ಭಾರೀ ಮಳೆಗೆ ಮನೆಯು ಚಾವಣಿ ಕುಸಿದು ಇಬ್ಬರು ದುರ್ಮರಣ
ಭಾರೀ ಮಳೆ ಹಿನ್ನೆಲೆಯಲ್ಲಿ ಮನೆಯ ಚಾವಣಿ ಕುಸಿದು ಇಬ್ಬರು ದುರ್ಮರಣ ಹೊಂದಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ (ಅ.23): ಮನೆಯ ಚಾವಣಿ ಕುಸಿದು ಇಬ್ಬರು ಸಾವಿಗೀಡಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಲೆಯಾಗುತ್ತಿದ್ದು ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದ ವೈಜಕೂರು ಗ್ರಾಮದಲ್ಲಿ ಇಂದು ಬೆಳಗ್ಗೆ ಮನೆಯ ಚಾವಣಿ ಕುಸಿದು ಬಿದ್ದಿದೆ.
ಮನೆಯಲ್ಲಿ ರವಿಕುಮಾರ್ (45), ಮುನಿರಾಜ್ ಅಮ್ಮ (35), ರಾಹುಲ್ (13), ರಕ್ಷಿತಾ (11) ನಾಲ್ವರು ಮಲಗಿದ್ದ ವೇಳೆ ಛಾವಣಿ ಕುಸಿದಿದೆ. ಈ ವೇಳೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ರವಿಕುಮಾರ್ ಹಾಗೂ ರಾಹುಲ್ ಮೃತಪಟ್ಟಿದ್ದಾರೆ.
‘ಮಹಾಮಳೆ’ಗೆ ತೊಯ್ದು ತೊಪ್ಪೆಯಾದ ಬೆಂಗ್ಳೂರು: 23 ವರ್ಷದ 3ನೇ ಮಹಾಮಳೆ ..
ಮುನಿರಾಜ್ ಅಮ್ಮ ಹಾಗೂ ರಕ್ಷಿತಾಗೆ ಚಿಕಿತ್ಸೆ ಮುಂದುವರಿಸಲಾಗಿದೆ.
ಸ್ಥಳಕ್ಕೆ ಚಿಂತಾಮಣಿ ಶಾಸಕ ಜೆಕೆ ಕೃಷ್ಣಾರೆಢ್ಡಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು.