ಪೋಲಿಂಗ್‌ ಅಧಿಕಾರಿಗಳಿಗೆ ‘ಹೋಂ ವೋಟಿಂಗ್‌’ ತರಬೇತಿ

ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಂದ 80 ವರ್ಷ ಮೇಲ್ಪಟ್ಟ6595 ಮತದಾರರು ಹಾಗೂ ವಿಶೇಷ ಚೇತನ ಮತದಾರರು 2845 ಸೇರಿ ಒಟ್ಟು 9,440 ಮತದಾರರು ಅಂಚೆ ಮತದಾನ ಮಾಡಲು ಇಚ್ಛಿಸಿದ್ದು, ಅರ್ಹ ಅಂಚೆ ಮತದಾರರ ಮಾಹಿತಿ ಪಡೆದು ಸೆಕ್ಟರ್‌ವಾರು ಮಾರ್ಗ ನಕ್ಷೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್‌.ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು

Home Voting  training for Polling Officers snr

 ತುಮಕೂರು :  ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಂದ 80 ವರ್ಷ ಮೇಲ್ಪಟ್ಟ6595 ಮತದಾರರು ಹಾಗೂ ವಿಶೇಷ ಚೇತನ ಮತದಾರರು 2845 ಸೇರಿ ಒಟ್ಟು 9,440 ಮತದಾರರು ಅಂಚೆ ಮತದಾನ ಮಾಡಲು ಇಚ್ಛಿಸಿದ್ದು, ಅರ್ಹ ಅಂಚೆ ಮತದಾರರ ಮಾಹಿತಿ ಪಡೆದು ಸೆಕ್ಟರ್‌ವಾರು ಮಾರ್ಗ ನಕ್ಷೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್‌.ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.

ತುಮಕೂರಿನ ಗುಬ್ಬಿ ವೀರಣ್ಣ ಕಲಾ ಮಂದಿರದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಸಂಬಂಧ ಹೋಂ ವೋಟಿಂಗ್‌ ಕಾರ್ಯಕ್ಕೆ ನಿಯೋಜನೆಗೊಂಡಿರುವ ಪೋಲಿಂಗ್‌ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 85742 ಮಂದಿ ದಿವ್ಯಾಂಗ ಮತ್ತು 80+ ಮತದಾರರಿಗೆ 12 ಡಿ ಅರ್ಜಿಗಳನ್ನು ವಿತರಿಸಲಾಗಿದ್ದು, ಈ ಪೈಕಿ 9440 ಮತದಾರರು ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಇಚ್ಛಿಸಿದ್ದು, ಅವರುಗಳ ವಾಸ ಸ್ಥಳಕ್ಕೆ ಮತಗಟ್ಟೆಅಧಿಕಾರಿಗಳ ತಂಡ ಭೇಟಿ ನೀಡಿ ಅಂಚೆ ಮತ ಪತ್ರ ಮೂಲಕ ಹೋಂ ವೋಟಿಂಗ್‌ ಮಾಡಿಸುವ ಸಂಬಂಧ ಮತಗಟ್ಟೆಅಧಿಕಾರಿಗಳ ತಂಡ ಕಾರ್ಯ ನಿರ್ವಹಿಸುವುದು. ಅಂಚೆ ಮತಪತ್ರ ಮತದಾರರು ಮತ್ತು ಸೆಕ್ಟರ್‌ ಆಧಾರದ ಮೇಲೆ ಮಾರ್ಗ ನಕ್ಷೆಗಳನ್ನು ಸಿದ್ಧಪಡಿಸುವುದು, ಮತಗಟ್ಟೆಗಳಿಗೆ ಭೇಟಿ ನೀಡುವ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿಕೊಳ್ಳುವುದು, ಅನುಮೋದಿತ ಸೆಕ್ಟರ್‌ ಮಾರ್ಗ ನಕ್ಷೆಯನ್ನು ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳುವುದು ಎಂದು ವಿವರಿಸಿದರು.

ಇಬ್ಬರು ಚುನಾವಣಾಧಿಕಾರಿಗಳು, ಒಬ್ಬರು ಮೈಕ್ರೋ ಅಬ್ಸರ್ವರ್‌, ಒಬ್ಬ ಪೊಲೀಸ್‌ ಸಿಬ್ಬಂದಿ, ಒಬ್ಬ ವಿಡಿಯೋಗ್ರಾಫರ್‌ ಒಳಗೊಂಡ ಮತಗಟ್ಟೆಗೆ ತೆರಳುವ ತಂಡವನ್ನು ರಚಿಸಿಕೊಂಡು ನಮೂನೆ 12ಡಿ ರಲ್ಲಿ ದಾಖಲಿಸಿರುವ ಮತದಾರರ ವಿಳಾಸಕ್ಕೆ ತೆರಳುವುದು, ಮತದಾನದ ತಂಡವು ಅಂಚೆ ಮತದಾರರಿಗೆ ಮತದಾನಕ್ಕೆ ಆಗಮಿಸುವ ಬಗ್ಗೆ ಬಿಎಲ್‌ಒ ಎಸ್‌.ಎಂ.ಎಸ್‌. ಅಥವಾ ಅಂಚೆ ಮೂಲಕ ಮುಂಚಿತವಾಗಿ ತಿಳಿಸುವುದು. ಅಂಚೆ ಮತಪತ್ರವನ್ನು ಮತದಾರರಿಗೆ ವಿತರಿಸುವ ಮುನ್ನ ಸದರಿ ಮತದಾರರ ಹೆಸರು ದಾಖಲೆಗಳು ಮತಪಟ್ಟಿಯಲ್ಲಿ ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಎಂದು ಸೂಚಿಸಿದರು.

ಹೋಂ ವೋಟಿಂಗ್‌ ಪ್ರಕ್ರಿಯೆ ಏಪ್ರಿಲ್‌ 29 ರಿಂದ ಪ್ರಾರಂಭಿಸಿ ಮತದಾನ ಮಾಡುವ ಪ್ರಕ್ರಿಯೆಯನ್ನು ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ಕಟ್ಟುನಿಟ್ಟಾಗಿ ಕ್ರಮವಹಿಸಲು ಅವರು ಸೂಚಿಸಿದರು.

ಜಿಲ್ಲಾ ಪಂಚಾಯತ್‌ ಸಿಇಓ ಹಾಗೂ ಸ್ವೀಪ್‌ ಅಧ್ಯಕ್ಷೆ ಡಾ. ಕೆ. ವಿದ್ಯಾಕುಮಾರಿ ಹಾಗೂ 11 ವಿಧಾನಸಭಾ ಕ್ಷೇತ್ರಗಳ ಆರ್‌ಓ ಮತ್ತು ಇತರೆ ಪೋಲಿಂಗ್‌ ಅಧಿಕಾರಿಗಳು ತರಬೇತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜನರಲ್‌ ಅಬ್ಸರ್ವರ್‌ ನೇಮಕ

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಭಾರತ ಚುನಾವಣಾ ಆಯೋಗವು 132-ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಪಂಕಜ್‌ ಕುಮಾರ್‌ ಐಎಎಸ್‌ ರವರನ್ನು ಜನರಲ್‌ ಅಬ್ಸರ್ವರ್‌ರನ್ನಾಗಿ ನೇಮಿಸಿದ್ದು, ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ದೂರುಗಳಿದ್ದಲ್ಲಿ ದೂ.ವಾ.ಸಂ.7676186683ನ್ನು ಸಂಪರ್ಕಿಸಬೇಕೆಂದು 132-ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios