Asianet Suvarna News Asianet Suvarna News

ಕೋಲಾರ: 'ಆಶ್ರಯ' ನೀಡಿದ್ದ ಮನೆ ರಾತ್ರೋ ರಾತ್ರಿ ಧ್ವಂಸ..!

ಆಶ್ರಯ ಯೋಜನೆಯಡಿ ಸಿಕ್ಕಿದ್ದ ಮನೆಯನ್ನು ರಾತ್ರೋ ರಾತ್ರಿ ಕೆಡವಿ ಹಾಕಲಾಗಿದೆ. ಎರಡು ವರ್ಷಗಳಿಂದ ಆಶ್ರಮ ನೀಡಿದ್ದ ಮನೆಯನ್ನು ಜೆಸಿಬಿ ಕೆಲವೇ ನಿಮಿಷಗಳಲ್ಲಿ ಧರೆಗುರುಳಿಸಿದೆ.

house given under ashraya project demolished at midnight in kolar
Author
Bangalore, First Published Jan 7, 2020, 1:47 PM IST

ಕೋಲಾರ(ಜ.07): ಆಶ್ರಯ ಯೋಜನೆಯಡಿ ಸಿಕ್ಕಿದ್ದ ಮನೆಯನ್ನು ರಾತ್ರೋ ರಾತ್ರಿ ಕೆಡವಿ ಹಾಕಲಾಗಿದೆ. ಎರಡು ವರ್ಷಗಳಿಂದ ಆಶ್ರಮ ನೀಡಿದ್ದ ಮನೆಯನ್ನು ಜೆಸಿಬಿ ಕೆಲವೇ ನಿಮಿಷಗಳಲ್ಲಿ ಧರೆಗುರುಳಿಸಿದೆ.

ಮನೆಗೆ ಸಂಬಂಧಿಸಿ ವಿವಾದವಿದ್ದು, ತಾಯಿ ಮಗಳು ವಾಸಿಸುತ್ತಿದ್ದ ಮನೆ ರಾತ್ರೋ ರಾತ್ರಿ ಧ್ವಂಸವಾಗಿದೆ. ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಇಂದಿರಾನಗರದಲ್ಲಿ ಘಟನೆ ನಡೆದಿದ್ದು, ಯುವತಿ ಈಗ ಮನೆ ಇಲ್ಲದೆ ಬೀದಿಗೆ ಬಿದ್ದಿದ್ದಾರೆ.

ಮಕ್ಕಳ ಹೆತ್ತು ಲವರ್ ಜೊತೆ ಓಡಿಹೋದ ಪತ್ನಿ, ಮಕ್ಕಳನ್ನೇ ಮಾರೋಕೆ ಹೊರಟ ತಂದೆ..!

ಕಾವ್ಯ ಎಂಬ ಯುವತಿ ಆಶ್ರಯ ಯೋಜನೆಯಡಿ ನೀಡಲಾಗಿದ್ದ ಮನೆಯಲ್ಲಿ ವಾಸಿಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಆಶ್ರಯ ಮನೆಗೆ ಸಂಬಂಧಿಸಿದಂತೆ ಕಾವ್ಯ ತಾಯಿ ಜಯಮ್ಮ ಹಾಗೂ ವಿಜಯಮ್ಮ ಎಂಬುವರ ನಡುವೆ ವಿವಾದ ಏರ್ಪಟ್ಟಿತ್ತು. ವಿವಾದ ಕೋರ್ಟ್ ನಲ್ಲಿ ಬಾಕಿ ಇರುವಾಗಲೇ ರೌಡಿಗಳಿಂದ ಜೀವ ಬೆದರಿಕೆ ಹಾಕಿ ಯುವತಿ ಮೇಲೆ ಹಲ್ಲೆ ಮಾಡಿ  ಜೆಸಿಬಿಯಿಂದ ಮನೆ ಧ್ವಂಸ ಮಾಡಿರುವ ಆರೋಪ ಕೇಳಿ ಬಂದಿದೆ.

ಮನೆಯಲ್ಲಿದ್ದ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ಹಾನಿಯಾಗಿದ್ದು, ಯುವತಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಂಗಳೂರು ಗೋಲಿಬಾರ್: ಘಟನೆ ನೋಡಿದ್ರೆ ನೀವೂ ಸಾಕ್ಷಿ ಹೇಳಬಹುದು..!

Follow Us:
Download App:
  • android
  • ios