಳೂರು(ಏ.23): ಒಂದೆಡೆ ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಲೇ ಇದೆ. ಇನ್ನೊಂದೆಡೆ ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಸಲಾಗಿದೆ. ಲಾಕ್‌ ಡೌನ್‌ ಕಟ್ಟುನಿಟ್ಟಾಗಿದ್ದಾಗ ಜನ ಅದನ್ನು ಯಾವ ರೀತಿ ಪಾಲಿಸಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ಕೊರೋನಾ ಭಯದಿಂದ ಜಗತ್ತೇ ತತ್ತರಿಸಿದ್ರೂ, ತರಕಾರಿ, ಮಾಂಸ ಖರೀದಿಯಲ್ಲೇ ಬ್ಯುಸಿ ಇದ್ದ ಜನ ಸಣ್ಣ ಪುಟ್ಟ ಕಾರಣ ಹೇಳಿಕೊಂಡೇ ಓಡಾಡ್ತಿದ್ರು.

"

ಲಾಕ್‌ಡೌನ್ ಸಡಿಲಿಸಿದ ಮೇಲಂತೂ ಹೆಳುವುದೇ ಬೇಕಿಲ್ಲ. ಜನರು ಬೇಕಾಬಿಟ್ಟಿಯಾಗಿ ಹೊರಗೆ ಓಡಾಡಲಾರಂಭಿಸಿದ್ದಾರೆ. ತರಕಾರಿ, ಸೊಪ್ಪು, ಹಾಲು ಪೇಪರ್ ಎಂದು ಮನೆಯಿಂದ ಹೊರಗೆ ಹೆಜ್ಜೆ ಇಡುತ್ತಿದ್ದಾರೆ. ಎಷ್ಟೇ ಮಾಸ್ಕ್ ಧರಿಸಿದರೂ ಸೋಷಿಯಲ್ ಡಿಸ್ಟೆನ್ಸಿಂಗ್ ಕಾಯ್ದುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದುದು ಸುಳ್ಳಲ್ಲ.

"

ರಾಜ್ಯದಲ್ಲಿಯೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸೋಂಕು ಬಾಧಿತರು ನಿಧಾನವಾಗಿ ಗುಣಮುಖರಾಗುತ್ತಿದ್ದಾರೆ. ಪೊಲೀಸರು, ಆಶಾ ಕಾರ್ಯಕರ್ತೆಯರೂ, ವೈದ್ಯ ಸಿಬ್ಬಂದಿ ಅವಿರತವಾಗಿ ಕೊರೋನಾ ವಿರುದ್ಧ ಹೋರಾಡುತ್ತಿದ್ದ ಎಲ್ಲರೂ ಮನೆಯಲ್ಲೇ ಉಳಿದುಕೊಂಡು ಕೊರೋನಾ ವಾರಿಯರ್ಸ್‌ಗೆ ನೆರವಾಗಬೇಕಾದ ಅನಿವಾರ್ಯತೆ ಇದೆ.

"

ರಾಜ್ಯದಲ್ಲಿ ಹಲವು ಪ್ರದೇಶಗಳನ್ನು ಕೊರೋನಾ ಹಾಟ್‌ಸ್ಪಾಟ್‌ ಆಗಿ ಗುರುತಿಸಲಾಗಿದೆ. ಲಾಕ್‌ಡೌನ್ ಸಡಿಲಿಕೆ ಮಾಡಿದ್ದರೂ, ಅಗತ್ಯ ಷರತ್ತುಗಳನ್ನು ವಿಧಿಸಲಾಗಿದೆ. ಪಾಸ್ ಇದ್ದರಷ್ಟೇ ಹೊರಗಡೆ ಓಡಾಡಲು ಸಾಧ್ಯ. ಅಪಾಯಕಾರಿ ಎಂದರೆ ಈಗಾಗಲೇ 2 ಲಕ್ಷಕ್ಕೂ ಹೆಚ್ಚ ಪಾಸ್‌ಗಳು ಬೆಂಗಳೂರಿನಲ್ಲಿಯೇ ವಿತರಣೆಯಾಗಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಲಾಕ್‌ಡೌನ್ ಸಡಿಲಿಸಿದೆ ಎಂದು ಮೈಮರೆತರೆ ಎಲ್ಲರೂ ಪಶ್ಚಾತಾಪ ಪಡೆಬೇಕಾಗಿ ಬರಬಹುದು.

"

ಉಡುಪಿ ಜಿಲ್ಲೆಯಲ್ಲಿ ಕಳೆದ 25 ದಿನಗಳಲ್ಲಿ ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿಲ್ಲ. ಹಾಗಿದ್ದರೂ ಅಲ್ಲಿ ಲಾಕ್‌ಡೌನ್ ಮಾತ್ರ ಸಡಿಲಿಕೆ ಮಾಡಲು ನಿರ್ಧರಿಸಿಲ್ಲ. ಹೀಗಿರುವಾಗ ದಿನಾ ದಿನಾ ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವ ಪ್ರದೇಶದಲ್ಲಿ ಲಾಕ್‌ಡೌನ್‌ ಸಡಿಲಿಕೆಯಾದರೆ ಉಂಟಾಗುವುವ ಪರಿಣಾಮ ಪರಿಸ್ಥಿತಿ ಕೈ ಮೀರುವ ಸಾಧ್ಯತೆಯೂ ಇಲ್ಲದಿಲ್ಲ.

"

ಸರ್ಕಾರ ಲಾಕ್‌ಡೌನ್‌ ಸಡಿಲಿಕೆ ಮಾಡಿದ್ದರೂ, ಜನರು ತಮ್ಮ ಎಚ್ಚರಿಕೆಯಲ್ಲಿರಬೇಕಾಗಿರುವುದು ಅಗತ್ಯವಾಗಿದೆ. ಅತೀ ಅಗತ್ಯ, ಅನಿವಾರ್ಯ ಸಂದರ್ಭ ಹೊರತುಪಡಿಸಿ ಹೊರಗೆ ಬರುವುದನ್ನು ಜನ ನಿಲ್ಲಿಸಬೇಕಿದೆ. ಜವಾಬ್ದಾರಿಯುತವಾಗಿ ಎಲ್ಲರೂ ಮನೆಯೊಳಗೇ ಇರದಿದ್ದರೆ, ಲಾಕ್‌ಡೌನ್ ಸಡಿಲಿಕೆಯೇ ಮಾರಕವಾಗಿ ಪರಿಣಮಿಸಬಹುದು.