Asianet Suvarna News Asianet Suvarna News

ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ಮಾಣ ಕಾಮಗಾರಿ ಆದೇಶ ಪತ್ರ ವಿತರಣೆ

ಭೂ ಕುಸಿತ ಹಾಗೂ ಪ್ರವಾಹದಿಂದ ಹಾನಿಗೊಳಗಾದ 17 ಗ್ರಾಮಗಳಲ್ಲಿನ 257 ಮನೆಗಳ ಪುನರ್ವಸತಿ ಕಾಮಗಾರಿಗೆ ಆದೇಶ ಪತ್ರವನ್ನು  ಫಲಾನುಭವಿಗಳಿಗೆ ವಿತರಿಸಲಾಗಿದೆ. ರಾಜ್ಯದಲ್ಲಿ ಪ್ರಥಮವಾಗಿ ಮನೆಗಳ ನಿರ್ಮಾಣ ಕಾಮಗಾರಿಗೆ ಆದೇಶ ಪತ್ರವನ್ನು ತಾಲೂಕಿನಲ್ಲಿ ನೀಡಲಾಗಿದೆ. ನದಿ ಬದಿಯಲ್ಲಿರುವ ಮನೆಗಳ ನಿವಾಸಿಗಳು ಸ್ಥಳಾಂತರವಾಗಲು ಬಯಸಿದರೆ ಅವರಿಗೂ ಪುನರ್‌ವಸತಿ ಕಲ್ಪಿಸಲು ಚಿಂತನೆ ನಡೆಸಲಾಗಿದೆ.

Housing Documents distribution to flood victims in Mangalore
Author
Bangalore, First Published Sep 25, 2019, 11:55 AM IST

ಮಂಗಳೂರು(ಸೆ.25): ಇತ್ತೀಚೆಗೆ ಸಂಭವಿಸಿದ ಭೀಕರ ಭೂ ಕುಸಿತ ಹಾಗೂ ಪ್ರವಾಹದಿಂದ ಹಾನಿಗೊಳಗಾದ 17 ಗ್ರಾಮಗಳಲ್ಲಿನ 257 ಮನೆಗಳ ಪುನರ್ವಸತಿ ಕಾಮಗಾರಿಗೆ ಆದೇಶ ಪತ್ರವನ್ನು  ಫಲಾನುಭವಿಗಳಿಗೆ ಶಾಸಕ ಹರೀಶ ಪೂಂಜ ಬೆಳ್ತಂಗಡಿಯ ಮಂಜುನಾಥೇಶ್ವರ ಕಲಾಭವನದಲ್ಲಿ ವಿತರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ತಾಲೂಕಿನಲ್ಲಿ ನೆರೆಯಿಂದ 170 ಮನೆಗಳು ಸಂಪೂರ್ಣ ಹಾನಿಯಾಗಿದ್ದು ಒಟ್ಟು 257 ಮನೆಗಳ ಪುನರ್ವಸತಿ ಕಾಮಗಾರಿಗೆ ಒಂದೂವರೆ ತಿಂಗಳೊಳಗೆ ಮುಂದಡಿ ಇಡಲಾಗಿದೆ. ಹೀಗಾಗಿ ರಾಜ್ಯದಲ್ಲಿ ಪ್ರಥಮವಾಗಿ ಮನೆಗಳ ನಿರ್ಮಾಣ ಕಾಮಗಾರಿಗೆ ಆದೇಶ ಪತ್ರವನ್ನು ತಾಲೂಕಿನಲ್ಲಿ ನೀಡಲಾಗಿದೆ. ನೆರೆ ಹಾವಳಿಯಿಂದಾಗಿ ತಾಲೂಕಿನಲ್ಲಿ ವಸತಿ ಕಳೆದುಕೊಂಡವರಿಗೆ ಶಾಶ್ವತವಾಗಿ ಮನೆ ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಕೊಲ್ಲೂರಿನಲ್ಲಿ ಡಿಜಿಪಿ ಕುಟುಂಬದಿಂದ ಚಂಡಿಕಾ ಹೋಮ

