Asianet Suvarna News Asianet Suvarna News

ವಾಹನ ಟೋಯಿಂಗ್: ಟ್ರಾಫಿಕ್ ಪೊಲೀಸರಿಗೆ ಮಹತ್ವದ ಸೂಚನೆ ಕೊಟ್ಟ ಗೃಹ ಸಚಿವ

* ಬೆಂಗಳೂರಿನಲ್ಲಿ ವಾಹನ ಟೋಯಿಂಗ್ ಗಲಾಟೆ
* ಹೆಚ್ಚುವರಿ ಆಯುಕ್ತ (ಸಂಚಾರ) ಜತೆ ಸಭೆ ನಡೆದ ಗೃಹ ಸಚಿವ
* ಟ್ರಾಫಿಕ್ ಪೊಲೀಸರಿಗೆ ಗೃಹ ಸಚಿವ ಖಡಕ್ ಸೂಚನೆ

home minister araga jnanendra directs to bengaluru Traffic police Over vehicle towing rbj
Author
Bengaluru, First Published Sep 3, 2021, 4:57 PM IST

ಬೆಂಗಳೂರು, (ಸೆ.03): ನಗರದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ನೆಪದಲ್ಲಿ ವಾಹನ  ಟೋಯಿಂಗ್ ಸಿಬ್ಬಂದಿಗಳಿಂದ, ಸಾರ್ವಜನಿಕರಿಗಾಗುತ್ತಿರುವ ಕಿರುಕುಳದ ಆರೋಪಗಳು ಕೇಳಿಬರುತ್ತಿವೆ. ಸಾರ್ವಜನಿಕರು ಹಾಗೂ ಟೋಯಿಂಗ್ ನಡುವೆ ದೊಡ್ಡ ಬೀದಿ ರಂಪಾಟಗಳೇ ನಡೆದ ಉದಾಹರಣೆಗಳಿವೆ.

ಈ ಹಿನ್ನೆಲೆಯಲ್ಲಿ ಈ ಬಗ್ಗೆ ಗೃಹ ಸಚಿವ  ಆರಗ ಜ್ಞಾನೇಂದ್ರ ಇಂದು (ಸೆ.03) ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಹೆಚ್ಚುವರಿ ಆಯುಕ್ಗ (ಸಂಚಾರ) ಶ್ರೀ ರವಿಕಾಂತೇಗೌಡ ಅವರ ಜೊತೆ ಸಭೆ ನಡೆಸಿದರು. ಇನ್ನು ಮುಂದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ತೆಗೆದು ಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. 

ಟ್ರಾಫಿಕ್ ರೂಲ್ಸ್: ದಂಡ ವಸೂಲಿ ಮಾಡುವುದಿಲ್ಲ ಎಂಬ ಸುದ್ದಿ ಸುಳ್ಳು

ಯಾವುದೇ ವಾಹವನವನ್ನು ಟೋಯಿಂಗ್ ಮಾಡುವ ಪೂರ್ವದಲ್ಲಿ ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ವಾಹನ ಮಾಲೀಕರ ಗಮನ
ಸೆಳೆಯಲು  ಸೈರನ್ ಅಥವಾ ಹಾರ್ನ್ ಮಾಡಬೇಕು ಹಾಗೂ ವಾಹನ ಟೋಯಿಂಗ್ ಮಾಡಬೇಕಾದ ಸಂದರ್ಭದಲ್ಲಿ ತೆಗೆಳುಕೊಳ್ಳಬೇಕಾದ 
ಎಲ್ಲಾ ನಿಯಾಮಾವಳಿಗಳನ್ನು  ಚಾಚೂ ತಪ್ಪದೆ ಅನುಸರಿಸಬೇಕು ಎಂದು ಸೂಚಿಸಿದರು.

ಏಷ್ಯಾನೆಟ್ ಸುವರ್ಣನ್ಯೂಸ್ ಇಂಪಾಕ್ಟ್; ವಾಹನ ಟೋಯಿಂಗ್ ಹೊಸ ನಿಯಮ ಪ್ರಕಟಿಸಿದ ಗೃಹ ಸಚಿವ!

ಟ್ರಾಫಿಕ್ ಪೊಲೀಸರು ವಾಹನ ವನ್ನು ಹೊತ್ತೊಯ್ಯುವ ಸಮಯದಲ್ಲಿ ವಾಹನದ ಮಾಲೀಕರು ಸ್ಥಳದಲ್ಲಿದ್ದರೆ ಕೇವಲ 'ನೋ ಪಾರ್ಕಿಂಗ್' ಶುಲ್ಕದ ಹಣವನ್ನು ಮಾತ್ರ ಪಡೆದುಕೊಳ್ಳಬೇಕು ಹಾಗೂ ವಾಹನವನ್ನು ಅಲ್ಲಿಯೇ ಅವರಿಗೆ ಬಿಟ್ಟು ಕೊಡಬೇಕು ಮತ್ತು ಟೋಯಿಂಗ್ ಮಾಡಬಾರದು  ಎಂದು ಹೇಳಿದರು.

ಟೋಯಿಂಗ್ ಸಿಬ್ಬಂದಿ ಸಾರ್ವಜನಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಹಾಗೂ ಟೋಯಿಂಗ್ ಮಾಡಲಾಗುವ ವಾಹನಗಳನ್ನು 
ಅತ್ಯಂತ ಜಾಗರೂಕತೆಯಿಂದ ಯಾವುದೇ ಹಾನಿಗೊಳಗಾಗದಂತೆಯೂ  ನೋಡಿಕೊಳ್ಳಬೇಕು  ಎಂದು ಖಡಕ್ ಸೂಚನೆನನ್ಉ ನೀಡಿದರು.

Follow Us:
Download App:
  • android
  • ios