ಕೋವಿಡ್ ಸಂದರ್ಭದಲ್ಲಿ ಮಹತ್ವದ ಕಾರ್ಯನಿರ್ವಹಿಸುತ್ತಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ  ಕೋವಿಡ್ ಕೇರ್ ಸೆಂಟರ್ ನಲ್ಲಿ‌ ಐದನೇ ದಿನವೂ ವಾಸ್ತವ್ಯ   ಕೋವಿಡ್ ಕೇರ್ ಸೆಂಟರಿನಲ್ಲಿ ಉಳಿದು ನಿರಂತರವಾಗಿ ಸೋಂಕಿತರಲ್ಲಿ ಧೈರ್ಯ ತುಂಬುತ್ತಿರುವ ಶಾಸಕ 

ದಾವಣಗೆರೆ (ಜೂ.09): ಕೋವಿಡ್ ಸಂದರ್ಭದಲ್ಲಿ ಮಹತ್ವದ ಕಾರ್ಯನಿರ್ವಹಿಸುತ್ತಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೋವಿಡ್ ಕೇರ್ ಸೆಂಟರ್ ನಲ್ಲಿ‌ ಐದನೇ ದಿನವೂ ವಾಸ್ತವ್ಯ ಹೂಡಿದ್ದರು. 

ದಾವಣಗೆರೆ ಜಿಲ್ಲೆಯಲ್ಲಿರುವ ಅರಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರಿನಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ವಾಸ್ತವ್ಯ ಹೂಡಿದ್ದು ಇಂದು ಬೆಳ್ಳಂಬೆಳ್ಳಿಗ್ಗೆ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರಿಗೆ ಯೋಗಾಭ್ಯಾಸ ಮಾಡಿಸಿದರು.

ಆಂಬುಲೆನ್ಸ್‌ಲ್ಲಿ ಕೋವಿಡ್ ಸೋಂಕಿತ ಶವ ತಾವೇ ಸಾಗಿಸಿದ ರೇಣುಕಾಚಾರ್ಯ .

ಸೋಂಕಿತರಿಗೆ ಯೋಗಾಭ್ಯಾಸ ಮಾಡಿಸಿ, ಬೆಳಗಿನ ಉಪಹಾರ ಬಡಿಸಿದ ರೇಣುಕಾಚಾರ್ಯ ಈ ಮೂಲಕ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಿದರು.

ಸೋಂಕಿತರ ಜೊತೆ 'ಭಜರಂಗಿ' ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ರೇಣುಕಾಚಾರ್ಯ .

ಕೋವಿಡ್ ಎರಡನೇ ಅಲೆ ಆರಂಭದಿಂದಲೂ ಕೂಡ ಸೋಂಕಿತರಿಗಾಗಿ ತಮ್ಮ ಕ್ಷೇತ್ರದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ರೇಣುಕಾಚಾರ್ಯ ಹಗಲು ರಾತ್ರಿ ಎನ್ನದೇ ಅವಿರತವಾಗಿ ಶ್ರಮಿಸುತ್ತಿದ್ದಾರೆ. 

ಆಕ್ಸಿಜನ್ ಪೂರೈಕೆಯಿಂದ - ಉಪ ಉಪಹಾರದ ವ್ಯವಸ್ಥೆ ಬಗ್ಗೆಯೂ ನಿಗಾ ವಹಿಸಿ ಕ್ಷೇತ್ರದಲ್ಲಿ ಅವಿರತವಾಗಿ ಸೋಂಕಿತರಿಗಾಗಿ ಶಾಸಕ ರೇಣುಕಾಚಾರ್ಯ ಕಾರ್ಯನಿರ್ವಹಿಸುತ್ತಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona