ಗದಗ: ಕುಡಿವ ನೀರಿನ ಸಮಸ್ಯೆ ಉಲ್ಬಣಕ್ಕೆ ಎಚ್‌ಕೆ ಪಾಟೀಲ್ ಹೊಣೆ; ನಗ​ರ​ಸಭೆ ಅಧ್ಯಕ್ಷೆ ಉಷಾ ದಾಸರ

ರಾಜ್ಯ ಸರ್ಕಾರದ ನಿರಂತರ ಕುಡಿಯುವ ನೀರು ಯೋಜನೆಯಡಿ ಅವೈಜ್ಞಾನಿಕ ಹಾಗೂ ಕಳಪೆ ಗುಣಮಟ್ಟದ ಕಾಮಗಾರಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕ ಎಚ್‌.ಕೆ. ಪಾಟೀಲ… ಹಾಗೂ ನಗರಸಭೆ ಕಾಂಗ್ರೆಸ್‌ ಸದಸ್ಯ ಎಲ….ಡಿ. ಚಂದಾವರಿ ವಿರುದ್ಧ ನಗರಸಭೆ ಅಧ್ಯಕ್ಷೆ ಉಷಾ ದಾಸರ ಹರಿಹಾಯ್ದರು.

HK Patil responsible for drinking water crisis Municipal Council President Usha Dasara at gadag rav

ಗದಗ (ಡಿ.31) : ರಾಜ್ಯ ಸರ್ಕಾರದ ನಿರಂತರ ಕುಡಿಯುವ ನೀರು ಯೋಜನೆಯಡಿ ಅವೈಜ್ಞಾನಿಕ ಹಾಗೂ ಕಳಪೆ ಗುಣಮಟ್ಟದ ಕಾಮಗಾರಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕ ಎಚ್‌.ಕೆ. ಪಾಟೀಲ… ಹಾಗೂ ನಗರಸಭೆ ಕಾಂಗ್ರೆಸ್‌ ಸದಸ್ಯ ಎಲ….ಡಿ. ಚಂದಾವರಿ ವಿರುದ್ಧ ನಗರಸಭೆ ಅಧ್ಯಕ್ಷೆ ಉಷಾ ದಾಸರ ಹರಿಹಾಯ್ದರು.

ಸುದ್ದಿ​ಗೋ​ಷ್ಠಿ​ಯ​ಲ್ಲಿ ಮಾತನಾಡಿದ ಅವರು, 2018ರ ವಿಧಾನಸಭಾ ಚುನಾವಣೆಯ ಲಾಭಕ್ಕಾಗಿ ಕುಡಿಯುವ ನೀರು ಯೋಜನೆಯ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಳ್ಳದಿದ್ದರೂ 2017ರಲ್ಲಿ ತರಾತುರಿಯಲ್ಲಿ ಕಾಮಗಾರಿ ಉದ್ಘಾಟಿಸಿದರು. ಅಂದು ಕಾಂಗ್ರೆಸಿಗರು ಮಾಡಿದ ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಇಂದಿಗೂ ಜನರು ನೀರಿಗಾಗಿ ಪರಿತಪಿಸುವಂತಾಗಿದೆ. ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಉಲ್ಬಣಕ್ಕೆ ಕಾಂಗ್ರೆಸಿಗರೆ ಹೊಣೆ. ತಾವು ಮಾಡಿದ ತಪ್ಪನ್ನು ಮುಚ್ಚಿಕೊಳ್ಳುವ ಸಲುವಾಗಿ ಆಡಳಿತ ಪಕ್ಷ ಬಿಜೆಪಿಯತ್ತ ಬೊಟ್ಟು ಮಾಡಿ ತೋರಿಸುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಕೋವಿಡ್ ಪರಿಸ್ಥಿತಿ ಬಗ್ಗೆ ಸಚಿವ ಬಿಸಿ ಪಾಟೀಲ ಆನ್ ಲೈನ್ ಮೀಟಿಂಗ್, ಮಾರ್ಗಸೂಚಿ ಪಾಲಿಸುವಂತೆ ಸೂಚನೆ

ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವತ್ತ ಆಡಳಿತ ಪಕ್ಷ ಕಾರ್ಯಪ್ರವೃತ್ತವಾಗಿದೆ. ಇದರ ಭಾಗವಾಗಿ ಹಮ್ಮಿಗಿ ಜಾಕ್‌ವೆಲ…ನಿಂದ ಗದಗ ಎ ಪಾಯಿಂಟ್‌ ವರೆಗೆ ಪೈಪ್‌ಲೈನ್‌ ದುರಸ್ತಿ ಮಾಡಿಸಲಾಗಿದೆ. ಕುಡಿಯುವ ನೀರು ಯೋಜನೆ ನಿರ್ವಹಣೆ ಮಾಡುತ್ತಿರುವ ಎಸ್‌ಬಿಎಂಎಲ… ಕಂಪನಿಗೆ ಕಾಲಕಾಲಕ್ಕೆ ಒಂದು ಕೋಟಿಗೂ ಅಧಿಕ ನಿರ್ವಹಣಾ ಹಣ ಪಾವತಿಸಿದ್ದೇವೆ ಎಂದರು.

