Vijayapura; ಮುಸ್ಲಿಂಮರೇ ಇಲ್ಲದ ಊರಲ್ಲಿ ಹಿಂದೂಗಳಿಂದ ಅದ್ದೂರಿ ಮೊಹರಂ!
ಮೊಹರಂ ಮುಸ್ಲಿಂ ಧರ್ಮಿಯರ ಹಬ್ಬವಾದ್ರು ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದಲ್ಲಿ ಮುಸ್ಲಿಂ ಧರ್ಮಿಯರರೇ ಇಲ್ಲ. ಆದರು ಅದ್ದೂರಿಯಾಗಿ ಮೊಹರಂ ಆಚರಣೆ ನಡೆಯುತ್ತೆ.
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಆ.09) : ಮೊಹರಂ ಮುಸ್ಲಿಂ ಧರ್ಮಿಯರ ಹಬ್ಬವಾದ್ರು ಉತ್ತರ ಕರ್ನಾಟಕ ಭಾಗದಲ್ಲಿ ಹಿಂದೂ-ಮುಸ್ಲಿಂ ಸಮುದಾಯದವರು ಸೇರಿ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಮೊಹರಂ ಹಬ್ಬ ಬಂತೆಂದರೆ ಈ ಊರ ಮನೆಗಳು ಸುಣ್ಣ, ಬಣ್ಣ ಬಳಿದುಕೊಂಡು ಸಿಂಗಾರಗೊಳ್ಳುತ್ತವೆ. ಇಡೀ ಊರೇ ಹಬ್ಬದ ಸಡಗರದಲ್ಲಿ ತೇಲುತ್ತದೆ. ಆದ್ರೆ ವಿಚಿತ್ರ ಅಂದ್ರೆ ವಿಜಯಪುರ ಜಿಲ್ಲೆಯ ಅದೊಂದು ಊರಲ್ಲಿ ಮುಸ್ಲಿಂ ಧರ್ಮಿಯರರೇ ಇಲ್ಲ. ಆದರು ಅದ್ದೂರಿಯಾಗಿ ಮೊಹರಂ ಆಚರಣೆ ನಡೆಯುತ್ತೆ. ನಿಜವಾಗಿಯೂ ಸಹಿಷ್ಣುಗಳೆಂದರೇ ಹಿಂದೂಗಳೆ. ಆದ್ರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಿಂದೂಗಳನ್ನ ಅಸಹಿಷ್ಣುಗಳು ಅಂತಾ ಬಿಂಬಿಸಿಲು ಹೋಗಿ ಆಗಾಗ್ಗ ತಮ್ಮ ಮುಖಕ್ಕೆ ತಾವೆ ಉಗಿದುಕೊಳ್ತಿರ್ತಾರೆ. ಹಿಂದೂ ಸರ್ವಧರ್ಮ ಪ್ರೀಯರು ಅನ್ನೋದಕ್ಕೆ ಸಾಕ್ಷಿಯೇ ಮೊಹರಂ ಹಬ್ಬವನ್ನ ಹಿಂದೂ ಹಬ್ಬದಷ್ಟೇ ಆಚರಣೆ ಮಾಡುವುದು. ಮೊಹರಂ ಮುಸ್ಲಿಂ ಸಮುದಾಯದ ಹಬ್ಬವಾದ್ರು ಇದನ್ನ ಅದ್ದೂರಿಯಾಗಿ ಆಚರಣೆಯಾಗುವಂತೆ ನೋಡಿಕೊಳ್ಳೊದು ಹಿಂದೂ ಧರ್ಮಿಯರು. ವಿಚಿತ್ರ ಅಂದ್ರೆ ವಿಜಯಪುರ ಜಿಲ್ಲೆಯ ಅದೊಂದು ಗ್ರಾಮದಲ್ಲಿ ಮುಸ್ಲಿಂಮರು ಇಲ್ಲದೆ ಹೋದ್ರು ಇಲ್ಲಿ ಮೊಹರಂ ಹಬ್ಬ ಅದ್ದೂರಿಯಾಗಿ ಆಚರಣೆಯಾಗುತ್ತೆ. ಇದು ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದ ವಿಶೇಷತೆ.
ಹಿಂದೂಗಳಿಂದಲೇ ಮೊಹರಂ ಆಚರಣೆ!
ಈ ಕಲ್ಲದೇವರಹಳ್ಳಿ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲದಿದ್ದರೂ ಹಿಂದೂಗಳೇ ಪರಂಪರಾಗತವಾಗಿ ಮೊಹರಂ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ದೇವರನ್ನು ಪೂಜಿಸಿ ಆರಾಧನೆ ಮಾಡುವದರಿಂದ ಹಿಡಿದು, ದೇವರನ್ನು ಹೊಳೆಗೆ ಕಳುಹಿಸುವವರೆಗೆ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುವವರು ಹಿಂದೂಗಳೇ ಎಂಬುದು ವಿಷೇಶವಾಗಿದೆ.
10 ದಿನಗಳ ಕಾಲ ನಡೆಯುವ ಮೊಹರಂ ಹಬ್ಬ!
