Asianet Suvarna News Asianet Suvarna News

ಖಾಸಗಿ ಆಸ್ಪತ್ರೆಗಳಿಂದ ಹೋಂ ಕ್ವಾರಂಟೈನ್‌ ಪ್ಯಾಕೇಜ್‌

ಹೋಮ್‌ ಕ್ವಾರಂಟೈನ್‌ನಲ್ಲಿ ಇರುವವರಿಗೆ ಪ್ಯಾಕೇಜ್‌| ಬೆಂಗಳೂರಿನ ವಿವಿಧ ಖಾಸಗಿ ಆಸ್ಪತ್ರೆಗಳಿಂದ ಹೋಂ ಕ್ವಾರಂಟೈನ್‌ ಪ್ಯಾಕೇಜ್‌| ಸಂಘಟನೆಗಳಿಂದ ರೋಗಿಗಳಿಗೆ ಆ್ಯಂಬುಲೆನ್ಸ್‌, ಪ್ಲಾಸ್ಮಾ ನೆರವು| 

Home Quarantine Package From Private Hospitals in Bengaluru grg
Author
Bengaluru, First Published Apr 21, 2021, 8:37 AM IST

ಬೆಂಗಳೂರು(ಏ. 21): ಕೋವಿಡ್‌-19 ರಾಜ್ಯ ರಾಜಧಾನಿಯಲ್ಲಿ ಎಲ್ಲೆಡೆ ಅಸಹಾಯಕತೆಯ ವಾತಾವರಣ ಸೃಷ್ಟಿಸಿರುವ ಸಂದರ್ಭದಲ್ಲಿ ಕೆಲ ಸಂಘ ಸಂಸ್ಥೆಗಳು, ಜನರು ಮಾನವೀಯ ನೆರವು ನೀಡಲು ಮುಂದಾಗಿದ್ದಾರೆ. ಕೆಲವು ಸಂಸ್ಥೆಗಳು ಕೋವಿಡ್‌ ರೋಗಿಗಳಿಗೆ ಆ್ಯಂಬುಲೆನ್ಸ್‌, ಪ್ಲಾಸ್ಮಾ ಒದಗಿಸಲು ಮುಂದೆ ಬಂದಿದ್ದರೆ, ಇನ್ನು ಕೆಲವರು ಹೋಮ್‌ ಕ್ವಾರಂಟೈನ್‌ನಲ್ಲಿ ಇರುವವರಿಗೆ ಆಹಾರ ನೀಡುತ್ತಿದ್ದಾರೆ. ಕೆಲವು ಆಸ್ಪತ್ರೆಗಳು ಹೋಮ್‌ ಕ್ವಾರಂಟೈನ್‌ ಪ್ಯಾಕೇಜ್‌ಗಳನ್ನು ಆರಂಭಿಸಿವೆ.

ಮಣಿಪಾಲ ಆಸ್ಪತ್ರೆಯಿಂದ ಪ್ಯಾಕೇಜ್‌:

ಮಣಿಪಾಲ ಆಸ್ಪತ್ರೆಯು ಕೋವಿಡ್‌ ಕೇರ್‌ನ ನಾಲ್ಕು ಪ್ಯಾಕೇಜ್‌ಗಳನ್ನು ಹೊಂದಿದೆ. .14,000ದ 17 ದಿನದ ಪ್ಯಾಕೇಜ್‌ನಲ್ಲಿ 1 ಡಿಜಿಟಲ್‌ ಥರ್ಮಾಮೀಟರ್‌, 1 ಪಲ್ಸ್‌ ಅಕ್ಸಿಮೀಟರ್‌, 3 ಪದರಗಳ 10 ಮಾಸ್ಕ್‌, 1 ಪಿಪಿಇ ಕಿಟ್‌, 1 ಹ್ಯಾಂಡ್‌ ಸ್ಯಾನಿಟೈಸರ್‌ ಇರುತ್ತದೆ. ಪ್ರತಿ ದಿನ 5 ವಿಡಿಯೋ, 1 ವಿಡಿಯೋ ಡಯಟ್‌, 1 ಸಲ ನರ್ಸಿಂಗ್‌, 3 ಪಿಎಂಆರ್‌, 2 ಮನಶಾಸ್ತ್ರಜ್ಞರೊಂದಿಗೆ ಸಮಾಲೋಚನೆ ಇರುತ್ತದೆ.

