Asianet Suvarna News Asianet Suvarna News

ಸಿದ್ದರಾಮಯ್ಯ ಆಶೀರ್ವಾದ ಪಡೆದ ಶೆಟ್ಟರ್‌..!

*  ಗುಳೇದಗುಡ್ಡದ ಕಾಂಗ್ರೆಸ್‌ ಯುವ ಮುಖಂಡ ಹೊಳೆಬಸು ಶೆಟ್ಟರ್‌
*  ಬಾದಾಮಿ ಮತಕ್ಷೇತ್ರದ ಬಗೆಗೆ ಹೆಚ್ಚಿನ ಕಾಳಜಿವಹಿಸಿ
*  ಶೆಟ್ಟರ್‌ ಹುಟ್ಟು ಹಬ್ಬದ ನಿಮಿತ್ತ ಸಿಹಿ ಊಟದ ವ್ಯವಸ್ಥೆ 
 

Holebasu Shettar Met Badami Congress MLA Siddaramaiah grg
Author
Bengaluru, First Published Oct 13, 2021, 3:36 PM IST
  • Facebook
  • Twitter
  • Whatsapp

ಗುಳೇದಗುಡ್ಡ(ಅ.13): ಗುಳೇದಗುಡ್ಡದ(Guledagudda) ಕಾಂಗ್ರೆಸ್‌ಯುವ ಮುಖಂಡ ಹೊಳೆಬಸು ಶೆಟ್ಟರ್‌(Holebasu Shettar) ತಮ್ಮ 45ನೇ ವರ್ಷದ ಹುಟ್ಟು ಹಬ್ಬದ(Birthday) ಪ್ರಯುಕ್ತ ಬೆಂಗಳೂರಿಗೆ(Bengaluru) ತೆರಳಿ ಮಂಗಳವಾರ ಬಾದಾಮಿ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. 

ಸಿದ್ದರಾಮಯ್ಯನವರು(Siddaramaiah) ಮಾತನಾಡಿ, ಬಾದಾಮಿ(Badami) ಮತಕ್ಷೇತ್ರದ ಬಗೆಗೆ ಹೆಚ್ಚಿನ ಕಾಳಜಿವಹಿಸಿ. ಬರುವ ದಿನಗಳಲ್ಲಿ ಮತಕ್ಷೇತ್ರದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸುವ ಕಾರ್ಯ ಯೋಜನೆ ರೂಪಿಸಬೇಕಾಗಿದೆ. ಮತಕ್ಷೇತ್ರದಲ್ಲಿ ಕಾಂಗ್ರೆಸ್‌(Congress) ಮುಖಂಡರ ಜೊತೆಗೂಡಿ ಪಕ್ಷ ಸಂಘಟನೆ ಮಾಡುವ ಹಾಗೂ ಅಭಿವೃದ್ಧಿ ಕಾರ್ಯ ಮಾಡುವ ಉತ್ಸಾಹ ಸದಾ ನಿನ್ನಲ್ಲಿ ಕಾಣುವಂತಾಗಲಿ ಎಂದು ಹಾರೈಸಿದರು.

ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆಕೊಟ್ಟ ಈಶ್ವರಪ್ಪ!

ಸಿಹಿ ಊಟದ ವ್ಯವಸ್ಥೆ:

ಗುಳೇದಗುಡ್ಡ ಸಮೀಪದ ನೀರಲಕೇರಿ ಗ್ರಾಮದ ಸರ್ವೋದಯ ಸರ್ವಿಸ್‌ಸೊಸೈಟಿಯ ಮುನಿ ಹಿರಿಯ ನಾಗರಿಕರ ಸೇವಾ ಕೇಂದ್ರದಲ್ಲಿ ಮಂಗಳವಾರ ಹೊಳಬಸು ಶೆಟ್ಟರ್‌ ಅಭಿಮಾನಿ ಬಳಗದ ವತಿಯಿಂದ ಆಶ್ರಮದ ನಿವಾಸಿಗಳಿಗೆ ಹೊಳಬಸು ಶೆಟ್ಟರ್‌ ಹುಟ್ಟು ಹಬ್ಬದ ನಿಮಿತ್ತ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 58 ಜನ ವಯೋವೃದ್ಧರಿಗೆ ಸಿಹಿಭೋಜನ ನೀಡಲಾಯಿತು.

ಅಭಿಮಾನಿ ಬಳಗದ ಯುವ ಮುಖಂಡ ಸಾಗರ ಕೊಣ್ಣೂರ ಮಾತನಾಡಿ, ನಮ್ಮೆಲ್ಲರ ಯುವಶಕ್ತಿಯಾಗಿರುವ ಹೊಳಬಸು ಶೆಟ್ಟರ್‌ಅವರು ಇನ್ನೂ ಹೆಚ್ಚಿನ ಸಮಾಜಸೇವೆಯಲ್ಲಿ ತೊಡಗಲಿ. ದೇವರು ಅವರಿಗೆ ನೂರು ವರ್ಷಕಾಲ ಆಯುಷ್ಯ ಹಾಗೂ ಆರೋಗ್ಯ(Health) ನೀಡಲಿ. ಮತಕ್ಷೇತ್ರದಲ್ಲಿ ಅಭಿವೃದ್ಧಿಪರ ಕಾರ್ಯಗಳು ಹೆಚ್ಚಿಗೆ ಬರಲಿ ಎಂದು ಆಶಿಸಿದರು.

ಚಂದ್ರಶೇಖರ ಪಟ್ಟಣಶೆಟ್ಟಿ, ಪ್ರದೀಪ ಕಂಚಾಣಿ, ರಾಘವೇಂದ್ರ ನೀಲುಗಲ್‌, ಮಂಜುನಾಥ ಬೆಳಗಲಿ, ಪ್ರಶಾಂತ ಕಾವಡೆ, ಗುರು ಕಾಳಿ, ಚಿನ್ಮಯ ಬಾರಾಟಕ್ಕೆ, ಪವನ ಕಿತ್ತಲಿ, ಶಂಕರ ರಂಜನಗಿ, ಸೇರಿದಂತೆ ಅವರ ಅಭಿಮಾನಿ ಬಳಗದ ಯುವಕರು ಇದ್ದರು.
 

Follow Us:
Download App:
  • android
  • ios