ಕೆರೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಹೋಂ ಕ್ವಾರಂಟೈನ್‌ನಲ್ಲಿದ್ದ ಯುವಕ| ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಿರೇನೆಲ್ಲೂರು ಗ್ರಾಮದಲ್ಲಿ ನಡೆದ ಘಟನೆ| ಲಾಕ್‌ಡೌನ್ ಆದ್ದರಿಂದ ಹುಬ್ಬಳ್ಳಿಯಲ್ಲಿದ್ದ ವ್ಯಕ್ತಿ ಸ್ವಗ್ರಾಮಕ್ಕೆ ಹಿಂದುರಿಗಿದ್ದ| ಬೇರೆಕಡೆಯಿಂದ ಬಂದಿದ್ದರಿಂದ ಪರಶುರಾಮನಿಗೆ ಹೋಂ ಕ್ವಾರಂಟೈನ್ ವಿಧಿಸಲಾಗಿತ್ತು|
ಪರಶುರಾಮ (35) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕೊರೋನಾ ಕಾರಣಕ್ಕಾಗಿ ಲಾಕ್‌ಡೌನ್ ಆದ್ದರಿಂದ ಹುಬ್ಬಳ್ಳಿಯಲ್ಲಿದ್ದ ಪರಶುರಾಮ ತನ್ನ ಸ್ವಗ್ರಾಮ ಹಿರೇನೆಲ್ಲೂರಿಗೆ ಬಂದಿದ್ದ.
ಕೆಲಸ, ಆಹಾರ ಸಿಗದೇ ಆಂಧ್ರಪ್ರದೇಶದಿಂದ ಹಾಸನಕ್ಕೆ ಕಾಲ್ನಡಿಗೆ!
ಬೇರೆಕಡೆಯಿಂದ ಬಂದಿದ್ದರಿಂದ ಪರಶುರಾಮನಿಗೆ ಹೋಂ ಕ್ವಾರಂಟೈನ್ ವಿಧಿಸಲಾಗಿತ್ತು. ಪರಶುರಾಮ ಗ್ರಾಮದ ಹಿರೇಕೆರೆಯಲ್ಲಿ ಶನಿವಾರ ಈಜಲು ಹೋಗಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಸಂಬಂಧ ಗ್ರಾಮಾಂತರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
