Asianet Suvarna News Asianet Suvarna News

Hijab Row: ರಾಜ್ಯಾದ್ಯಂತ ವ್ಯಾಪಿಸಿದ ಹಿಜಾಬ್‌ ಗದ್ದಲ: ಬಹುತೇಕ ಜಿಲ್ಲೆಗಳಲ್ಲಿ ಪರ, ವಿರೋಧ ಪ್ರತಿಭಟನೆ!

*ರಾಜ್ಯಾದ್ಯಂತ ವ್ಯಾಪಿಸಿದ ಹಿಜಾಬ್‌ Vs ಕೇಸರಿ ಗದ್ದಲ
*ಬಹುತೇಕ ಜಿಲ್ಲೆಗಳಲ್ಲಿ ಹಿಜಾಬ್‌ ಪರ, ವಿರೋಧ ಪ್ರತಿಭಟನೆ
*ಹೀಜಾಬ್, ಕೇಸರಿ-ನೀಲಿ ಶಾಲು ಧರಿಸಿಬಂದ ವಿದ್ಯಾರ್ಥಿಗಳು

Hijab vs Saffron College Student Controversy spreads to more than 15 districts of Karnataka mnj
Author
Bengaluru, First Published Feb 8, 2022, 2:45 PM IST | Last Updated Feb 8, 2022, 2:49 PM IST

ಬೆಂಗಳೂರು (ಫೆ.8): ಉಡುಪಿಯ ಕಾಲೇಜೊಂದರಲ್ಲಿ ಆರಂಭವಾದ ಹಿಜಾಬ್ ವಿವಾದ ಇದೀಗ ರಾಜ್ಯ ವ್ಯಾಪಿ ತನ್ನ ಆಳ ಅಗಲವನ್ನು ವಿಸ್ತರಿಸಿಕೊಂಡಿದ್ದು, ರಾಜ್ಯದ ಮೂಲೆ ಮೂಲೆಗಳಲ್ಲಿಯೂ ಪರ ವಿರೋಧ ಪ್ರತಿಭಟನೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ ನಂತರ ವಿವಾದದ ಕಿಚ್ಚು ಮತ್ತೂ ಹೆಚ್ಚುತ್ತಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಿಗೂ ವ್ಯಾಪಿಸುತ್ತಿದೆ. ವಿದ್ಯಾರ್ಥಿಗಳು ಕೇಸರಿ ಶಾಲು ಹೊತ್ತು ಕಾಲೇಜಿಗೆ ಆಗಮಿಸಿದ್ದು ಒಂದೆಡೆಯಾದರೆ, ಮತ್ತೊಂದಡೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರತೆ ಹೆಚ್ಚಿಸಿಕೊಂಡಿದೆ. ಹಿಜಾಬ್‌ ಧರಿಸಿ ಕಾಲೇಜಿಗೆ ಬರುವುದಕ್ಕೆ ವಿರೋಧ ವ್ಯಕ್ತಪಡಿಸಿ ಕೇಸರಿ ಶಾಲು ಧರಿಸಿ ಬರುತ್ತಿರುವ ವಿದ್ಯಾರ್ಥಿಗಳ ವಿರುದ್ಧ ನೀಲಿ ಶಾಲು ಧರಿಸಿ ಕಾಲೇಜ್‌ಗೆ ಬಂದಿರುವ ಘಟನೆಗಳು ನಡೆದಿವೆ. ಅಷ್ಟಕ್ಕೂ ಎಲ್ಲೆಲ್ಲಿ, ಏನೇನು ಆಗಿದೆ?

ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ಶಾಂತೇಶ್ವರ ಕಾಲೇಜಿಗೆ ಯುವಕರು  ಮಂಗಳವಾರ ಹಿಜಾಬ್ ಬೆಂಬಲಿಸಿ ನೀಲಿ ಶಾಲು  ಧರಿಸಿ ಬಂದಿದ್ದಾರೆ .   ನೀಲಿ ಶಾಲು‌‌ ಧರಿಸಿ ಬಂದ ವಿದ್ಯಾರ್ಥಿಗಳಿಗೆ ಮುಸ್ಲಿಂ ಯುವಕರ ಸಾತ್ ನೀಡಿದ್ದಾರೆ.  ಇತ್ತ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಗುಂಪು ಕಟ್ಟಿ ನಿಂತಿದ್ದರು. ಗುಂಪು ಘರ್ಷಣೆಯಾಗುವ ಸಾಧ್ಯತೆ ಹಿನ್ನೆಲೆ ಪೊಲೀಸರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು ಗುಂಪು ಕಟ್ಟಿ ನಿಂತಿದ್ದ ವಿದ್ಯಾರ್ಥಿಗಳ  ಗುಂಪುಗಳನ್ನ ಪೊಲೀಸರು ಚದುರಿಸಿದ್ದಾರೆ. ಅಲ್ಲದೇ ಗುಂಪು ಕಟ್ಟಿ ನಿಲ್ಲದಂತೆ ತಾಕೀತು ಮಾಡುತ್ತಿದ್ದಾರೆ. 

