ಕಲಬುರಗಿ(ಏ.11): ಕೊರೋನಾ ಭೀತಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಬಿಎಂಎಸ್‌ ವೈದ್ಯ ಡಾ.ರಿತ್ತಿ ಎಂಬುವವರನ್ನೇ ಹೋಂ ಕ್ವಾರಂಟೈನ್‌ ಆಗಿ ಮಾಡಿದೆ! ಮೂಲತಃ ಗದಗ ಜಿಲ್ಲೆಯವರಾಗಿರುವ ಡಾ.ಹಣಮರೆಡ್ಡಿ ವೆಂಕರೆಡ್ಡಿ ರಿತ್ತಿ ಇವರು ತಮ್ಮ ಮಗಳಿಗೆ ಹುಶಾರಿಲ್ಲವೆಂದು ತಿಳಿದು ನೋಡಿಕೊಂಡು ಬರಲು ಕಳೆದ 10 ದಿನಗಳ ಹಿಂದೆ ಗದಗಗೆ ಹೋಗಿದ್ದರು.

ಏ.8ರಂದು ಬೆಳಗ್ಗೆ ಮಣ್ಣೂರಿಗೆ ಮರಳಿ ವಾಪಸ್‌ ಬಂದಾಕ್ಷಣ ಇವರ ಆಸ್ಪತ್ರೆಗೆ ಮಣ್ಣೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಆದೇಶದ ಮೇರೆಗೆ ಸಿಬ್ಬಂದಿಗಳು, ಪೋಲಿಸ್‌ ಇಲಾಖೆ ಅಧಿಕಾರಿಗಳು, ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರೆಲ್ಲರೂ ಭೇಟಿ ನೀಡಿ ಪರಿಶೀಲನೆ ಮಾಡಿ ಕೈಗೆ ಮುದ್ರೆ ಹಾಕಿ ಇವರನ್ನು 14 ದಿವಸಗಳ ಕಾಲ ಆಸ್ಪತ್ರೆ- ಮನೆಯಿಂದ ಹೊರಗೆ ಬರದಂತೆ ಹೋಂ ಕ್ವಾರೆಂಟೈನ್‌ ಮಾಡಿದ್ದಾರೆ.

ಗ್ರಾಮ ಪಂಚಾಯತ್ ಅಧ್ಯಕ್ಷೆ, ಪಿಡಿಒ ಸೇರಿ 44 ಮಂದಿಗೆ ಕ್ವಾರಂಟೈನ್‌

ಗದಗ ಜಿಲ್ಲೆಗೆ ಹೋಗಿ ಬಂದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ನೀವು ಮನೆಯಲ್ಲಿ ಇರಬೇಕಾಗುತ್ತದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಡಾ.ರಿತ್ತಿ ಅವರಿಗೆ ವಿವರಿಸಿದಾಗ ಇದಕ್ಕೆ ಅವರೂ ಸಹಮತಿಸಿದ್ದು ಮುಂದಿನ 14 ದಿನಗಳ ಕಾಲ ಕ್ವಾರಂಟೈನ್‌ ಇರೋದಾಗಿ ಹೇಳಿದ್ದಾರೆ.