ಬೆಂಗಳೂರು (ಫೆ.08):  ಆಟೋದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ .2.57 ಲಕ್ಷ ಹಣವನ್ನು ಠಾಣೆಗೆ ವಾಪಸ್‌ ತಂದು ಕೊಟ್ಟಚಾಲಕನನ್ನು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್‌ ಪಾಟೀಲ್‌ ಸನ್ಮಾನಿಸಿದ್ದಾರೆ.

ಚಾಮರಾಜಪೇಟೆಯ ಆನಂದಪುರ ನಿವಾಸಿ ಆಟೋ ಚಾಲಕ ಡಿ.ಮೋಹನ್‌ (54) ಹಣ ಮರಳಿಸಿ ಪ್ರಾಮಾಣಿಕತೆ ತೋರಿದವರು.

ಮುಂಬೈ ಮೂಲದ ಉದ್ಯಮಿ ಅಮರ್‌ ಕುಮಾರ್‌ ಎಂಬುವರು ಬಟ್ಟೆಖರೀದಿಗೆಂದು ನಗರಕ್ಕೆ ಬಂದಿದ್ದರು. ಗುರುವಾರ ಬೆಳಗ್ಗೆ 10.30ರ ಸುಮಾರಿಗೆ ಚಾಮರಾಜಪೇಟೆಯಿಂದ ಕಾಟನ್‌ಪೇಟೆಗೆ ಹೋಗಲು ಆಟೋ ಹತ್ತಿದ್ದರು. ಆಟೋದಿಂದ ಕೆಳಗೆ ಇಳಿಯುವಾಗ ಅಮರ್‌ ಹಣವಿದ್ದ ತಮ್ಮ ಬ್ಯಾಗ್‌ನ್ನು ಮರೆತು ಆಟೋದಲ್ಲಿ ಬಿಟ್ಟಿದ್ದರು. ಆತಂಕಗೊಂಡ ಅಮರ್‌ ಚಾಮರಾಜಪೇಟೆ ಠಾಣೆಗೆ ದೂರು ನೀಡಲು ಹೋಗಿದ್ದರು.

ಬೆಂಗಳೂರು; ಬೇರೆಯಾಗಿದ್ದ ಮಗುವನ್ನು ಕುಟುಂಬಕ್ಕೆ ಸೇರಿಸಿದ ಆಟೋ ಚಾಲಕ ಬೇಗ್ ...

ಇತ್ತ ಉದ್ಯಮಿ ಆಟೋದಲ್ಲಿ ಬ್ಯಾಗ್‌ ಬಿಟ್ಟು ಹೋಗಿದ್ದನ್ನು ಗಮನಿಸಿದ ಮೋಹನ್‌, ಪ್ರಯಾಣಿಕನಿಗಾಗಿ ಹುಡುಕಾಟ ನಡೆಸಿದ್ದರು. ಪ್ರಯಾಣಿಕ ಸಿಗದಿದ್ದಾಗ ಬ್ಯಾಗ್‌ ಸಮೇತ ಚಾಮರಾಜಪೇಟೆ ಠಾಣೆಗೆ ಬಂದಿದ್ದ ಮೋಹನ್‌, ಪೊಲೀಸರ ಬಳಿ ಪ್ರಯಾಣಿಕರೊಬ್ಬರು ಹಣದ ಬ್ಯಾಗ್‌ ಬಿಟ್ಟು ಹೋಗಿರುವ ವಿಷಯ ತಿಳಿಸಿದ್ದರು. ಹಣವಿದ್ದ ಬ್ಯಾಗ್‌ ವಾಪಸ್‌ ನೀಡಿದ ಚಾಲಕನನ್ನು ಡಿಸಿಪಿ ಸಂಜೀವ್‌ ಪಾಟೀಲ್‌ ಸನ್ಮಾನಿಸಿದ್ದಾರೆ.