ಕಲಬುರಗಿ (ಫೆ.13): ಭಾರತೀಯ ಸನಾತನ ಧರ್ಮ, ಸಂಸ್ಕೃತಿಗೆ ವ್ಯಾಲೆಂಟೈನ್ಸ್‌ ಡೇ ವಿರೋಧವಾಗಿದ್ದು, ಫೆ.14ರಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ಕಂಡುಬಂದರೆ ಮಾದುವೆ ಮಾಡಿಸುವುದಾಗಿ ಹಿಂದೂ ಜಾಗೃತಿ ಸೇನೆಯ ಜಿಲ್ಲಾಧ್ಯಕ್ಷ ಲಕ್ಷ್ಮೀ ಕಾಂತ ಸ್ವಾದಿ, ಕಾರ್ಯದರ್ಶಿ ಅಶೋಕ ಹರಸೂರ್‌ ಎಚ್ಚರಿಸಿದ್ದಾರೆ.

ಹಿಂದೂ ಜಾಗೃತಿ ಸೇನೆಯ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ, ಕಾರ್ಯದರ್ಶಿ ಅಶೋಕ ಹರಸೂರ್‌ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ತಮ್ಮ ಹೋರಾಟ ಪ್ರೇಮದ ವಿರುದ್ಧವಲ್ಲ. ಆದರೆ, ಪ್ರೇಮಿಗಳ ದಿನದ ಹೆಸರಲ್ಲಿನ ಬೇಕಾಬಿಟ್ಟಿತನ ವಿರೋಧಿಸುತ್ತೇವೆ. ಜೋಡಿ ಕಂಡಲ್ಲಿ ಕಾರ್ಯಕರ್ತರು ಅವರ ಮದುವೆ ಮಾಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಹುಡುಗಿಯರ ಕಾಟಕ್ಕೆ ಬೇಸತ್ತು ವ್ಯಾಲಂಟೈನ್ಸ್ ಡೇಗೆ ರಜೆ ಬೇಕೆಂದು ಪ್ರಾಂಶುಪಾಲರಿಗೆ ಪತ್ರ ಬರೆದ ವಿದ್ಯಾರ್ಥಿ..! ...

ಪ್ರೇಮಿಗಳ ದಿನ, ಮುತ್ತು ಕೊಡುವ ದಿನ, ಅಪ್ಪಿಕೊಳ್ಳುವ ದಿನವೆಂದು ಹೊರ ದೇಶಗಳಲ್ಲಿನ ಸಂಸ್ಕೃತಿ ಭಾರತೀಯರಾದ ನಾವು ಅನುಸರಿಸೋದು ತಪ್ಪು. ಹಿಂದೂ ಜಾಗೃತಿ ಸೇನೆ ಇಂತಹ ಆಚರಣೆಗಳನ್ನು ವಿರೋಧಿಸುತ್ತದೆ. ನಮ್ಮ ಹೋರಾಟ ವ್ಯಾಲೆಂಟೈನ್ಸ್‌ ಡೇ ವಿರುದ್ಧವಾಗಿದೆ ಎಂದು ತಿಳಿಸಿದರು.