ಉಳ್ಳಾಲ :   ವಿವಾದದ ನಡುವೆಯೂ ನಾಥೂರಾಮ್ ಗೋಡ್ಸೆ ಜಯಂತಿ ಆಚರಣೆ ಮಾಡಿದ ಹಿನ್ನೆಲೆಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ಮುಖಂಡ ರಾಜೇಶ್ ಪೂಜಾರಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  

ಮೇ.19ರಂದು ಹಿಂದೂ ಮಹಾಸಭಾ ವತಿಯಿಂದ ಗೋಡ್ಸೆ ಜಯಂತಿ ಆಚರಣೆ ಮಾಡಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದರು. ಈ ಆಚರಣೆಯಲ್ಲಿ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಎಲ್.ಕೆ.ಸುವರ್ಣ ಕೂಡ ಭಾಗಿಯಾಗಿದ್ದರು. 

ಗೋಡ್ಸೆ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಉಳ್ಳಾಲ ಠಾಣೆಯಲ್ಲಿ ಒಟ್ಟು ಐದು ಜನರ ವಿರುದ್ಧ  ಸುಮೊಟೊ ಪ್ರಕರಣ ದಾಖಲು ಮಾಡಲಾಗಿತ್ತು. 

ಗೋಡ್ಸೆ ಜಯಂತಿ ಆಚರಣೆ: ಹಿಂದೂ ಮಹಾಸಭಾದ 6 ಕಾರ‍್ಯಕರ್ತರ ಬಂಧನ

ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಪ್ರಭಾರಿಯಾದ ರಾಜೇಶ್ ಪೂಜಾರಿ , ಅಖಿಲ ಭಾರತ ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ,  ಅಖಿಲ ಭಾರತ ಹಿಂದೂ ಮಹಾಸಭಾ ಕಾರ್ಯಕರ್ತ ವಿಶ್ವನಾಥ್ ಮೇಲೆ ಪ್ರಕರಣ ದಾಖಲು ಮಾಡಲಾಗಿತ್ತಿ. 

ರಾಜೇಶ್ ಪೂಜಾರಿ ಎಂಬಾತನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದು ಪ್ರಕರಣ ಸಂಬಂಧ ವಿಚಾರಣೆಗೆ ಒಳಪಡಿಸಿದ್ದಾರೆ.