Kolar: ಗ್ರಾಮೀಣ ಮಹಿಳೆಯರಿಗೆ ಉಚಿತ ಪ್ರಯಾಣ ಹೇಗೆ?: ಹಲವು ಗ್ರಾಮಗಳಲ್ಲಿ ಬಸ್ ಸೌಲಭ್ಯ ಇಲ್ಲ!
ಸರ್ಕಾರ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸಬಹುದು ಎಂದು ಘೋಷಣೆ ಮಾಡಿದೆ. ಆದರೆ ಗ್ರಾಮೀಣ ಪ್ರದೇಶದ ಬಹುತೇಕ ಕಡೆ ಸರ್ಕಾರಿ ಬಸ್ಸುಗಳ ಸೇವೆ ಇಲ್ಲದಿರುವುದರಿಂದ ಗ್ರಾಮೀಣ ಮಹಿಳೆಯರು ಸರ್ಕಾರದ ಉಚಿತ ಬಸ್ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.
ಬಂಗಾರಪೇಟೆ (ಜೂ.03): ಸರ್ಕಾರ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸಬಹುದು ಎಂದು ಘೋಷಣೆ ಮಾಡಿದೆ. ಆದರೆ ಗ್ರಾಮೀಣ ಪ್ರದೇಶದ ಬಹುತೇಕ ಕಡೆ ಸರ್ಕಾರಿ ಬಸ್ಸುಗಳ ಸೇವೆ ಇಲ್ಲದಿರುವುದರಿಂದ ಗ್ರಾಮೀಣ ಮಹಿಳೆಯರು ಸರ್ಕಾರದ ಉಚಿತ ಬಸ್ ಸೌಲಭ್ಯದಿಂದ ವಂಚಿತರಾಗಲಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳೇ ಕಳೆದರೂ ತಾಲೂಕಿನ ಹಲವು ಪ್ರದೇಶಗಳಿಗೆ ಇನ್ನೂ ಬಸ್ಸುಗಳ ಸೇವೆಯೇ ಇಲ್ಲದೆ ಪರದಾಡುವಂತಾಗಿರುವುದು ದುರಂತವೇ ಸರಿ. ಕೆಂಪು ಬಸ್‌ಗಳಿಲ್ಲದ ಕಡೆ ವಿಧಿಯಿಲ್ಲದೆ ಆ ಪ್ರದೇಶದ ಜನರು ಖಾಸಗಿ ಬಸ್ ಅಥವಾ ಲಗೇಟ್ ಆಟೋಗಳಲ್ಲಿ ಪ್ರಯಾಣಿಸುವಂತಾಗಿದೆ.
ಖಾಸಗಿ ಬಸ್ಸುಗಳ ದರ್ಬಾರ್: ತಾಲೂಕು ಕೇಂದ್ರವಾದ ಪಟ್ಟಣಕ್ಕೆ ದೂರದ ಗ್ರಾಮೀಣ ಭಾಗದಿಂದ ಶಾಲಾ,ಕಾಲೇಜುಗಳಿಗೆ,ಉದ್ಯೋಗಕ್ಕೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕಾರ‍್ಯಗಳಿಗಾಗಿ ಬರುವ ಮಹಿಳಾ ಪ್ರಯಾಣಿಕರು ಸೇರಿದಂತೆ ಎಲ್ಲಾ ಪ್ರಯಾಣಿಕರಿಗೆ ಸರ್ಕಾರಿ ಬಸ್‌ಗಳ ಸೇವೆ ಇಲ್ಲದೆ ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳಕ್ಕೆ ಬರಲಾಗದೆ ನಿತ್ಯ ಪರದಾಡುವಂತಾಗಿದೆ. ಪಟ್ಟಣದಿಂದ ಕಾಮಸಮುದ್ರ ಮಾರ್ಗವಾಗಿ ಆಂಧ್ರ, ತಮಿಳುನಾಡು ಗಡಿ ಭಾಗವಾದ ದೋಣಿಮಡಗು ಗ್ರಾಪಂಗೆ ಬೆಳಗ್ಗೆ ಸಂಜೆ ಹೊರತುಪಡಿಸಿದರೆ ಉಳಿದ ದಿನವಿಡೀ ಖಾಸಗಿ ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಬೂದಿಕೋಟೆ, ಕಾಮಸಮುದ್ರ ಹೋಬಳಿ ಕೇಂದ್ರಗಳಿಗೆ ಪಟ್ಟಣದಿಂದ ಬೇತಮಂಗಲಕ್ಕೆ ಇರುವ ಸಿಟಿ ಬಸ್‌ಗಳ ಸೇವೆಯನ್ನು ವಿಸ್ತರಿಸಬೇಕು ಎನ್ನುವುದು ಪ್ರಯಾಣಿಕರ ಒತ್ತಾಯ.
