ಭೂತಾನ್ ಅಡಕೆ ಆಮದಿನಿಂದ ಧಕ್ಕೆ ಇಲ್ಲ: ಜ್ಞಾನೇಂದ್ರ
ಭೂತಾನ್‌ನಿಂದ ಕೇವಲ 17 ಸಾವಿರ ಟನ್ ಹಸಿ ಅಡಕೆ ಮಾತ್ರ ಆಮದಾಗುತ್ತಿದ್ದು, ಇದೇ ವೇಳೆ ಭಾರತದಿಂದ ಒಣಅಡಕೆ ಮತ್ತು ಅಡಕೆ ಉತ್ಪನ್ನಗಳು ಎರಡು ಪಟ್ಟು ಆ ದೇಶಕ್ಕೆ ರವಾನೆಯೂ ಅಗುತ್ತಿದೆ. ಭೂತಾನ್ ಅಡಕೆ ಆಮದಿನಿಂದ ಧಕ್ಕೆ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿ(ಅ.6) : ಭೂತಾನ್‌ನಿಂದ ಕೇವಲ 17 ಸಾವಿರ ಟನ್ ಹಸಿ ಅಡಕೆ ಮಾತ್ರ ಆಮದಾಗುತ್ತಿದ್ದು, ಇದೇ ವೇಳೆ ಭಾರತದಿಂದ ಒಣಅಡಕೆ ಮತ್ತು ಅಡಕೆ ಉತ್ಪನ್ನಗಳು ಎರಡು ಪಟ್ಟು ಆ ದೇಶಕ್ಕೆ ರವಾನೆಯೂ ಅಗುತ್ತಿದೆ. ಹಸಿ ಅಡಕೆ ಅಮದು ಮಾಡಿಕೊಳ್ಳುವುದರಿಂದ ದೇಶಿ ಅಡಕೆ ಮಾರುಕಟ್ಟೆಮೇಲೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಇಳಿ ವಯಸ್ಸಲ್ಲೂ ರಂಭಾಪುರಿ ಶ್ರೀ ಧರ್ಮ ರಕ್ಷಣೆಗೆಗಾಗಿ ಹೋರಾಡುತ್ತಿದ್ದಾರೆ: ಸಚಿವ ಆರಗ ಜ್ಞಾನೇಂದ್ರ
ಪಟ್ಟಣದ ಕುಶಾವತಿಯಲ್ಲಿ ಬುಧವಾರ ಕುಂಟುವಳ್ಳಿ ವಿ ಟೆಕ್ ಎಂಜಿನಿಯರ್ಸ್ ಸಿದ್ಧಪಡಿಸಿದ ಅಡಕೆ ಸುಲಿಯುವ ಆಧುನಿಕ ಯಂತ್ರಗಳ ಮಾರಾಟ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭೂತಾನ್ ದೇಶದಿಂದ ಹಸಿ ಅಡಕೆ ಆಮದಾಗುತ್ತಿರುವುದು 17 ಸಾವಿರ ಟನ್ ಮಾತ್ರ. ಇದರಿಂದಾಗಿ ಇಲ್ಲಿನ ಬೆಳೆಗಾರರು ಚಿಂತಿಸಬೇಕಾದ ಅಗತ್ಯವಿಲ್ಲ. ಫ್ರೀ ಟ್ರೇಡ್ ಒಪ್ಪಂದ ಹೊಂದಿರುವ ದೇಶಗಳೊಂದಿಗೆ ಕೊಡುಕೊಳ್ಳುವ ವ್ಯವಹಾರ ಅನಿವಾರ್ಯ. ಚೈನಾದ ಉಪಟಳವನ್ನು ತಡೆಯುವ ಸಲುವಾಗಿ ಮಧ್ಯದಲ್ಲಿರುವ ಆ ದೇಶದೊಂದಿಗೆ ಭಾರತಕ್ಕೆ ಬಾಂಧವ್ಯ ಅನಿವಾರ್ಯ ಎಂದರು.
ಅಧಿಕಾರಲ್ಲಿ ಇದ್ದಾಗ ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸವೋಚ್ಚ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಅಡಕೆ ಬೆಳೆಗಾರರನ್ನು ಹಾದಿ ತಪ್ಪಿಸುವ ಹೇಳಿಕೆ ನೀಡುತ್ತಿರುವುದು ಖಂಡನೀಯ. ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭ ಆ ಪಕ್ಷದವರಿಗೆ ಅಡಕೆ ಬೆಳೆಗಾರರ ಮೇಲೆ ಅತಿಯಾದ ಪ್ರೀತಿ ವ್ಯಕ್ತವಾಗುತ್ತಿರುವುದು ಆಶ್ಚರ್ಯದ ಸಂಗತಿ. ರಾಜಕೀಯದ ಹಿತದೃಷ್ಟಿಯಿಂದ ಇಂಥ ಹೇಳಿಕೆ ಸಹಜವಾಗಿದೆ. ಎಲೆಚುಕ್ಕಿ ರೋಗದ ಬಗ್ಗೆ ಒಂದೂವರೆ ಹೆಕ್ಟೇರಿಗೆ ಉಚಿತ ಔಷಧಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದೂ ಹೇಳಿದರು.
