ಹನಿಟ್ರ್ಯಾಪ್‌ಗೆ ಒಳಗಾದ ಪತ್ರಕರ್ತ : ಇಬ್ಬರು ಅರೆಸ್ಟ್
ಪತ್ರಕರ್ತರೋರ್ವರು ಹನಿಟ್ರ್ಯಾಪ್ ಗೆ ಒಳಗಾದ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರ [ಸೆ.15]: ಆರ್‌ಟಿಐ ಕಾರ್ಯಕರ್ತರಾಗಿರುವ ಹವ್ಯಾಸಿ ಪತ್ರಕರ್ತರೊಬ್ಬರು ಹನಿಟ್ರ್ಯಾಪ್‌ಗೆ ಒಳಗಾಗಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಿದ್ದು, ಉಳಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಸಾಮಾಜಿಕ ತಾಣಗಳ ಮೂಲಕ ಜೆ.ಸಿ.ರಂಜಿತಾ ಎಂಬಾಕೆ ಟಿ.ವಿ. ವರದಿಗಾರ್ತಿ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದಾಳೆ. ಈ ನಡುವೆ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದ್ದು, ಹವ್ಯಾಸಿ ಪತ್ರಕರ್ತರನ್ನು ಆ.25ರಂದು ಬೆಂಗಳೂರು ದಕ್ಷಿಣದಲ್ಲಿರುವ ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗೊಲ್ಲಹಳ್ಳಿಯ ಸಿಯಾನ್ ರೆಸ್ಟೋ ಕೆಫೆಗೆ ಕರೆಸಿಕೊಂಡಿದ್ದಾಳೆ. ಕೆಫೆಯ ಕೊಠಡಿಯಲ್ಲಿ ರಂಜಿತಾ ಹಾಗೂ ಹವ್ಯಾಸಿ ಪತ್ರಕರ್ತ ಮಾತನಾಡುತ್ತಿದ್ದಾಗ ರಾಜ್ಯ ಕಾರ್ಮಿಕ ಸೇವಾ ಸಂಘದ ಅಧ್ಯಕ್ಷ ಸುರೇಶ್, ಶ್ರೀನಿವಾಸ್ ಹಾಗೂ ಇತರೆ ಐದಾರು ಮಂದಿ ಹವ್ಯಾಸಿ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಲ್ಲದೆ ಅವರನ್ನು ಹೆದರಿಸಿ ತಮಗೆ ಬೇಕಾದಂತೆ ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದಾರೆ. ನಂತರ ಅವರನ್ನು ಬೆಂಗಳೂರಿನ ಗೋವಿಂದರಾಜ ನಗರದಲ್ಲಿರುವ ಆರೋಪಿ ಶ್ರೀನಿವಾಸ್ಗೆ ಸೇರಿದ ಕಚೇರಿಗೆ ಕರೆದೊಯ್ದು 25 ಲಕ್ಷ ರು. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಂತಿಮವಾಗಿ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡಿ ಅವರಿಂದ 9 ಸಾವಿರ ರು. ನಗದು ಕಸಿದುಕೊಂಡಿದ್ದಾರೆ.