ರಾಜೀವ ಗಾಂಧಿ ವಸತಿ ಯೋಜನೆಯಡಿ ಕಾನೂನು ಸಡಿಲಗೊಳಿಸಿ ರಾಜ್ಯದಲ್ಲೇ ಮೊದಲಬಾರಿಗೆ ಕಾಮಗಾರಿಗೆ ಮುಂಗಡ ಹಣ ನೀಡಲಾಗುತ್ತಿದೆ. ರಾಜ್ಯ ಸರ್ಕಾರವು ಆರಂಭದಲ್ಲಿ ಒಂದು ಲಕ್ಷ ರು. ಬಿಡುಗಡೆ ಮಾಡಿದ್ದು, ಕಾಮಗಾರಿ ಆರಂಭದದ ಬಳಿಕ ಒಟ್ಟು 5 ಲಕ್ಷ ರು. ಗಳನ್ನು ಮನೆ ನಿರ್ಮಾಣಕ್ಕೆ ನೀಡಲಾಗುತ್ತದೆ. ಸಂತ್ರಸ್ತರು ಪರಿಹಾರವನ್ನು ಸದ್ವಿನಿಯೋಗಿಸುವಂತೆ ಮನವಿ ಮಾಡಿದರು.

ಮಕ್ಕಿ ನಿವಾಸಿಗಳ ಸ್ಥಳಾಂತರಕ್ಕೆ ಚಿಂತನೆ:

ಮಿತ್ತಬಾಗಿಲು ಗ್ರಾಮದ ಮಕ್ಕಿ ಪ್ರದೇಶದ ನಿವಾಸಿಗಳನ್ನು ಸ್ಥಳಾಂತರಿಸುವ ಚಿಂತನೆ ನಡೆಸಲಾಗಿದೆ. ಇವರ ಭೂಮಿ ಕಂದಾಯ ಇಲಾಖೆಗೆ ಸೇರಿದ್ದಾಗಿದ್ದು, ಸುತ್ತ ಮೀಸಲು ಅರಣ್ಯ ಇದ್ದು, ಅದಕ್ಕೆ ಹಸ್ತಾಂತರಿಸಿ, ಬಳಿಕ ಅರಣ್ಯ ಇಲಾಖೆ ಮೂಲಕ ಪರಿಹಾರ ಒದಗಿಸುವ ಕಾರ್ಯ ನಡೆಸಲಾಗುತ್ತಿದೆ. ಮಿತ್ತಬಾಗಿಲಿನ ಗಣೇಶ್ ನಗರದ 32 ಕುಟುಂಬಗಳನ್ನು ಸ್ಥಳಾಂತರಗೊಳಿಸಿ ಬದಲಿ ನಿವೇಶನ ಹಾಗೂ ಮನೆ  ಮಂಜೂರಾತಿಗೆ ಪ್ರಯತ್ನಿಸಲಾಗುತ್ತಿದೆ. ನದಿ ಬದಿಯಲ್ಲಿರುವ ಮನೆಗಳ ನಿವಾಸಿಗಳು ಸ್ಥಳಾಂತರವಾಗಲು ಬಯಸಿದರೆ ಅವರಿಗೂ ಪುನರ್‌ವಸತಿ ಕಲ್ಪಿಸಲು ಚಿಂತನೆ ನಡೆಸಲಾಗುತ್ತಿದೆ. ಈಗಾಗಲೇ
ಹಾನಿಗೊಳಗಾಗಿದ್ದು, ಪಟ್ಟಿಯಲ್ಲಿ ಹೆಸರು ಬಿಟ್ಟಿದ್ದರೆ ಮಾಹಿತಿ ನೀಡುವಂತೆ ಶಾಸಕರು ತಿಳಿಸಿದರು.

ಕೃಷಿ ಭೂಮಿಯ ಮರಳು ತೆರವಿಗೆ ಚಿಂತನೆ:

ಮಿತ್ತಬಾಗಿಲು, ಚಾರ್ಮಾಡಿ, ಕಡಿರುದ್ಯಾವರ  ಮೊದಲಾದ ಕಡೆಗಳಲ್ಲಿ ಕೃಷಿ ಭೂಮಿಗಳಿಗೆ ನೀರು ಗ್ಗಿ ಮರಳು ಆವರಿಸಿಕೊಂಡಿದೆ. ಇದರಿಂದ ಕೃಷಿ ನಾಶವಾಗಿದ್ದು ಅದರ ಅಭಿವೃದ್ಧಿಗೂ ಗಮನ ನೀಡಲಾಗುತ್ತಿದೆ. ಈಗಾಗಲೇ ಕೊಳಂಬೆ, ಅಂತರ ಭಾಗದಲ್ಲಿ ಉದ್ಯಮಿಗಳಾದ ರಾಜೇಶ್ ಪೈ ಮತ್ತು ಮೋಹನ್ ಉಜಿರೆ ತಂಡವು ಸಂತ್ರಸ್ತರ ನೆರವಿಗೆ ಅಭೂತಪೂರ್ವವಾಗಿ ಸ್ಪಂದಿಸಿದೆ. ಮುಂದಿನ ದಿನಗಳಲ್ಲಿ ಮನೆ ನಿರ್ಮಾಣ ಕಾರ್ಯಕ್ಕೂ ನೆರವು ಪಡೆಯಲಾಗುವುದು. ಕೃಷಿ ನಾಶವಾಗಿರುವ ಉಳಿದ ಕಡೆಗಳಲ್ಲೂ ತಂಡ ಮರಳು ತೆರವು ಕಾರ್ಯದ ಸಮೀಕ್ಷೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಅದನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.

