ಗದಗ (ಮಾ.09) : ಜಿಲ್ಲೆಯಾದ್ಯಂತ ಮಾ. 8 ರಿಂದ 13ರ ವರೆಗೆ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಸಮಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಗದಿಪಡಿಸಿದ ದಿನಾಂಕ ಹಾಗೂ ಸಮಯ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. 

ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಾ. 12 ರ ಸಂಜೆ 6 ರಿಂದ ಮಾ. 14ರ ಬೆಳಗ್ಗೆ 6ರ ವರೆಗೆ, ಮುಳಗುಂದದಲ್ಲಿ ಮಾ. 8 ರ ಬೆಳಗ್ಗೆ 6ರಿಂದ ಮಾ. 9ರ ಮಧ್ಯರಾತ್ರಿವರೆಗೆ,ಗದಗ ಗ್ರಾಮೀಣ(ಲಕ್ಕುಂಡಿ, ತಿಮ್ಮಾಪುರ, ಕಳಸಾಪುರದಲ್ಲಿ ಮಾ. 8 ರ ಮಧ್ಯ ರಾತ್ರಿ ಯಿಂದ 10ರ ಮಧ್ಯರಾತ್ರಿವರೆಗೆ, ಶಿರಹಟ್ಟಿ ಯಲ್ಲಿ ಮಾ. 9 ರ ಬೆಳಗ್ಗೆ 6 ರಿಂದ ಮಾ. 11 ರ ಬೆಳಗ್ಗೆ 6 ವರೆಗೆ, ಲಕ್ಷ್ಮೇಶ್ವರ ಪಟ್ಟಣ ಹಾಗೂ ಶಿಗ್ಲಿ ಗ್ರಾಮ ದಲ್ಲಿ ಮಾ. 12 ರ ಸಂಜೆ 6 ರಿಂದ ಮಾ. 14ರ ಬೆಳಗ್ಗೆ 6ರ ವರೆಗೆ, ಲಕ್ಷ್ಮೇಶ್ವರ ತಾಲೂಕಿನ ಗ್ರಾಮಗಳಲ್ಲಿ ಮಾ. 8ರ ಸಂಜೆ 6 ರಿಂದ ಮಾ. 10 ರ ಬೆಳಗ್ಗೆ 6 ರ ವರೆಗೆ, ನರಗುಂದ, ಮುಂಡರಗಿ, ರೋಣ, ಗಜೇಂದ್ರ ಗಡ ಹಾಗೂ ನರೇಗಲ್ ಪೊಲೀಸ್ ಠಾಣಾ ವ್ಯಾಪ್ತಿ ಗಳ ಲ್ಲಿ ಮಾ. 9ರ ಬೆಳಗ್ಗೆ 6 ರಿಂದ ಮಾ. 10 ರ ಮಧ್ಯ ರಾತ್ರಿ ವರೆಗೆ ಮದ್ಯ ನಿಷೇಧಿಸಲಾಗಿದೆ. 

ಹಣ, ಚಿನ್ನ ಕದಿಯೋಕೆ ಬಂದವ್ರು ವಿದೇಶಿ ಮದ್ಯ ದೋಚಿದ್ರು..!..

ಆಯಾ ಪೊಲೀ ಸ್ ಠಾಣಾ ವ್ಯಾಪ್ತಿ ಗಳಲ್ಲಿ ಬಾರ್‌ಗಳು, ಕ್ಲಬ್‌ಗಳು, ಬಿಯ ರ್, ಮದ್ಯದ ಅಂಗಡಿಗಳನ್ನು ಮುಚ್ಚಲು ಹಾ ಗೂ ಪರಿಸ್ಥಿತಿಗೆ ಅನುಗುಣವಾಗಿ ಸಾರ್ವಜನಿಕ ಶಾಂತತೆ ಯನ್ನು ಕಾಯ್ದುಕೊಳ್ಳಲು ಅಬಕಾರಿ ಉಪ ಆಯು ಕ್ತ ರು ಸೂಕ್ತ ಕ್ರಮ ಕೈಕೊಳ್ಳಲು ಆದೇಶ ಹೊರಡಿಸಲಾಗಿದೆ.