ಬೆಂಗಳೂರು [ಡಿ.03]: ಆಟೋದಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರೋರ್ವರು ಬಿಟ್ಟ ವಸ್ತುವನ್ನು ಮರಳಿಸಿದ ಆಟೋ ಚಾಲಕನೋರ್ವನ ಪ್ರಾಮಾಣಿಕತೆಗೆ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

ಆಟೋದಲ್ಲಿ ಪ್ರಯಾಣಿಸುವಾಗ ಕಬಿತಾ ಪಾಂಡೆ ಎಂಬಾಕೆ ಬೆಲೆ ಬಾಳುವ ವಸ್ತುಗಳಿದ್ದ ತಮ್ಮ ಬ್ಯಾಗನ್ನು ಬಿಟ್ಟು ಹೋಗಿದ್ದರು. ಬ್ಯಾಗಿನಲ್ಲಿ ಐ ಫೋನ್ ಸೇರಿದಂತೆ ಹಲವು ರೀತಿಯ ವಸ್ತುಗಳಿದ್ದವು. 

ಎಲ್ಲಾ ಬೆಲೆ ಬಾಳುವ ವಸ್ತುಗಳನ್ನು ಬ್ಯಾಗು ಸಮೇತ ಮಾಲಕಿಗೆ ಆಟೋ ಚಾಲಕ  ಸಂತೋಷ್ ಮರಳಿ ನೀಡಿದ್ದಾರೆ. ಹೆಬ್ಬಾಳ ಠಾಣೆಗೆ ಎಲ್ಲಾ ವಸ್ತುಗಳನ್ನು ಒಪ್ಪಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಎಲ್ಲಾ ವಸ್ತುಗಳನ್ನು ಮರಳಿ  ಪೊಲೀಸರು ಮಾಲಕಿಗೆ ನೀಡಿದ್ದಾರೆ.  ಇದರಿಂದ ಆಟೋ ಚಾಲಕ ಸಂತೋಷ್ ಪ್ರಮಾಣಿಕತೆಗೆ ಮೆಚ್ಚಿದ ಪೊಲೀಸರು ಅವರಿಗೆ ಅಭಿನಂದಿಸಿದ್ದಾರೆ. 

ಈ ಹಿಂದೆಯೂ ಕೂಡ ಈ ರೀತಿಯ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇದೀಗ ಆಟೋ ಚಾಲಕನ ಪ್ರಾಮಾಣಿಕತೆ ಮಾಲಕಿಯೂ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.