* ಕಳೆದೊಂದು ವಾರದಿಂದ ಸ್ವಾಮೀಜಿಗಳ ಭೇಟಿ* ಇಂದು ಬೆಂಗಳೂರಿನಲ್ಲಿ ಸಭೆ ಕರೆದಿರುವ ಮಠಾಧೀಶರು * ನಾಯಕತ್ವ ಬದಲಾವಣೆ ವಿಚಾರ ಕೇವಲ ಊಹಾಪೋಹ  

ಹುಬ್ಬಳ್ಳಿ(ಜು.25): ಪಕ್ಷದ ಹೈಕಮಾಂಡ‌ ಹೇಳಿದನ್ನು ಪಾಲಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಬರು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಸದ್ಯದ ಪರಿಸ್ಥಿಯಲ್ಲಿ ನಮ್ಮ ಆದ್ಯತೆ ಪ್ರವಾಹದ ಕಡೆಯಾಗಿದೆ. ಭಾರೀ ಮಳೆಯಿಂದಾಗಿ ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಮುಖ್ಯಮಂತ್ರಿಗಳು,‌ ನಾವು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಬೆಂಗಳೂರಿನಲ್ಲಿ ಇಂದು ಮಠಾಧೀಶರು ಸಭೆ ನಡೆಸುತ್ತಿರುವ ಬಗ್ಗೆ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದು ಒಂದು ವಾರದಿಂದ ಸ್ವಾಮೀಜಿಗಳು ಭೇಟಿಯಾಗುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ಇಂದು ಬೆಂಗಳೂರಿನಲ್ಲಿ ಮಠಾಧೀಶರು ಸಭೆ ಕರೆದಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ. 

ಜೋಶಿ ಮನೆಗೆ ಬೊಮ್ಮಾಯಿ ದಿಢೀರ್‌ ಭೇಟಿ: ಗೌಪ್ಯ ಸಭೆ ನಡೆಸಿದ ಉಭಯ ನಾಯಕರು..!

ನಾಯಕತ್ವ ಬದಲಾವಣೆ ವಿಚಾರ ಕೇವಲ ಊಹಾಪೋಹ ಅಷ್ಟೇ, ನಾಯಕತ್ವದ ಬದಲಾವಣೆ ಪ್ರಶ್ನೆಗಳಿಗೆ‌ ನಾನು ಉತ್ತರ ನೀಡುವುದಿಲ್ಲ. ಸಿಎಂ ಹುದ್ದೆ ನನ್ನ ಹೆಸರು ಕೇಳಿ ಬರುತ್ತಿರೋದು ಸಹ ಊಹಾಪೋಹವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.