ಬೆಂಗಳೂರು(ಮೇ.15): ಬೆಂಗಳೂರು ಸಿಟಿ ಪೊಲೀಸರು ಕೋವಿಡ್‌-19 ವಿರುದ್ಧ ಆರಂಭಿಸಿರುವ ‘ಮಾಸ್ಕ್‌ ಆಫ್‌ ಬೆಂಗಳೂರು’ ಎಂಬ ಅಭಿಯಾನಕ್ಕೆ ಪ್ರತಿಯೊಬ್ಬರು ಕೈ ಜೋಡಿಸುವ ಮೂಲಕ ಕೊರೋನಾ ಯುದ್ಧದ ವಿರುದ್ಧ ಗೆಲುವು ಸಾಧಿಸೋಣ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಸಾರ್ವಜನಿಕರ ದೃಷ್ಟಿಯಿಂದ ನಗರ ಪೊಲೀಸರು ಆರಂಭಿಸಿರುವ ‘ಮಾಸ್ಕ್‌ ಆಫ್‌ ಬೆಂಗಳೂರು’ ಅಭಿಯಾನ ಉತ್ತಮವಾಗಿದೆ ಎಂದು ಇದೇ ವೇಳೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕ್ವಾರಂಟೈನ್‌: 'ನಾನ್‌ವೆಜ್‌ ಕೇಳಿದ್ರೆ, ವೆಜ್‌ ಊಟ ಕೊಡ್ತಾರೆ, ಮಹಿಳೆಯ ಆಕ್ರೋಶ'

ಅಭಿಯಾನದ ವೇಳೆ ಮಾತನಾಡಿದ ಅವರು, ಕೊರೋನಾ ಮಹಾಮಾರಿಯನ್ನು ಹೊಡೆದು ಓಡಿಸಲು ಹಲವು ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮಾಸ್ಕ್‌ಗಳನ್ನು ಧರಿಸುವ ಮೂಲಕ ಕೊರೋನಾದಿಂದ ದೂರು ಇದ್ದು, ಸುರಕ್ಷಿತವಾಗಿ ಇರಲು ಸಾಧ್ಯ. ಜತೆಗೆ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹಾಗಿದ್ದಾಗ ಮಾತ್ರ ಸಂಪೂರ್ಣವಾಗಿ ಮಹಾಮಾರಿಯಿಂದ ಸುರಕ್ಷಿತವಾಗಿರಬಹುದು. ಹೀಗಾಗಿ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.