ಕಲ್ಲದೇವನಹಳ್ಳಿ ಗ್ರಾಮದಲ್ಲಿ ಕಳೆದ ಹತ್ತು ದಿನಗಳಿಂದ ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಗ್ರಾಮದಲ್ಲಿ ಮುಸ್ಲಿಂರಿಲ್ಲದ ಪ್ರಯುಕ್ತ ಪೂರ್ವಜರು ಸಮೀಪದ ಮುಕಿಹಾಳದಿಂದ ಮುಜಾವರನನ್ನು ಕರೆತಂದು ಅವರಿಗೆ ಇನಾಮು ಹಾಗೂ ವಸತಿ ನೀಡಿ ಮೋಹರಂ ಆಚರಣೆಗೆ ಪ್ರಾರಂಭಿಸಿದಾಗಿನಿಂದಲೂ ಮೊಹರಂ ನಡೆಯುತ್ತಿದೆ.
ಅಲಾಯಿ ದೇವರನ್ನ ಹಿಡಿಯೂವವರು ಹಿಂದೂಗಳೆ!
ಆಲಾಯಿ ದೇವರು ಹಿಡಿಯವನೂ ಕೂಡಾ ತಾಳಿಕೋಟೆ ಪಟ್ಟಣದವರಾಗಿದ್ದು ಅವರು ಕೂಡಾ ಹಿಂದೂವಾಗಿದ್ದಾರೆ. ಅವರು ಮೂರು ತಲೆ ಮಾರಿನಿಂದ ಅವರ ಕುಟುಂಬವೇ ಆಲಾಯಿ ದೇವರನ್ನು ಹಿಡಿಯುತ್ತಾ ಬಂದಿದೆ. ಹಿಂದೂ ಸಮುದಾಯದ ಒಂದೊಂದು ಕುಟುಂಬಕ್ಕೆ ಮೊಹರಂ ವಿಧಿ ವಿಧಾನಗಳನ್ನು ಹಂಚಿಕೆ ಮಾಡಿದ್ದರಿಂದ ಅವರು ಮೊಹರಂ ಹಬ್ಬದಲ್ಲಿ ಶ್ರದ್ದೆಯಿಂದ ಭಾಗವಹಿಸಿ ತಲೆಮಾರಿನಿಂದ ಮಾಡಿಕೊಂಡು ಬರುತ್ತಿರುವ ಸಂಪ್ರದಾಯಕ್ಕೆ ಚ್ಯುತಿಬಾರದಂತೆ ಭಕ್ತಿಯಿಂದ ಭಾಗವಹಿಸಿ ಸಂಭ್ರಮಿಸುತ್ತಾರೆ.
ರಾಯಚೂರು ಜಿಲ್ಲೆಯಾದ್ಯಂತ ಮೊಹರಂ ಸಂಭ್ರಮ, ಹಿಂದೂ-ಮುಸ್ಲಿಂ ಒಟ್ಟಾಗಿ ಆಚರಣೆ
ಗೂಳೆ ಹೋದವರು ವಾಪಾಸ್ ಬರ್ತಾರೆ!
ಮೋಹರಂ ಬಂತೆಂದರೆ ಇಡೀ ಗ್ರಾಮವೇ ಒಂದಾಗುತ್ತದೆ. ತುತ್ತಿನ ಚೀಲ ತುಂಬಿಕೊಳ್ಳಲು ಮಹಾರಾಷ್ಟ್ರ, ಗೋವಾ, ಬೆಂಗಳೂರು, ಮಂಗಳೂರಿಗೆ ಗುಳೆ ಹೋದ ಬಡ ಜನತೆ ಮೋಹರಂ ಹಬ್ಬಕ್ಕೆ ತಂತಮ್ಮ ಗ್ರಾಮಗಳಿಗೆ ಮರಳಿ ಮೋಹರಂ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ.
ಸುರಪುರ: ಮುಸ್ಲಿಮರೇ ಇಲ್ಲದ ಊರಲ್ಲಿ ಮೊಹರಂ ಸಂಭ್ರಮ..!
ಭಾವೈಕ್ಯತೆಗೆ ಸಾಕ್ಷಿರೂಪವೇ ಈ ಊರು!
ಆಲಾಯಿ ಸಂದರ್ಭದಲ್ಲಿ ಹೆಜ್ಜೆ ಕುಣಿತ, ಮೋಹರಂ ಪದ ಹಾಡುವದು ಇಲ್ಲಿ ಎಲ್ಲವೂ ಮಾಡಿ ಭಾವಕ್ಯತೆಯನ್ನು ಸಾರುತ್ತಿದ್ದಾರೆ. ಉಪವಾಸ ಆಚರಣೆ, ಭಕ್ತಿಯಿಂದ ಮಾದಲಿ, ಕುರಿ ಬಲಿ ಸಮರ್ಪಣೆ ಮಾಡುತ್ತಾರೆ. ಮೋಹರಂ ಹಬ್ಬದಂತೆ ಉಳಿದ ಯಾವ ಹಬ್ಬಗಳೂ ಆ ಗ್ರಾಮದಲ್ಲಿ ನಡೆಯುವದಿಲ್ಲ. ಅಲ್ಲಿ ದೇವರ ವಾಣಿಯೇ ವೇದ ವಾಕ್ಯ. ನಮಗೆ ಹಿಂದೂ ಮುಸ್ಲಿಂ ದೇವರೆಂಬ ಬೇಧ ಭಾವವಿಲ್ಲ. ನಾವು ನಂಬಿರುವ ದೇವರೊಬ್ಬನನ್ನೆ. ಪರಂಪರಾಗತವಾಗಿ ನಾವು ಮೊಹರಂ ಹಬ್ಬವನ್ನು ಆಚರಿಸುತ್ತಾ ಬಂದಿದ್ದೇವೆ. ನಮಗೆ ಶಕ್ತಿ ಇರುವವರೆಗೂ ಇದನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.