ಮಂಗಳೂರು (ಅ.28): ತಾನಿಷ್ಕ್ ಜಾಹೀರಾತಿನ ಬಳಿಕ ಇದೀಗ ಬಾಲಿವುಡ್‌ನ ಲಕ್ಷ್ಮೀ ಬಾಂಬ್‌ ಚಲನಚಿತ್ರದಲ್ಲೂ ‘ಲವ್‌ ಜಿಹಾದ್‌’ ಹುನ್ನಾರವಿದೆ ಎಂಬ ಆರೋಪ ಕೇಳಿಬಂದಿದೆ.

 ಹಿಂದುಗಳ ಭಾವನೆಗೆ ಧಕ್ಕೆ ಉಂಟುಮಾಡುವ ಹಾಗೂ ಲವ್‌ ಜಿಹಾದ್‌ಗೆ ಪ್ರೋತ್ಸಾಹ ನೀಡುವ ಈ ಚಲನಚಿತ್ರವನ್ನು ನಿಷೇಧಿಸಬೇಕು ಎಂದು ಹಿಂದೂ ಮಹಾಸಭಾ ಆಗ್ರಹಿಸಿದೆ. 

ಈ ಚಿತ್ರದ ನಾಯಕಿಯ ಹೆಸರು ಪ್ರಿಯಾ ಯಾದವ್‌ ಮತ್ತು ನಾಯಕನ ಹೆಸರು ಆಸೀಫ್‌ ಎಂದಾಗಿದೆ. ಮುಸ್ಲಿಂ ಯುವಕ ಮತ್ತು ಹಿಂದು ಯುವತಿಯ ಸಂಬಂಧವನ್ನು ಇದರಲ್ಲಿ ತೋರಿಸುವ ಮೂಲಕ ಲವ್‌ಜಿಹಾದ್‌ಗೆ ಪ್ರೋತ್ಸಾಹ ನೀಡಿದ್ದಾರೆ. ದಾವೂದ್‌ ಇಬ್ರಾಹಿಂ ಮತ್ತು ಪಾಕಿಸ್ತಾನದಿಂದ ಫಂಡಿಂಗ್‌ ಮಾಡಲಾಗಿದೆ. 

ಕರೀನಾ ಕಪೂರ್‌ಳ ಬೇಬಿ ಬಂಪ್‌ ಫೋಟೋ ವೈರಲ್‌! ...

ಉದ್ದೇಶ ಪೂರ್ವಕವಾಗಿ ದೀಪಾವಳಿ ಸಂದರ್ಭದಲ್ಲೇ ಪ್ರದರ್ಶನ ಮಾಡುವ ಹಿಂದೆಯೂ ಹಿಂದೂ ಸಮಾಜದ ಶಕ್ತಿಯನ್ನು ಕುಗ್ಗಿಸುವ ಸಂಚು ಅಡಗಿದೆ ಎಂದು ಹಿಂದೂ ಮಹಾಸಭಾದ ಸಂಸದೀಯ ಕಾರ್ಯದರ್ಶಿ ಧರ್ಮೇಂದ್ರ  ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.