ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಬೈಕ್ ಗೆ ಬೆಂಕಿ, ಮನೆ ವಸ್ತುಗಳು ನಾಶ, ದೂರು ಕೊಡಲು ಶೋ ರೂಮ್ ಕೂಡ ಬಂದ್!
ಮಾಗಡಿಯಲ್ಲಿ ಮನೆಯೊಂದರಲ್ಲಿ ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು, ಮನೆಯಲ್ಲಿದ್ದ ವಸ್ತುಗಳು ಸುಟ್ಟು ಅಪಾರ ನಷ್ಟ ಸಂಭವಿಸಿದೆ. ಬೆಂಕಿ ನಂದಿಸಲು ಹೋದ ಬೈಕ್ ಮಾಲೀಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ರಾಮನಗರ (ಆ.19): ಮನೆಯಲ್ಲಿ ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಮನೆಯಲ್ಲಿದ್ದ ಎಲೆಕ್ಟ್ರಿಕ್ ವಸ್ತುಗಳು ಸುಟ್ಟು ಅಪಾರ ನಷ್ಟ ಸಂಭವಿಸಿರುವ ಘಟನೆ ಮಾಗಡಿ ಪಟ್ಟಣದಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ಪಟ್ಟಣದ ಕಲ್ಯಾಗೇಟ್ ಗವಿ ಗಂಗಾಧರೇಶ್ವರ ದೇವಸ್ಥಾನದ ಮುಖ್ಯರಸ್ತೆಯ ನಿವಾಸಿ ಲಕ್ಷ್ಮೀನರಸಿಂಹ ಭಾನುವಾರ ಮುಂಜಾನೆ 5 ಗಂಟೆಯಲ್ಲಿ ತಮ್ಮ ಎಲೆಕ್ಟ್ರಿಕ್ ಬೈಕ್‌ಗೆ ಚಾರ್ಜ್ ಹಾಕಿ ಮಲಗಿದ್ದಾರೆ. ಚಾರ್ಜ್ ಹಾಕಿದ ಅರ್ಧ ಗಂಟೆಗೆ ಸುಟ್ಟ ವಾಸನೆ ಬಂದಿದ್ದು, ಎದ್ದು ನೋಡುವಷ್ಟರಲ್ಲಿ ಬೆಂಕಿ ಹತ್ತಿಕೊಂಡಿತ್ತು.
ಮಾಗಡಿಗೆ ಹೇಮಾವತಿ ನೀರು: ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಆರಂಭಿಸಲು ಆಗ್ರಹ
ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ನೆರೆಹೊರೆಯವರ ಸಹಾಯದಿಂದ ಬೈಕ್ ಅನ್ನು ಮನೆಯ ಹೊರಗೆ ತಂದು ನಂದಿಸಲಾಯಿತು. ಈ ವೇಳೆ ಬೈಕ್ ಮಾಲೀಕರ ಕೈಕಾಲು, ಮುಖಕ್ಕೆ ಬೆಂಕಿ ತಗುಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದದಿದ್ದಾರೆ. ಬೈಕ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮನೆಯಲ್ಲಿದ್ದ ವಾಶಿಂಗ್ ಮಷಿನ್, ಯುಪಿಎಸ್ ಸೇರಿದಂತೆ ಪೀಠೋಪಕರಣಗಳು ಸಂಪೂರ್ಣ ನಾಶವಾಗಿದೆ.
ಲಕ್ಷ್ಮಿನರಸಿಂಹ ಅವರು ಮನೆಯಲ್ಲಿ 2 ಮಗ್ಗ ಹಾಕಿಕೊಂಡು ಬಟ್ಟೆ ನೇಯ್ದು ಜೀವನ ನಡೆಸುತ್ತಿದ್ದರು. ನೆರೆಹೊರೆಯವರು ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಬಾರಿ ಅನಾಹುತ ತಪ್ಪಿದೆ. ಬೈಕ್ ಜತೆಗೆ ಮನೆಯಲ್ಲಿದ್ದ ವಸ್ತುಗಳು ಹಾನಿಯಾಗಿ ಲಕ್ಷಾಂತರ ರು. ನಷ್ಟವಾಗಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 11: ಹೈದರಾಬಾದ್ ಪ್ರೋಮೋ ಶೂಟಿಂಗ್ ಸೆಟ್‌ನಿಂದ ಎರಡು ಫೋಟೋ ಲೀಕ್!
ಕಳೆದ ಎರಡು ವರ್ಷಗಳ ಹಿಂದೆ ಪಟ್ಟಣದ ಹೊಸಪೇಟೆಯಲ್ಲಿ ಎಲೆಕ್ಟ್ರಿಕ್ ಬೈಕ್ ಖರೀದಿ ಮಾಡಿದ್ದರು. ಈಗ ಎಲೆಕ್ಟ್ರಿಕ್ ಬೈಕ್ ಶೋರೂಮ್ ಅನ್ನು ಮುಚ್ಚಲಾಗಿದೆ. ಎಲೆಕ್ಟ್ರಿಕ್ ಬೈಕ್ ತಯಾರಿಕಾ ಕಂಪನಿ ಈ ರೀತಿ ಬೈಕ್ ಗಳು ಏಕಾಏಕಿ ಚಾರ್ಜ್ ಹಾಕಿರುವ ಸಮಯದಲ್ಲಿ ಸುಟ್ಟು ಹೋದರೆ ಬೈಕು ಖರೀದಿಸಿದ ಮಾಲೀಕರು ಏನಾಗಬೇಕು. ಗುಣಮಟ್ಟದ ಬ್ಯಾಟರಿಗಳನ್ನು ಅಳವಡಿಸಬೇಕು. ಈಗ ಮಾಗಡಿಯಲ್ಲಿ ಶೋ ರೂಮ್ ಕೂಡ ಇಲ್ಲದಿರುವುದರಿಂದ ನಾವು ಯಾರಿಗೆ ದೂರು ನೀಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಈ ಬಗ್ಗೆ ಮಾಗಡಿ ಠಾಣೆಯಲ್ಲಿ ದೂರು ನೀಡಲಾಗುತ್ತದೆ ಎಂದು ಬೈಕ್ ಮಾಲೀಕ ಲಕ್ಷ್ಮೀನರಸಿಂಹ ತಿಳಿಸಿದ್ದಾರೆ.