ಕೊರೋನಾ ಭೀತಿ ಮಧ್ಯೆ ಜಮಖಂಡಿಯಲ್ಲಿ ಸಂಭ್ರಮದ ಹೋಳಿ ಹಬ್ಬ
ಜಮಖಂಡಿಯಲ್ಲಿ ಸಖತ್ ಸ್ಟೆಪ್ ಹಾಕಿ ಹೋಳಿ ಬಣ್ಣದಾಟದಲ್ಲಿ ಮಿಂದೆದ್ದ ಯುವತಿಯರು| ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದ ರಂಗೋತ್ಸವ| ರಂಗೋತ್ಸವದಲ್ಲಿ ಪಾಲ್ಗೊಂಡ ಶಾಸಕ ಆನಂದ ನ್ಯಾಮಗೌಡ|
ಬಾಗಲಕೋಟೆ(ಮಾ.10): ದೇಶಾದ್ಯಂತ ಹೋಳಿ ಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಿಲ್ಲೆಯ ಜಮಖಂಡಿ ನಗರದಲ್ಲೂ ಕೂಡ ಬಣ್ಣದೋಕುಳೀಯನ್ನ ಆಚರಸಿಸಲಾಗಿದೆ.
ಜಮಖಂಡಿಯಲ್ಲಿ ಬಣ್ಣದೋಕುಳಿ: ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ ಮಹಿಳೆಯರು!
ನಗರದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಂಗೋತ್ಸವದಲ್ಲಿ ಸ್ಥಳೀಯ ಶಾಸಕ ಆನಂದ ನ್ಯಾಮಗೌಡ ಅವರು ಪಾಲ್ಗೊಂಡಿದ್ದರು. ಕ್ರೀಡಾಂಗಣದಲ್ಲಿ ಏಕಕಾಲಕ್ಕೆ ಸಾವಿರಾರು ಪುರುಷರು, ಮಹಿಳೆಯರು ಡಿಜೆ ಹಾಡಿಗೆ ಸ್ಟೆಪ್ ಹಾಕಿ ಕುಣಿದು ಕುಪ್ಪಳಿಸಿದ್ದಾರೆ. ಹೋಳಿ ಬಣ್ಣದಾಟದಲ್ಲಿ ಪುರುಷರಿಗೇನೂ ಕಮ್ಮಿ ಇಲ್ಲ ಎಂಬಂತೆ ಯುವತಿಯರು ಬಣ್ಣದಲ್ಲಿ ಮಿಂದೆದ್ದು ಸಖತ್ ಸ್ಟೆಪ್ ಹಾಕಿ ಗಮನ ಸೆಳೆದಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಳಿಕ ಪರಸ್ಪರ ಎಲ್ಲರಿಗೂ ಬಣ್ಣ ಎರಚಾಡಿ ಖುಷಿಪಟ್ಟಿದ್ದಾರೆ. ಶಾಸಕ ಆನಂದ ನ್ಯಾಮಗೌಡ ಪತ್ನಿ ಕೀರ್ತಿ ನ್ಯಾಮಗೌಡ, ಅನಿತಾ ಪಾಟೀಲ್, ವೈಶಾಲಿ ಗೊಂದಿ, ರೋಹಿಣಿ, ಶ್ವೇತಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.