17,000ಗಳ 17 ದಿನದ ಕಾರ್ಯಕ್ರಮದಲ್ಲಿ ಮೆಡಿಕಲ್‌ ಕಿಟ್‌ ಇರಲಿದ್ದು, ನಿತ್ಯವೂ 5 ವಿಡಿಯೋ, 1 ವಿಡಿಯೋ ಡಯಟ್‌, 3 ಪಿಎಂಆರ್‌, ಉಸಿರಾಟದ ವ್ಯಾಯಾಮ, 1 ಸಲ ನರ್ಸಿಂಗ್‌, 2 ಮನಶಾಸ್ತ್ರಜ್ಞರ ಸಮಾಲೋಚನೆ ಇರುತ್ತದೆ.
8,000ಗಳ 17 ದಿನದ ಪ್ಯಾಕೇಜ್‌ನಲ್ಲಿ ಮೆಡಿಲ್‌ ಕಿಟ್‌, ಪ್ರತಿ ದಿನ 3 ವಿಡಿಯೋ, 1 ವಿಡಿಯೋ ಡಯಟ್‌, 1 ಸಲ ನರ್ಸಿಂಗ್‌ ಸಮಾಲೋಚನೆ ಇರುತ್ತದೆ. 10,000ದ 17 ದಿನದ ಪ್ಯಾಕೇಜ್‌ನಲ್ಲಿ ಮೆಡಿಕಲ್‌ ಕಿಟ್‌. ಪ್ರತಿ ದಿನ 3 ವಿಡಿಯೋ, 1 ವಿಡಿಯೋ ಡಯಟ್‌, 1 ಸಲ ನರ್ಸಿಂಗ್‌ ಸಮಾಲೋಚನೆ ಇರುತ್ತದೆ. ಹೆಚ್ಚಿನ ಮಾಹಿತಿಗೆ 91004 14627.

ಹೋಂ ಕ್ವಾರಂಟೈನ್‌ಗೆ ಈಗ ಹೊಸ ಮಾರ್ಗಸೂಚಿ

ಸಕ್ರ ಆಸ್ಪತ್ರೆ

ಸಕ್ರ ಆಸ್ಪತ್ರೆಯು ಎರಡು ಪ್ಯಾಕೇಜ್‌ಗಳನ್ನು ಹೊಂದಿದೆ. 14 ದಿನದ .19,000ಗಳ ಪ್ಯಾಕೇಜ್‌ನಲ್ಲಿ ಮೆಡಿಕಲ್‌ ಕಿಟ್‌, ದಿನಕ್ಕೆ ಎರಡು ಬಾರಿ ನರ್ಸ್‌ಗಳಿಂದ ವರ್ಚುವಲ್‌ ಆಗಿ ಆರೋಗ್ಯ ವಿಚಾರಣೆ, 24 ಗಂಟೆಯೂ ನರ್ಸಿಂಗ್‌ ಹೆಲ್ಪ್‌ಲೈನ್‌, ನಾಲ್ಕು ಬಾರಿ ವೈದ್ಯರಿಂದ ವಿಡಿಯೋ, ಒಮ್ಮೆ ಡಯಟೀಷಿಯನ್‌, ಮನಶಾಸ್ತ್ರಜ್ಞರಿಂದ ಒಮ್ಮೆ ಸಮಾಲೋಚನೆ ಇರಲಿದೆ.

14 ದಿನದ .9,500ಗಳ ಪ್ಯಾಕೇಜ್‌ನಲ್ಲಿ ಮೆಡಿಕಲ್‌ ಕಿಟ್‌ಗಳನ್ನು ಪ್ರತ್ಯೇಕವಾಗಿ ಖರೀದಿಸಬೇಕು. ದಿನಕ್ಕೆ ಎರಡು ಬಾರಿ ನರ್ಸ್‌ಗಳಿಂದ ವರ್ಚುವಲ್‌ ಆಗಿ ಆರೋಗ್ಯ ವಿಚಾರಣೆ, 24 ಗಂಟೆಯೂ ನರ್ಸಿಂಗ್‌ ಹೆಲ್ಪ್‌ಲೈನ್‌, 4 ಬಾರಿ ವೈದ್ಯರಿಂದ ವಿಡಿಯೋ, ಒಮ್ಮೆ ಡಯಟೀಷಿಯನ್‌, ಮನಶಾಸ್ತ್ರಜ್ಞರಿಂದ ಒಮ್ಮೆ ಸಮಾಲೋಚನೆ, 14 ಬಾರಿ ನರ್ಸ್‌ಗಳಿಂದ ಟೆಲಿ ಆರೋಗ್ಯ ವಿಚಾರಣೆ. 080 4969 5080 / 63669 03269.

