ಮೈಸೂರು (ನ.26):  ಮೊಬೈಲ್‌ ಪೋನ್‌ನಿಂದ ಕಳೆದುಹೋದ ಮೆಮೊರಿ ಕಾರ್ಡ್‌ನಲ್ಲಿದ್ದ ವಿಡಿಯೋ, ಫೋಟೋಗಳನ್ನು ಬಳಸಿಕೊಂಡು ವೈದ್ಯರೊಬ್ಬರನ್ನು ಹನಿಟ್ರ್ಯಾಪ್‌ ಮಾದರಿಯಲ್ಲಿ ಬ್ಲಾಕ್‌ಮೇಲ್‌ ಮಾಡಿ ಹಣ ಕೀಳುತ್ತಿದ್ದ ಯುವತಿ ಸೇರಿದಂತೆ 5 ಮಂದಿಯ ಗ್ಯಾಂಗ್‌ ಅನ್ನು ಮೈಸೂರಿನ ಕುವೆಂಪುನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ದಟ್ಟಗಳ್ಳಿ ನಿವಾಸಿ, ವೈದ್ಯ ಡಾ. ಪ್ರಕಾಶ್‌ಬಾಬು ರಾವ್‌ ಬ್ಲಾಕ್‌ಮೇಲ್‌ಗೆ ಒಳಗಾದವರು. ಇವರು ಪಿರಿಯಾಪಟ್ಟಣದಲ್ಲಿ ಕ್ಲಿನಿಕ್‌ ನಡೆಸುತ್ತಿದ್ದು, ಬಿಜೆಪಿ ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷರಾಗಿ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಮೊಬೈಲ್‌ನಲ್ಲಿದ್ದ ಮೆಮೊರಿ ಕಾರ್ಡ್‌ ಅನ್ನು ಹೇಗೊ ತೆಗೆದುಕೊಂಡು, ಅದರಲ್ಲಿದ್ದ ಅವರ ವೈಯಕ್ತಿಕ ವಿಡಿಯೋ, ಫೋಟೋಗಳನ್ನು ಬಳಸಿ ಗ್ಯಾಂಗ್‌ವೊಂದು ಬ್ಲಾಕ್‌ಮೇಲ್‌ ಮಾಡಿ ಹಣ ಪಡೆದು ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ನೇರಳಕುಪ್ಪೆ ಗ್ರಾಮದ ನವೀನ್‌, ಮಾಕೋಡು ಗ್ರಾಮದ ಶಿವರಾಜು, ಮುದ್ದನಹಳ್ಳಿಯ ಹರೀಶ್‌, ನಂದೀಪುರ ಗ್ರಾಮದ ವಿಜಿ ಹಾಗೂ ಹುಣಸೂರಿನ ಅನಿತಾ ಬಂಧಿತ ಆರೋಪಿಗಳು. ಪ್ರಮುಖ ಆರೋಪಿ ನೇರಳಕುಪ್ಪೆ ನವೀನ್‌ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಹಾಗೂ ಸಂಘಟನೆಯೊಂದರ ಜಿಲ್ಲಾಧ್ಯಕ್ಷ ಎಂದು ತಿಳಿದು ಬಂದಿದೆ.

ಮೆಮೊರಿ ಕಾರ್ಡ್‌ ಬ್ಲಾಕ್‌ಮೇಲ್‌

2019ರ ಡಿಸೆಂಬರ್‌ ಕೊನೆ ವಾರದಲ್ಲಿ ಡಾ. ಪ್ರಕಾಶ್‌ಬಾಬು ರಾವ್‌ ಅವರ ಮೊಬೈಲ್‌ನಲ್ಲಿದ್ದ ಮೆಮೊರಿ ಕಾರ್ಡ್‌ ಪಿರಿಯಾಪಟ್ಟಣದ ಕ್ಲಿನಿಕ್‌ನಲ್ಲಿ ಆಕಸ್ಮಿಕವಾಗಿ ಕಳೆದು ಹೊಗಿತ್ತು. ಅದರಲ್ಲಿ ಅವರ ವೈಯುಕ್ತಿಕ ವಿಡಿಯೋ, ಪೋಟೋಗಳಿದ್ದವು. ಎಷ್ಟುಹುಡುಕಿದರೂ ಕಾರ್ಡ್‌ ಸಿಕ್ಕಿರಲಿಲ್ಲ. ಹೀಗಿರುವಾಗ, 2020ರ ಜನವರಿಯಲ್ಲಿ ನವೀನ್‌ ದಟ್ಟಗಳ್ಳಿಯಲ್ಲಿರುವ ಮನೆ ಬಳಿ ತೆರಳಿ ಡಾ. ಪ್ರಕಾಶ್‌ಬಾಬು ರಾವ್‌ ಅವರಿಗೆ ಕರೆ ಮಾಡಿ, ಮನೆಯಿಂದ ಹೊರಗಡೆ ಕರೆದು ಮಾತನಾಡಿದ್ದಾನೆ. ಈ ವೇಳೆ ಇತರೆ ಆರೋಪಿಗಳಾದ ಶಿವರಾಜು ಮತ್ತು ಹರೀಶ್‌ ಇದ್ದರು.

