ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ರಂಧ್ರ : ರಿಪೇರಿ ಕಾರ್ಯ ಚುರುಕು

ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ರಂಧ್ರ ಕಾಣಿಸಿಕೊಂಡಿದ್ದು, ರಿಪೇರಿ ಕಾರ್ಯ ಚುರುಕುಗೊಂಡಿದೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. 

Hole in Tungabhadra Canal Repair Work undergo

ಕೊಪ್ಪಳ [ಸೆ.03]: ಕೊಪ್ಪಳದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ರಂಧ್ರ ಬಿದ್ದ ಹಿನ್ನೆಲೆಯ ಕಾಲುವೆ ರಿಪೇರಿ ಕಾರ್ಯ ಆರಂಭಿಸಲಾಗಿದೆ. 

ಕೊಪ್ಪಳ ಜಿಲ್ಲೆ  ಕಾರಟಗಿ ತಾಲೂಕಿನ ಸೋಮನಾಳ ಬಳಿ ಇರುವ ಕಾಲುವೆಯಲ್ಲಿ ರಿಪೇರಿ ಕಾರ್ಯ ಆರಂಭ ಮಾಡಲಾಗಿದೆ. 

ರಂಧ್ರ ಬೀಳುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ರಿಪೇರಿ ಮಾಡುತ್ತಿದ್ದಾರೆ. ಸತತ ಮೂರನೆ ಬಾರಿಗೆ ಕಾಲುವೆಯಲ್ಲಿ ರಂಧ್ರ ಕಾಣಿಸಿಕೊಂಡಿದ್ದು, ಇದರಿಂದ ಅತ್ಯಧಿಕ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿತ್ತು. 

ಇಲ್ಲಿನ 39ನೇ ಮೈಲು ಪ್ರದೇಶದಲ್ಲಿ ರಿಪೇರಿ ಕಾರ್ಯ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ.  

Latest Videos
Follow Us:
Download App:
  • android
  • ios