ಅಪೊಲೋ ಹೋಮ್‌ ಕೇರ್‌

ಅಪೊಲೋ ಹೋಮ್‌ ಕೇರ್‌ ಮೂರು ಪ್ಯಾಕೇಜ್‌ಗಳನ್ನು ಹೊಂದಿದೆ. ಪ್ರತಿ ದಿನಕ್ಕೆ .350ನ ಪ್ಯಾಕೇಜ್‌ನಲ್ಲಿ ಎರಡು ದಿನಕ್ಕೊಮ್ಮೆ ವೈದ್ಯರೊಂದಿಗೆ ಸಮಾಲೋಚನೆ, ಪ್ರತಿ ದಿನ ಅಪೊಲೋದ ಕೋವಿಡ್‌ ಸಮನ್ವಯಕಾರರಿಂದ ಟೆಲಿಕಾಲ್‌ ಸಮಾಲೋಚನೆ ಇರಲಿದೆ. ಪ್ರತಿ ದಿನಕ್ಕೆ .700ಗಳ ಪ್ಯಾಕೇಜ್‌ನಲ್ಲಿ ಎರಡು ದಿನಕ್ಕೊಮ್ಮೆ ವೈದ್ಯರೊಂದಿಗೆ ಸಮಾಲೋಚನೆ, ಪ್ರತಿ ದಿನ ಅಪೊಲೋದ ಕೋವಿಡ್‌ ಸಮನ್ವಯಕಾರರಿಂದ ಟೆಲಿ ಕಾಲ್‌, ಎರಡು ದಿನಕ್ಕೊಮ್ಮೆ ಪ್ರೇರಣೆದಾಯಿ ಚಟುವಟಿಕೆ, ವಾರಕ್ಕೊಮ್ಮೆ ಡಯಟಿಷಿಯನ್‌ರಿಂದ ಸಮಾಲೋಚನೆ, ವಾರಕ್ಕೊಮ್ಮೆ ಕೌನ್ಸಿಲಿಂಗ್‌, ಪುನಶ್ಚೇತನ ಕೌನ್ಸಿಲಿಂಗ್‌ ಇರಲಿದೆ. ಹೊಮ್‌ ಕಿಟ್‌ .5,999ಪ್ಯಾಕೇಜ್‌ ಇದೆ.

ಬಿಬಿಎಂಪಿ ಸೂಚಿತ ರೋಗಿಗಳ ಮೇಲೆ ಖಾಸಗಿ ಆಸ್ಪತ್ರೆಗಳ ದೌರ್ಜನ್ಯ..!

ಆರ್‌ಎಕ್ಸ್‌ಡಿಎಕ್ಸ್‌ ಆಸ್ಪತ್ರೆ

ಆರ್‌ಎಕ್ಸ್‌ಡಿಎಕ್ಸ್‌ ಆಸ್ಪತ್ರೆಯು 7 ದಿನಗಳ 3,500ಗಳ ಪ್ರತಿದಿನದ ಪ್ಯಾಕೇಜ್‌ನಲ್ಲಿ 2 ಬಾರಿ ವೈದ್ಯರೊಂದಿಗೆ ಸಮಾಲೋಚನೆ, 21 ಬಾರಿ ನರ್ಸ್‌ಗಳಿಂದ ವರ್ಚುವಲ್‌ ಆಗಿ ಪರಿಶೀಲನೆ, ಅತ್ಯಗತ್ಯವಾದ 1 ಮೆಡಿಕಲ್‌ ಕಿಟ್‌ ಹೊಂದಿದೆ.
7,000ಗಳ 11 ದಿನದ ಪ್ಯಾಕೇಜ್‌ನಲ್ಲಿ 4 ಬಾರಿ ವೈದ್ಯರೊಂದಿಗೆ ಸಮಾಲೋಚನೆ, 33 ಬಾರಿ ನರ್ಸ್‌ಗಳಿಂದ ವರ್ಚುವಲ್‌ ಆಗಿ ಪರಿಶೀಲನೆ, ಅತ್ಯಗತ್ಯವಾದ 1 ಮೆಡಿಕಲ್‌ ಕಿಟ್‌, ಪೋಷಕಾಂಶ ತಜ್ಞರು, ಮಾನಸಿಕ ಆರೋಗ್ಯ ತಜ್ಞರು, ಪಿಸಿಯೋಥೆರಪಿ ತಜ್ಞರೊಂದಿಗೆ ಒಮ್ಮೆ ಸಮಾಲೋಚನೆ ಇರಲಿದೆ.

