ಗನ್ ಹಿಡಿದು ಶೂಟ್ ಮಾಡಿದ ಗೃಹ ಸಚಿವ ಆರಗ..!
* ಫೈರಿಂಗ್ ಸಿಮ್ಯುಲೇಟರ್ ಉದ್ಘಾಟಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ
* ಮೊದಲ ಯತ್ನದಲ್ಲೇ ನಿಗದಿತ ಗುರಿಗೆ ಗುಂಡು ಹಾರಿಸುವಲ್ಲಿ ಯಶಸ್ವಿಯಾದ ಸಚಿವರು
* ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿ
ಮೈಸೂರು(ಆ.28): ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶುಕ್ರವಾರ ಭೇಟಿ ನೀಡಿ, ಪೊಲೀಸ್ ಪ್ರಶಿಕ್ಷಣಾರ್ಥಿಗಳ ತರಬೇತಿ ಕಾರ್ಯ ಚಟುವಟಿಕೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಫೈರಿಂಗ್ ಸಿಮ್ಯುಲೇಟರ್ ಉದ್ಘಾಟಿಸಿ ಗನ್ ಹಿಡಿದು ಫೈರಿಂಗ್ ಮಾಡಿದರು. ಮೊದಲ ಯತ್ನದಲ್ಲೇ ನಿಗದಿತ ಗುರಿಗೆ ಗುಂಡು ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಲಿ : ಮಾಲವಿಕಾ ಆಕ್ರೋಶ
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಎನ್‌ಸಿಸಿ ವಿದ್ಯಾರ್ಥಿಯಾಗಿದ್ದೆ. ಆಗ ಫೈರಿಂಗ್ ಕಲಿತಿದ್ದೆ. ಬಹುಮಾನ ಕೂಡ ಪಡೆದಿದ್ದೆ ಎಂದು ಹೇಳಿದ್ದಾರೆ.