Asianet Suvarna News Asianet Suvarna News

ನಿಂತಿದ್ದ ಚಕ್ಕಡಿ ಮೇಲೆ ಶವವಿಟ್ಟು ಹೋದ ಸಿಬ್ಬಂದಿ

ಆಸ್ಪತ್ರೆ ಸಿಬ್ಬಂದಿಗಳು ಮೃತದೇಹವನ್ನು ಚಕ್ಕಡಿಯೊಂದರ ಮೇಲೆ ಇಟ್ಟು ಹೋದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ

Hospital Workers Put Dead Body On bull Cart Escape snr
Author
Bengaluru, First Published Oct 4, 2020, 7:30 AM IST
  • Facebook
  • Twitter
  • Whatsapp

ಹಾನಗಲ್ಲ (ಅ.04): ತಾಲೂಕಿನ ಬೈಚವಳ್ಳಿ ಗ್ರಾಮದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಚಕ್ಕಡಿ ಮೇಲಿಟ್ಟು ಹೋದ ವೀಡಿಯೋ ವೈರಲ್‌ ಆಗಿದ್ದು, ಆರೋಗ್ಯ ಇಲಾಖೆ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾರದ ಹಿಂದೆಯೇ ಈ ಘಟನೆ ನಡೆದಿದ್ದು, ಇದೀಗ ಆ ಕುರಿತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕ್ರೂಸರ್‌ ವಾಹನದಲ್ಲಿ ಪಿಪಿಇ ಕಿಟ್‌ ಹಾಕಿದ ಶವವನ್ನು ಪಿಪಿಇ ಕಿಟ್‌ ಧರಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ ತಂದು ಅದನ್ನು ಅಲ್ಲಿಯೇ ನಿಂತಿದ್ದ ಚಕ್ಕಡಿ ಮೇಲೆ ಹಾಕಿ ಹೋಗಿದ್ದಾರೆ. 

'ನಾವು ಹುಷಾರಾಗಿದ್ದೇವೆ, ನಮಗ್ಯಾಕೆ ಟೆಸ್ಟ್'? ಕೋವಿಡ್‌ ಟೆಸ್ಟ್‌ಗೆ ಮಾವುತರ ನಕಾರ

ಆದರೆ, ಅದು ಕೊರೋನಾ ಸಾವಲ್ಲ. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟವ್ಯಕ್ತಿಯ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಸ್ಥಳೀಯರು ಸೂಚಿಸಿದ ಜಾಗದಲ್ಲಿ ಶವ ಇಟ್ಟು ಹೋಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Follow Us:
Download App:
  • android
  • ios