Bengaluru: ಬ್ರಹ್ಮಕ್ಷತ್ರಿಯ ಖತ್ರಿ ಸಮಾಜದ ಆರಾಧ್ಯದೈವ ಹಿಂಗ್ಲಾಜ್ ಮಾತಾಜಿ ಮಂದಿರಕ್ಕೆ ಅದ್ದೂರಿ ಚಾಲನೆ!
ಬ್ರಹ್ಮಕ್ಷತ್ರಿಯ ಖತ್ರಿ ಸಮಾಜದ ಜನರ ಬಹುದಿನಗಳ ಕನಸು ನನಸಾಗಿದೆ. ಬ್ರಹ್ಮಕ್ಷತ್ರಿಯ ಸಮುದಾಯದ ಆರಾಧ್ಯದೈವ ಹಿಂಗುಲಾಜ್ ಮಾತಾಜಿ ಗೋಪುರವುಳ್ಳ ಮಂದಿರ ಇಂದು ಉದ್ಘಾಟನೆಗೊಂಡಿದೆ.
ವರದಿ: ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್, ಬೆಂಗಳೂರು
ಬೆಂಗಳೂರು (ಜ.27): ಬ್ರಹ್ಮಕ್ಷತ್ರಿಯ ಖತ್ರಿ ಸಮಾಜದ ಜನರ ಬಹುದಿನಗಳ ಕನಸು ನನಸಾಗಿದೆ. ಬ್ರಹ್ಮಕ್ಷತ್ರಿಯ ಸಮುದಾಯದ ಆರಾಧ್ಯದೈವ ಹಿಂಗುಲಾಜ್ ಮಾತಾಜಿ ಗೋಪುರವುಳ್ಳ ಮಂದಿರ ಇಂದು ಉದ್ಘಾಟನೆಗೊಂಡಿದೆ. ಪಾಕಿಸ್ತಾನದ ಬಲುಚಿಸ್ತಾನ್ ಬಳಿ ಇರುವ ಹಿಂಗುಲಾಜ್ ಮಾತಾಜಿ ಮಂದಿರವನ್ನು ರಾಜ್ಯದಲ್ಲಿ ಪ್ರತಿಷ್ಠಾಪಿಸ್ಬೇಕು ಎಂಬ ಕನಸು ಸಮುದಾಯಕಿತ್ತು. ಅದರಂತೆ, ಇದೆ ಮೊದಲ ಬಾರಿ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ನಿರ್ಮಿಸಲಾಗಿದೆ. ನಗರದ ಕಬ್ಬನ್ ಪೇಟೆಯಲ್ಲಿ ತಲೆಯೆತ್ತಿರುವ ದೇವಾಲಯ ಪೂರ್ತಿ ಮಾರ್ಬಲ್‌ನಲ್ಲಿ ನಿರ್ಮಾಣಗೊಂಡಿದೆ.
ಎರಡು ವರ್ಷದಿಂದ ದೇವಾಲಯ ನಿರ್ಮಾಣ ಕಾರ್ಯ ಶುರುವಾಗಿದ್ದು ಈಗ ಪೂರ್ಣಗೊಂಡಿದೆ. ಇಂದು ಗೋಪುರವಿರುವ ನೂತನ ದೇವಾಲಯ ಅದ್ದೂರಿಯಾಗಿ ಉದ್ಘಾಟನೆಗೊಂಡಿದೆ. ಉದ್ಘಾಟನೆಗೆ ವಿವಿಧ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದು ದೇವಿಯ ದರ್ಶನ ಪಡೆದರು. ಹಿಂಗ್ಲಾಜ್ ದೇವಸ್ಥಾನವು ಪಾಕಿಸ್ತಾನದ, ಬಲೂಚಿಸ್ಥಾನ ರಾಜ್ಯದ ಲಸ್ಬೆಲ ಜಿಲ್ಲೆಯ ಹಿಂಗ್ಲಾಜ್ ಎಂಬ ಪ್ರಾಂತ್ಯದಲ್ಲಿದೆ.
ಕೋಲಾರದಲ್ಲೂ ಸಿದ್ದು ಗೆಲ್ಲಲ್ಲ, ಸೋಲಿಸಲು ಆ ಪಕ್ಷದವರೇ ರೆಡಿಯಾಗಿದ್ದಾರೆ: ಸಚಿವ ಅಶೋಕ್
ಈ ದೇವಾಲಯ ಹಿಂಗೋಳ ನದಿಯ ತೀರದಲ್ಲಿ ಒಂದು ಬೆಟ್ಟದ ಗುಹೆಯಲ್ಲಿ ದುರ್ಗೆಯ ಅಥವ ದೇವಿಯ ರೂಪದಲ್ಲಿದೆ. ಹಿಂಗ್ಲಾಜ್ ದೇವಿಯ ದೇಗುಲ 51 ಶಕ್ತಿಪೀಠಗಳಲ್ಲಿ ಒಂದು. ಹಿಂಗ್ಲಾಜ್ ದೇವಿಯು ಭಾರತದಲ್ಲಿಯೇ ಹಲವಾರು ಕ್ಷತ್ರಿಯರ ಹಾಗು ಇತರ ಸಮುದಾಯಗಳ ಕುಲದೇವತೆಯಾಗಿದ್ದಾಳೆ. ಹಿಂದೂ ಖತ್ರಿಗಳು ದೇವತೆಯನ್ನು ತಮ್ಮ 'ಕುಲ ದೇವಿ' ಎಂದು ಪರಿಗಣಿಸುತ್ತಾರೆ. ಭಾರತದಲ್ಲಿ 1,50,000 ಹಿಂದೂ ಖತ್ರಿಗಳಿದ್ದಾರೆ ಮತ್ತು ಅವರಲ್ಲಿ 80% ರಾಜಸ್ಥಾನ ಮತ್ತು ಗುಜರಾತ್‌ನಲ್ಲಿದ್ದಾರೆ.