ಮಂಗಳೂರು: 'ಮೈ ಬೀಟ್ ಮೈ ಪ್ರೈಡ್' ರಾಜ್ಯಕ್ಕೂ ವಿಸ್ತರಣೆ

ಜಿ.ಪಂ.ಸದಸ್ಯರಾದ ಸೌಮ್ಯಲತಾ ಜಯಂತ್ ಗೌಡ, ನಮಿತಾ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಸೆಬಾಸ್ಟಿಯನ್, ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಜಯರಾಮ್ ದಿಡುಪೆ, ಮತ್ತು ನೆರೆ ಸಂತ್ರಸ್ತರ ೧೭ 
ಗ್ರಾ.ಪಂ.ಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಂತ್ರಸ್ತರ ಮಾಹಿತಿ ತಿಳಿಸಿದರು.

ಪ್ರಮಾಣ ಪತ್ರ ಪಡೆದ ಸಂತ್ರಸ್ತ ಫಲಾನುಭವಿಗಳ ವಿವರ:

ಬಂದಾರು 6, ಚಾರ್ಮಾಡಿ 38, ಬೆಳಾಲು 1, ಧರ್ಮಸ್ಥಳ 1, ಇಂದಬೆಟ್ಟು 17, ಕಡಿರುದ್ಯಾವರ 13, ಕಳೆಂಜ 1, ಲಾಯಿಲ 11, ಮಲವಂತಿಗೆ 23, ಮಿತ್ತಬಾಗಿಲು 101, ಮುಂಡಾಜೆ 2, ನಡ 3, ನಾವೂರ 12, ನೆರಿಯ 1, ಕಲ್ಮಂಜ (ನಿಡಿಗಲ್) 8, ಪಟ್ರಮೆ 4, ಪುದುವೆಟ್ಟು 8 ಗ್ರಾಮಗಳಲ್ಲಿ ಮನೆಗಳು ಹಾನಿಯಾಗಿದ್ದು ಸಂಪೂರ್ಣ ಹಾನಿಗೊಳಗಾದ 130 ಮನೆ, ತೀವ್ರ ಹಾನಿಗೊಳಗಾದ 54 ಮನೆ, ಭಾಗಶಃ ಹಾನಿಗೊಳಗಾದ 33 ಮನೆ, ಒಟ್ಟು 257 ಮನೆಗಳಲ್ಲಿ 250 ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ನೀಡಲಾಯಿತು.

ಮನೆ ನಿರ್ಮಾಣಕ್ಕೆ ಕಾಳಜಿ ಫ್ಲಡ್ ರಿಲೀಫ್ ಫಂಡ್ ವಿನಿಯೋಗ:

ಬೆಳ್ತಂಗಡಿ ಕಾಳಜಿ ಫ್ಲಡ್ ರಿಲೀಫ್ ಫಂಡ್‌ಗೆ ದಾನಿಗಳು ಹಾಗೂ ಉದ್ಯಮಿಗಳು ನೀಡಿದ ಆರ್ಥಿಕ ಸಹಾಯವನ್ನು ಸಂತ್ರಸ್ತರು ಹಾಗು ಸಮಿತಿ ಸಮಕ್ಷಮದಲ್ಲಿ ಚರ್ಚಿಸಿ ಮನೆ ನಿರ್ಮಾಣದ ಅವಶ್ಯಕತೆ
ಪೂರೈಸಲು ಸಂಪೂರ್ಣ ವಿನಿಯೋಗಿಸಲಾಗುವುದು. ಕೃಷಿ ನಾಶವಾದ ಭೂಮಿಯನ್ನು ದಾನಿಗಳ ಸಹಾಯದೊಂದಿಗೆ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಸ್ವಚ್ಛ ಭಾರತ್ ದಿವಸ್: ರಾಜ್ಯದಿಂದ 200 ಸಾಧಕರು ಆಯ್ಕೆ

Follow Us:
Download App:
  • android
  • ios