ಶುಂಠಿ, ಚಿಕನ್ ಟಿಕ್ಕಾ ಮಸಾಲ, ಸ್ಕಾಚ್ ವಿಸ್ಕಿ: ಇಲ್ಲಿವೆ ನೋಡಿ 10 ವಿಚಿತ್ರ ಕಾಂಡೋಂ ಪ್ಲೇವರ್ಸ್! .

ನೀವು ಯಾವುದೋ ಮಹಿಳೆಯ ಜೊತೆ ಬೆಡ್‌ ರೂಂನಲ್ಲಿದ್ದಾಗ ತೆಗೆದ ವಿಡಿಯೋ ಇರುವ ಮೆಮೊರಿ ಕಾರ್ಡ್‌ ನನ್ನ ಬಳಿ ಇದ್ದು, ನಾನು ಹೇಳಿದಂತೆ ಕೇಳಿದರೆ ಕಾರ್ಡ್‌ ವಾಪಸ್‌ ಕೊಡುತ್ತೇನೆ. ಇಲ್ಲವಾದಲ್ಲಿ ವಿಡಿಯೋವನ್ನು ವಾಟ್ಸಪ್‌, ಫೇಸ್‌ಬುಕ್‌ಗಳಲ್ಲಿ ಕಳುಹಿಸಿ ನೀನು ಸಂಪಾದಿಸಿರುವ ಘನತೆ, ಗೌರವವನ್ನೆಲ್ಲ ಹರಾಜು ಹಾಕುವುದಾಗಿ, 1 ಕೋಟಿ ರು. ಕೊಟ್ಟರೆ ಮೆಮೊರಿ ಕಾರ್ಡ್‌ ಕೊಡುವುದಾಗಿ ನವೀನ್‌ ಬ್ಲಾಕ್‌ಮೇಲ್‌ ಮಾಡಿದ್ದಾನೆ. ಅಲ್ಲದೆ, ಮೊಬೈಲ್‌ಗೆ ಮೆಮೊರಿ ಕಾರ್ಡ್‌ ಹಾಕಿ, ಅದರಲ್ಲಿದ್ದ ವಿಡಿಯೋ ತೋರಿಸಿ ಹೋಗಿದ್ದಾರೆ.

ಸೆಕ್ಸ್‌ ಡಾಲ್‌ನ್ನು ಮದುವೆಯಾದ ಬಾಡಿ ಬಿಲ್ಡರ್..! ಇಲ್ನೋಡಿ ಫೋಟೋಸ್

ಇದರಿಂದ ಮರ್ಯಾದೆಗೆ ಅಂಜಿದ ವೈದ್ಯರು, ಕಳೆದ 10 ತಿಂಗಳಲ್ಲಿ ವಿವಿಧ ದಿನಾಂಕಗಳಲ್ಲಿ ಒಟ್ಟು . 31.30 ಲಕ್ಷ ಹಣವನ್ನು ನವೀನ್‌ ಮತ್ತು ಸಹಚರರಿಗೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಒಂದು ದಿನ ವೈದ್ಯರ ಕಾರನ್ನು ಹಿಂಬಾಲಿಸಿಕೊಂಡ ಬಂದ ನವೀನ್‌ ಮತ್ತು ಸಹಚರರು ಕಾರನ್ನು ಅಡ್ಡಗಟ್ಟಿಖಾಲಿ ಚೆಕ್‌ಗಳಿಗೆ ಸಹಿ ಹಾಕಿಸಿಕೊಂಡು, ವೈದ್ಯರ ಬಳಿಯಿದ್ದ ಹಣವನ್ನು ಕಿತ್ತುಕೊಂಡಿದ್ದಾರೆ.

ಮೆಮೊರಿ ಕಾರ್ಡ್‌ ಕೊಡುವುದಾಗಿ ಪದೇ ಪದೇ ನಂಬಿಸಿ ಹಣ ಪಡೆದು ಬ್ಲಾಕ್‌ಮೇಲ್‌ ಮಾಡುತ್ತಿದ್ದರಿಂದ ರೋಸಿಹೋದ ಡಾ. ಪ್ರಕಾಶ್‌ಬಾಬು ರಾವ್‌ ಪೊಲೀಸರಿಗೆ ತಡವಾಗಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮೈಸೂರಿನ ಕುವೆಂಪುನಗರ ಠಾಣೆಯ ಪೊಲೀಸರು ಯುವತಿ ಸೇರಿದಂತೆ 5 ಮಂದಿ ಆರೋಪಿಯನ್ನು ಬಂಧಿಸಿ ವಿಚಾರಣೆ ತೀವ್ರಗೊಳಿಸಿದ್ದಾರೆ.

ಬ್ಲಾಕ್‌ಮೇಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸೇರಿದಂತೆ 5 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಪ್ರಕರಣ ಸಂಪೂರ್ಣ ಮಾಹಿತಿ ನೀಡುವುದಾಗಿ ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಡಾ.ಎ.ಎನ್‌. ಪ್ರಕಾಶ್‌ಗೌಡ ತಿಳಿಸಿದ್ದಾರೆ.