ಕೋಲಾರ(ಏ.13): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ಕೆಲಸವಿಲ್ಲದೆ, ಹೊಟ್ಟೆಗೆ ಅನ್ನವಿಲ್ಲದೆ, ಸಾರಿಗೆ ವ್ಯವಸ್ಥೆ ಇಲ್ಲದೆ ಸುಮಾರು 850 ಕಿ.ಮೀ. ದೂರದ ಸ್ವಂತ ಗ್ರಾಮಕ್ಕೆ ತೆರಳಲು 12 ವರ್ಷದ ಬಾಲಕನೊಬ್ಬ ಸೇರಿದಂತೆ ಇಬ್ಬರು ಕೂಲಿ ಕಾರ್ಮಿಕರು ನಡೆದುಕೊಂಡೇ ಹೊರಟಿದ್ದಾರೆ. ಹಾಸನ ಮೂಲದ ಗಣೇಶ್‌ ಹಾಗೂ 12 ವರ್ಷದ ವಿಕ್ರಮ್‌ ಎಂಬ ಬಾಲಕ ಆಂಧ್ರದ ವಿಜಯವಾಡದಲ್ಲಿ ತಮ್ಮ ಸಂಬಂಧಿಕರೊಬ್ಬರ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಬೇಕರಿ ಬಂದ್‌ ಆಗಿ ಕೆಲಸವಿಲ್ಲದಂತಾಯಿತು. ಸಾರಿಗೆ ವ್ಯವಸ್ಥೆ ಇಲ್ಲ. ಹೀಗಾಗಿ ಹಾಸನಕ್ಕೆ ಕಾಲ್ನಡಿಗೆ ಮೂಲಕ ತೆರಳಲು ನಿರ್ಧರಿಸಿ ಅಲ್ಲಿಂದ ಹೊರಟಿದ್ದಾರೆ. ಆರು ದಿನಗಳ ಬಳಿಕ ಕೋಲಾರದವರೆಗೂ ಸುಮಾರು 400 ಮೈಲು ದೂರ ಆಗಮಿಸಿದ್ದಾರೆ.

ಸೈಕಲ್‌ನಲ್ಲೇ 2000 ಕಿ.ಮೀ. ದೂರದ ಊರು ತಲುಪಿದ!

ಕೋಲಾರದ ಕೋಚಿಮುಲ್‌ ಡೇರಿ ಬಳಿ ಭಾನುವಾರ ಮಾಧ್ಯಮ ಪ್ರತಿನಿಧಿಗಳು ಇವರನ್ನು ಮಾತನಾಡಿಸಿದಾಗ ಕಾಲ್ನಡಿಗೆ ಸಾಹಸದ ಕಥೆ ಬೆಳಕಿಗೆ ಬಂದಿದೆ. ನಂತರ ಕೋಚಿಮುಲ್‌ ಡೇರಿ ಸಿಬ್ಬಂದಿ ಊಟ ನೀಡಿ ಬೆಂಗಳೂರಿಗೆ ಡೇರಿವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಬಾಲಕ ವಿಕ್ರಮ್‌ ಮಾತನಾಡಲು ಸಾಧ್ಯವಾಗದಷ್ಟುಬಳಲಿದ್ದನು. ಕಣ್ಣೀರು ಹಾಕತ್ತ ಊರಿಗೆ ಹೋಗಬೇಕು, ಅಪ್ಪ, ಅಮ್ಮನ್ನ ನೋಡಬೇಕು ಎಂದು ಅಳುತ್ತಲೇ ಹೇಳಿದ.

ಫೋಟೋ ಕ್ಯಾಪ್ಷನ್‌ 12ಕೆಎಲ್‌ಆರ್‌6; ಕೋಲಾರದ ಕೋಚಿಮುಲ್‌ ಡೇರಿ ಬಳಿ ಬಿಸಿಲಿನಲ್ಲಿ ನಡೆದು ಬರುತ್ತಿರುವ ಇಬ್ಬರು ಕಾರ್ಮಿಕರು.