ಪುತ್ತೂರು: ಹಿಂದೂ ಯುವತಿ-ಮುಸ್ಲಿಂ ಯುವಕ ವಿವಾಹ ನೋಂದಣಿ ಆಕ್ಷೇಪ ವೈರಲ್
ಇದೊಂದು ಲವ್ ಜಿಹಾದ್ ಪ್ರಕರಣವೆಂದು ಆಕ್ಷೇಪ ವ್ಯಕ್ತಪಡಿಸಿದ ಹಿಂದೂ ಸಂಘಟನೆಗಳು
ಪುತ್ತೂರು(ನ.22): ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿರುವ ಪುತ್ತೂರು ಮೂಲದ ಹಿಂದೂ ಯುವತಿ ಮತ್ತು ಬೆಂಗಳೂರಿನ ಮುಸ್ಲಿಂ ಯುವಕ ವಿವಾಹವಾಗುವುದಾಗಿ ವಿವಾಹ ನೋಂದಣಿ ಕಚೇರಿಯಲ್ಲಿ ಅಳವಡಿಸಿರುವ ಆಕ್ಷೇಪಣೆಗ ಆಹ್ವಾನಿಸಿದ ಅರ್ಜಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದೊಂದು ಲವ್ ಜಿಹಾದ್ ಪ್ರಕರಣವೆಂದು ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದೆ.
ಪುತ್ತೂರಿನ ದರ್ಬೆ ನಿವಾಸಿಯಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿರುವ ಯುವತಿ ಮತ್ತು ಬೆಂಗಳೂರಿನ ನ್ಯಾಪನಹಳ್ಳಿ ನಿವಾಸಿ ಶೇಖ್ ಮಹಮ್ಮದ್ ಸಲೀಮ್(44) ವಿವಾಹ ಆಗುವುದಾಗಿ ಬೆಂಗಳೂರಿನ ವಿವಾಹ ನೋಂದಣಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು.
MANGALURU BOMB BLAST:ಅಧರ್ಮದಲ್ಲಿ ಬಂದವರಿಗೆ ಶಿಕ್ಷೆ ನೀಡಿದ ತುಳುನಾಡಿನ ಕಾರ್ಣಿಕ ಅವಳಿ ಪುರುಷರು!
ಈ ಬಗ್ಗೆ ಆಕ್ಷೇಪಣೆ ಅವಕಾಶಕ್ಕಾಗಿ ವಿವಾಹ ನೋಂದಣಿ ಕಚೇರಿಯು 30 ದಿನಗಳ ನೋಟೀಸ್ ಕಚೇರಿಯಲ್ಲಿ ಅಳವಡಿಸಿತ್ತು. ಈ ನೋಟಿಸ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.