8,000ಗಳ 15 ದಿನದ ಪ್ಯಾಕೇಜ್‌ನಲ್ಲಿ 6 ಬಾರಿ ವೈದ್ಯರೊಂದಿಗೆ ಸಮಾಲೋಚನೆ, 45 ಬಾರಿ ನರ್ಸ್‌ಗಳಿಂದ ವರ್ಚುವಲ್‌ ಆಗಿ ಪರಿಶೀಲನೆ, ಅತ್ಯಗತ್ಯವಾದ 1 ಮೆಡಿಕಲ್‌ ಕಿಟ್‌, ಪೋಷಕಾಂಶ ತಜ್ಞರು, ಮಾನಸಿಕ ಆರೋಗ್ಯ ತಜ್ಞರು, ಪಿಸಿಯೋಥೆರಪಿ ತಜ್ಞರೊಂದಿಗೆ ಒಮ್ಮೆ ಸಮಾಲೋಚನೆ ಇರಲಿದೆ. ಹೆಚ್ಚಿನ ಮಾಹಿತಿಗೆ 90140 91111 ಅನ್ನು ಸಂಪರ್ಕಿಸಬಹುದು.

ದಿ ಬೆಂಗಳೂರು ಹಾಸ್ಟಿಟಲ್ಸ್‌

ದಿ ಬೆಂಗಳೂರು ಹಾಸ್ಪಿಟಲ್ಸ್‌ 1500 ಪ್ಯಾಕೇಜ್‌ ಹೊಂದಿದ್ದು, ಪ್ರತಿ ದಿನ 10 ನಿಮಿಷಗಳ ಕಾಲ ವೈದ್ಯರಿಂದ ಆನ್‌ಲೈನ್‌, ಪಿಸಿಯೋಥೆರಪಿಸ್ಟ್‌, ಡಯಟಿಷಿಯನ್‌ ಡಯಟ್‌ ಸಮಾಲೋಚನೆ ಇರಲಿದೆ. ಮಾಹಿತಿಗೆ 99450 90017/98450 32569.

ಮರ್ಸಿ ಮಿಷನ್‌

ಮರ್ಸಿ ಮಿಷನ್‌ ಎಂಬ 25 ಸ್ವಯಂ ಸೇವಾ ಸಂಘಟನೆಗಳ ಒಕ್ಕೂಟ ಸಹಾಯವಾಣಿಯೊಂದನ್ನು ತೆರೆದಿದ್ದು, ಆ್ಯಂಬುಲೆನ್ಸ್‌, ಪ್ಲಾಸ್ಮಾ, ಆಮ್ಲಜನಕ ಅಗತ್ಯವಿರುವ ಕೋವಿಡ್‌ ರೋಗಿಗಳ ನೆರವಿಗೆ ಧಾವಿಸುತ್ತಿದೆ. ಹಾಗೆಯೇ ಕೋವಿಡ್‌ನಿಂದ ಮರಣವನ್ನಪ್ಪಿದವರಿಗೆ ಈ ಸಂಘಟನೆ ಗೌರವಯುತ ಅಂತ್ಯಸಂಸ್ಕಾರ ನಡೆಸಿದ ಉದಾಹರಣೆ ಇದೆ. 86608 56709.

ಅಡುಗೆ ಮನೆ

ಗಿರಿನಗರದಲ್ಲಿರುವ ‘ಅಡುಗೆ ಮನೆ’ಯು ಹೋಮ್‌ ಕ್ವಾರಂಟೈನ್‌ನಲ್ಲಿರುವ ಕೋವಿಡ್‌ ರೋಗಿಗಳಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡುತ್ತಿದೆ. .4,000ಕ್ಕೆ 7 ದಿನದ ಪ್ಯಾಕೇಜ್‌ ಎಂದು ಆಡುಗೆ ಮನೆಯ ರೂವಾರಿ ಮೈತ್ರೇಯಿ ಹೇಳುತ್ತಾರೆ. 78924 03742 ಅಥವಾ 99164 35389.

ಮಿಷನ್‌ ಚಾಯ್‌

ಮಿಷನ್‌ ಚಾಯ್‌ ಕೋವಿಡ್‌ ರೋಗಿಗಳಿಗೆ ಡೆಲಿವರಿ ಶುಲ್ಕ ಮಾತ್ರ ಪಡೆದು ಸಸ್ಯಾಹಾರಿ ಆಹಾರ ನೀಡುತ್ತಿದೆ. ಸದ್ಯ ಓಲ್ಡ್‌ ಏರ್‌ಪೋರ್ಟ್‌ ರಸ್ತೆಯ ಸಮೀಪದ ಪ್ರದೇಶಗಳಿಗೆ ಮಾತ್ರ ಸೇವೆ ನೀಡಲಾಗುತ್ತಿದೆ. ಮಿಷನ್‌ ಚಾಯ್‌ನ ರಾಕೇಶ್‌ ನಯ್ಯರ್‌ ಅವರನ್ನು 9448385243, 9740284849 ಸಂಪರ್ಕಿಸಿ.
 

Follow Us:
Download App:
  • android
  • ios