ಆರೋಗ್ಯವಂತ ಸಮಾಜದ ಉಳಿವಿಗೆ ಪುಸ್ತಕ ಅಗತ್ಯ: ಸಿಎಂ ಸಿದ್ದರಾಮಯ್ಯ
ಉಚಿತ ಪ್ರಯಾಣದ ಭಾಗ್ಯ ಇಲ್ಲ: ಎಲ್ಲ ಗ್ರಾಮೀಣ ಪ್ರದೇಶದ ರಸ್ತೆಗಳೂ ಸಹ ಸಂಚಾರಕ್ಕೆ ಯೋಗ್ಯವಾಗಿಲ್ಲದ ಕಾರಣ ಆಟೋಗಳಲ್ಲಿ ಬರುವಾಗ ಅಪಘಾತಗಳು ಸಂಭವಿಸಿದರೂ ಕೇಳುವವರಿಲ್ಲದಂತಾಗಿದೆ. ಇಂತಹ ಸ್ಥಿತಿಯಲ್ಲಿ ಸರ್ಕಾರ ಕೆಂಪು ಬಸ್‌ಗಳಲ್ಲಿ ವಿದ್ಯಾರ್ಥಿನಿಯರು ಸೇರಿದಂತೆ ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡಿಯೂ ಪ್ರಯೋಜವಿಲ್ಲದಂತಾಗಿದೆ. ಪಟ್ಟಣದಿಂದ ಕಾಮಸಮುದ್ರ ಮಾರ್ಗವಾಗಿ ಆಂಧ್ರ, ತಮಿಳುನಾಡು ಗಡಿ ಭಾಗವಾದ ದೋಣಿಮಡಗು ಗ್ರಾಪಂಗೆ ಬೆಳಗ್ಗೆ ಸಂಜೆ ಹೊರತುಪಡಿಸಿದರೆ ಉಳಿದ ವೇಳೆಯಲ್ಲಿ ಖಾಸಗಿ ಬಸ್‌ಗಳ ದರ್ಬಾರು. ಬೂದಿಕೋಟೆ ಮಾರ್ಗದಲ್ಲಿಯೂ ಅದೇ ಪರಿಸ್ಥಿತಿ. ಇಲ್ಲಿ ಕೆಂಪು ಬಸ್ ಸೇವೆ ಅಷ್ಟಕಷ್ಟೆ, ಈ ಮಾರ್ಗದ ಜನರಿಗೆ ಆಟೋಗಳೇ ಗತಿ.
ಸಿರಿಗೆರೆ ತರಳಬಾಳು ಮಠಕ್ಕೆ ಎಸ್.ಎಸ್.ಮಲ್ಲಿಕಾರ್ಜುನ ಭೇಟಿ: ಶ್ರೀಗಳ ಆಶೀರ್ವಾದ ಪಡೆದ ಸಚಿವ
ಖಾಸಗಿ ಬಸ್ಸು ಪ್ರಯಾಣ ಅನಿವಾರ್ಯ: ಪಟ್ಟಣದಿಂದ ಮರವಳ್ಳಿ,ಹೊಸಕೋಟೆ,ಕೀಲುಕೊಪ್ಪ ಮಾರ್ಗದಲ್ಲಿ ಶಾಲಾ,ಕಾಲೇಜುಗಳಿಗೆ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳು ನಡೆದುಕೊಂಡೇ ಬರುವ ಸ್ಥಿತಿ ಇದೆ,ಇದೇ ಸ್ಥಿತಿ ಹರಟಿ, ಮಾವಹಳ್ಳಿ ಮಾರ್ಗದಲ್ಲಿಯೂ ನಿರ್ಮಾಣವಾಗಿದೆ, ಸರ್ಕಾರಕ್ಕೆ ಹಾಗೂ ಜನಪ್ರತಿನಿದಿಗಳ ಬಳಿ ಗ್ರಾಮಸ್ಥರು ಕೆಂಪು ಬಸ್‌ಗಳ ಸೇವೆ ಕಲ್ಪಿಸಿ ಎಂದು ಮನವಿ ಮಾಡಿದ್ದು ಕಸದ ಬುಟ್ಟಿಸೇರಿರುವುದರಿಂದ ವಿಧಿಯಿಲ್ಲದೆ ಖಾಸಗಿ ವಾಹನಗಳನ್ನು ಅವಲಂಬಿಸುವಂತಾಗಿದೆ.