ಕೂಲಿ ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿ ವಿ ಟೆಕ್ ಸಂಸ್ಥೆಯ ಅತ್ಯಾಧುನಿಕವಾದ ಅಡಕೆ ಸುಲಿಯುವ ಯಂತ್ರದ ಸಂಶೋಧನೆ ಅಡಕೆ ಬೆಳೆಗಾರರ ದೃಷ್ಟಿಯಿಂದ ಮಹತ್ವದ ಕೊಡುಗೆಯಾಗಿದೆ. ಈ ಸಂಸ್ಥೆಯ ಸಾಧನೆ ಅಡಕೆ ಬೆಳೆ ಇರುವವರೆಗೂ ಇವರ ಸಾಧನೆ ಬೆಳೆಗಾರರ ನೆನಪಿನಲ್ಲಿ ಉಳಿಯುತ್ತದೆ ಎಂದೂ ಪ್ರಶಂಸಿದರು.
ಹುಲಿವೇಷ ವೀಕ್ಷಿಸಿದ ಗೃಹ ಸಚಿವ:
ದಸರಾ ಹಬ್ಬದ ಹಿನ್ನೆಲೆ ಹುಲಿವೇಷ ವೀಕ್ಷಣೆ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ. ಕರಾವಳಿಯಂತೆ ತೀರ್ಥಹಳ್ಳಿ ಭಾಗದಲ್ಲೂ ಹುಲಿವೇಷ ಹಾಕುವುದು ವಿಶೇಷ. ಹೊದಲ ಪಂಚಾಯತಿ ಯಡಗುಡ್ಡೆಯ ಬಿಜೆಪಿ ಅಧ್ಯಕ್ಷರಾದ ನರಸಿಂಹ ಅವರು ದಸರಾ ಹಬ್ಬದ ಪ್ರಯುಕ್ತ ಹುಲಿವೇಷ ಹಾಕಿದ್ದರು. ಈ ವೇಳೆ ಹುಲಿ ನೃತ್ಯ ಮಾಡುತ್ತ ಗೃಹ ಸಚಿವರ ನಿವಾಸದ ಬಳಿ ಮೊದಲ ಬಾರಿ ಕುಣಿಯುವ ಮೂಲಕ ಸಂಭ್ರಮಿಸಿದರು. ಈ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಹುಲಿವೇಷದೊಂದಿಗೆ ಹೆಜ್ಜೆ ಹಾಕಿದರು.
ರಾಜ್ಯಾದ್ಯಂತ 200 ಕೋಟಿ ವೆಚ್ಚದಲ್ಲಿ 117 ಪೊಲೀಸ್ ಠಾಣೆ: ಆರಗ ಜ್ಞಾನೇಂದ್ರ
ತೀರ್ಥಹಳ್ಳಿ ಭಾಗದಲ್ಲಿ ದಸರಾ ಸಂದರ್ಭದಲ್ಲಿ ಹುಲಿವೇಷ ಹಾಕುವುದು ವಿಶೇಷ. ಹೊದಲ ಪಂಚಾಯತ್ ಯಡಗುಡ್ಡೆಯ ಬಿಜೆಪಿ ಬೂತ್ ಅಧ್ಯಕ್ಷರಾದ ನರಸಿಂಹ ಅವರು ತಮ್ಮ ತಂಡದೊಂದಿಗೆ ದಸರಾ ಪ್ರಯುಕ್ತ ಹುಲಿವೇಷ ಹಾಕಿ ಗೃಹ ಸಚಿವರ ನಿವಾಸದ ಬಳಿ ಆಗಮಿಸಿದ್ದರು. ಗೃಹ ಸಚಿವ ಆರಗ ಜ್ಞಾನೇಂದ್ರ ಮುಂದೆ ಹುಲಿ ವೇಷಧಾರಿಗಳ ಕುಣಿತ. ಈ ವೇಳೆ ಹುಲಿವೇಷಧಾರಿ ನರಸಿಂಹ ರವರಿಗೆ ದಸರಾ ಹಬ್ಬದ ಬಕ್ಷಿಷ್ ನೀಡಿದ ಗೃಹ ಸಚಿವರ