ಹಾಸನ (ಫೆ.27): ಕೋವಿಶೀಲ್ಡ್‌ ಲಸಿಕೆ ಪಡೆದ 20 ದಿನಗಳ ನಂತರ ಆಸ್ಪತ್ರೆಯ ಡಿ ದರ್ಜೆ ನೌಕರನೊಬ್ಬ ಶುಕ್ರವಾರ ಮೃತಪಟ್ಟಿರುವ ಘಟನೆ ಹಾಸನನಲ್ಲಿ ನಡೆದಿದೆ. 

ಆದರೆ ಇಲ್ಲಿಯವರೆಗೂ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳಗಿಲ್ಲ. ಈ ಸಾವು ಹೃದಯ ಸಂಬಂಧಿ ಸಮಸ್ಯೆಯಿಂದ ಆಗಿರುವ ಸಾಧ್ಯತೆ ಇದ್ದು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಸಾವಿನ ನಿಜವಾದ ಕಾರಣ ಗೊತ್ತಾಗಬೇಕಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್‌ ತಿಳಿಸಿದ್ದಾರೆ. 

2 ನೆ ಅಲೆ ಅಲ್ಲ, ಸುನಾಮಿ...ಭೀತಿ ಹುಟ್ಟಿದ್ದೇಕೆ..? ...

ಹಾಸನ ಮಿಷನ್‌ ಆಸ್ಪತ್ರೆಯ ‘ಡಿ’ ದರ್ಜೆ ನೌಕರ ಸುರೇಶ್‌(44) ಮೃತಪಟ್ಟವರು. 15 ವರ್ಷಗಳಿಂದ ಸುರೇಶ್‌ ಹಾಗೂ ಪತ್ನಿ ಇಬ್ಬರೂ ಈ ಆಸ್ಪತ್ರೆಯಲ್ಲೆ ಕೆಲಸ ನಿರ್ವಹಿಸುತ್ತಿದ್ದಾರೆ. ಲಸಿಕೆ ಪಡೆದ ಬಳಿಕ ನಾನು ಲಸಿಕೆ ಪಡೆಯಬಾರದಿತ್ತು ಎಂದು ಸತೀಶ್‌ ನಮ್ಮ ಬಳಿ ಹೇಳಿಕೊಂಡಿದ್ದರು. ನಮಗೆ ಲಸಿಕೆ ಮೇಲೆಯೇ ಅನುಮಾನವಿದ್ದು ಸೂಕ್ತ ತನಿಖೆ ನಡೆಸಬೇಕೆಂದು ಮೃತನ ಸಂಬಂಧಿಕರು ಒತ್ತಾಯಿಸಿದ್ದಾರೆ.