ನಗರಸಭೆಯಲ್ಲಿ ಆಡಳಿತ ನಡೆಸುವ ಎಲ್ಲ ಸಾಮರ್ಥ್ಯ, ಯೋಗ್ಯತೆ ಇದೆ ಎಂತಲೇ ಜನರು ಕಳೆದ ಚುನಾವಣೆಯಲ್ಲಿ ಬಿಜೆಪಿಯನ್ನು ಆಶೀರ್ವದಿಸಿದ್ದಾರೆ. ನನ್ನ ರಾಜೀನಾಮೆ ಕೇಳುವುದಕ್ಕೂ ಮುನ್ನ ಕಳೆದ ಜ. 24ರಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಸದಸ್ಯರ ಬೆಂಬಲಿಗರೊಂದಿಗೆ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದಾಗಲೂ ನ್ಯಾಯಾಲಯದ ಮೆಟ್ಟಿಲೇರಿ ಎರಡು ತಿಂಗಳು ಸಮಯ ಹಾಳು ಮಾಡಿದ್ದು ಯಾರೆಂಬುದು ಜನರಿಗೆ ಗೊತ್ತಿದೆ. ಅಧಿಕಾರ ನಡೆಸಲು ನಾನು ಸಮರ್ಥಳೋ ಅಸಮರ್ಥಳೋ ಎಂಬ ಬಗ್ಗೆ ನಗರಸಭೆ ವಿರೋಧ ಪಕ್ಷದ ನಾಯಕರು ಸರ್ಟಿಫಿಕೆಟ್‌ ಕೊಡುವ ಅಗತ್ಯವಿಲ್ಲ. ಅಲ್ಲದೇ, ಆ ನೈತಿಕತೆಯೂ ಅವರಿಗಿಲ್ಲ ಎಂದರು.

ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ .19.47 ಕೋಟಿ ಅನುದಾನದಲ್ಲಿ ಸುಮಾರು 236 ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಇವುಗಳಲ್ಲಿ ಕೆಲವು ಟೆಂಡರ್‌ ಪ್ರಕ್ರಿಯೆ ಮುಕ್ತಾಯಗೊಂಡು ಪ್ರಗತಿಯಲ್ಲಿದ್ದರೆ, ಬೆರಳೆಣಿಕೆಯಷ್ಟುಟೆಂಡರ್‌ ಪ್ರಕ್ರಿಯೆಯಲ್ಲಿವೆ. ಇದು ಬಿಜೆಪಿ ಅವಳಿ ನಗರದ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ. ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಹಂತ-4ರ ಅನುದಾನದಲ್ಲಿ ಪ್ರತಿ ವಾರ್ಡಗೂ . 50 ಲಕ್ಷ ಅನುದಾನವನ್ನು ಹಂಚಿಕೆ ಮಾಡುವ ಮೂಲಕ ಅವಳಿ ನಗರದ ಎಲ್ಲ 35 ವಾರ್ಡ್‌ಗಳ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿ ಕಟಿಬದ್ಧವಾಗಿದೆ ಎಂಬುದನ್ನು ಸಾಬೀತು ಪಡಿಸಿದೆ. .34 ಕೋಟಿಯಲ್ಲಿ ಸುಮಾರು .21.64 ಕೋಟಿ ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ಉದ್ಯಾನ, ಸಮುದಾಯ ಭವನ, ಶೌಚಾಲಯಗಳ ನಿರ್ಮಾಣ, ಸ್ಮಶಾನ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಡಲಾಗಿದೆ ಎಂದು ಉಷಾ ವಿವರಿಸಿದರು.

ಗದಗ: ಪರಿವರ್ತನೆ ತರುವ ಚಿಂತನೆಯಿಂದ ಜನ್ಮತಳೆದ ಆರ್‌ಎಸ್‌ಎಸ್‌, ಕುಲಕರ್ಣಿ

ಗದಗ-ಬೆಟಗೇರಿ ವ್ಯಾಪ್ತಿಯಲ್ಲಿ ಪ್ರತಿ ವಾರ್ಡಿಗೆ .3 ಲಕ್ಷದಂತೆ ಎಲ್ಲ 35 ವಾರ್ಡ್‌ಗಳಲ್ಲೂ ಎಲ…ಇಡಿ ದೀಪಗಳನ್ನು ಹಾಕಲಾಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಲಿದ್ದೇವೆ. ಅವಳಿ ನಗರದ ಶ್ರೇಯೋಭಿವೃದ್ಧಿಗೆ ಬದ್ಧವಾಗಿದ್ದೇವೆ ಎಂದು ಹೇಳಿದರು. ನ​ಗ​ರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘ​ವೇಂದ್ರ ಯಳ​ವತ್ತಿ ಮಾತ​ನಾಡಿದರು. ನಗ​ರ​ಸಭೆ ಆಡ​ಳಿತ ಪಕ್ಷದ ಸದ​ಸ್ಯರು ಇದ್ದ​ರು.

Latest Videos
Follow Us:
Download App:
  • android
  • ios