ಇನ್ನು ವಿಜಯಪುರದ ಚಡಚಣ ಸಂಗಮೇಶ್ವರ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದಾರೆ. ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳನ್ನ ತರಗತಿಗೆ ಹಾಜರಾಗಲು ಕಾಲೇಜು ಸಿಬ್ಬಂದಿ ಅನುಮತಿ ನೀಡಿಲ್ಲ. ಹೀಗಾಗಿ  ಕೇಸರಿ ಶಾಲು ಹಾಕಿ ಬಂದ ವಿದ್ಯಾರ್ಥಿಗಳು ಗೇಟ್ ಹೊರಗೆ ನಿಲ್ಲಬೇಕಾಯಿತು. ಸಮವಸ್ತ್ರ ಧರಿಸಿಬಂದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗೆ ಪ್ರವೇಶ ನೀಡಲಾಗಿದೆ. 
ಇನ್ನು ವಿಜಯಪುರ ಜಿಲ್ಲೆ ಇಂಡಿ, ಸಿಂದಗಿ, ಚಡಚಣ, ಬಸವನ ಬಾಗೇವಾಡಿ, ನಿಡಗುಂದಿ ಕಾಲೇಜುಗಳಲ್ಲಿ ಹಿಜಾಬ್ಗೆ ವಿರೋಧ ವ್ಯಕ್ತವಾಗಿದೆ. 

ಇದನ್ನೂ ಓದಿ: Hijab Row: ಪೊಲೀಸರಿಗೆ ಸೂಚನೆ ನೀಡಿದ್ದೇವೆ, ಪರಿಸ್ಥಿತಿ ನಿಯಂತ್ರಣದಲ್ಲಿದೆ: ಗೃಹ ಸಚಿವ

ಬಾಗಲಕೋಟೆ: ಕಾಲೇಜ್‌ಗೆ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳನ್ನು ಒಳಬಿಡದ ಕಾಲೇಜ್ ಸಿಬ್ಬಂದಿ ಜೊತೆ ವಿದ್ಯಾರ್ಥಿಗಳ ವಾಗ್ವಾದ ನಡೆಸಿ ಘಟನೆ ಬಾಗಲಕೋಟೆಯಲ್ಲಿ ವಿದ್ಯಾಗಿರಿಯಲ್ಲಿ ನಡೆದಿದೆ. ಬಾಗಲಕೋಟೆಯ ವಿದ್ಯಾಗಿರಿಯ ಬಸವೇಶ್ವರ ಪಿಯು ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳನ್ನ ಸಿಬ್ಬಂದಿ ಕಾಲೇಜು ಪ್ರವೇಶಿಸಲು ಅನುಮತಿ ನೀಡಿಲ್ಲ. ಹಈಗಾಗಿ ಗೇಟ್ ಬಳಿ ಕಾಯುತ್ತಿದ್ದ ಕೇಸರಿ ಶಾಲು ಧರಿಸಿರೋ ವಿದ್ಯಾರ್ಥಿಗಳೂ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ. ಹಿಜಾಬ್ ಧರಿಸಿ ಕಾಲೇಜ್ ಗೆ ಬಂದ ವಿದ್ಯಾರ್ಥಿನಿಯರಿಗೆ ಅವಕಾಶ ನೀಡಿ ನಮಗ್ಯಾಕೆ ಇಲ್ಲ ಅಂತೀರಿ ಎಂದ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. 

ಬಾಗಲಕೋಟೆಯ ಬನಹಟ್ಟಿಯಲ್ಲಿ  ಕಲ್ಲು ತೂರಾಟ ನಡೆದಿದ್ದು ಪೋಲಿಸರ ಲಾಠಿ ಚಾಜ್೯ ಮಾಡಿದ್ದಾರೆ. ಏಕಾಏಕಿ ಕಾಲೇಜ್ ಗೇಟ್ ಹೊಡೆದಾಕಿ ನುಗ್ಗಿ ಕಲ್ಲು ತೂರಾಟ ನಡೆದಿದೆ. ಹೀಗಾಗಿ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾಜ್೯ ಮಾಡಿದ್ದಾರೆ. ಉಭಯ ಕಡೆಯಿಂದಲ್ಲೂ ನಡೆದ ಕಲ್ಲು ತೂರಾಟ ನಡೆದಿದ್ದು  ಘಟನೆಯಲ್ಲಿ ಓವ೯ನಿಗೆ ಗಾಯವಾಗಿದೆ.  

ಚಿಕ್ಕಮಗಳೂರು: ನಗರದ IDSG ಕಾಲೇಜಿನಲ್ಲಿ ಹಿಜಾಬ್ ಕೇಸರಿ ಶಾಲು ಮುಂದುವರಿದೆ. ಹಿಜಾಬ್ ಇಲ್ಲದೆ ಕಾಲೇಜ್ ಒಳಗೆ ಹೋಗಲು ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ. ಹೀಗಾಗಿ ಕಾಲೇಜು ಪ್ರವೇಶಿಸದೆ ವಿದ್ಯಾರ್ಥಿಗಳು ಮನೆಗೆ ವಾಪಸಾಗಿದ್ದಾರೆ. ಸೋಮವಾರ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳು ಇಂದು ಕೇಸರಿ ಮತ್ತು ನೀಲಿ ಶಾಲು ಒಟ್ಟಿಗೆ ಧರಿಸಿದ್ದರು.  ಕೇಸರಿ ಶಾಲು ತೆಗೆದ ವಿದ್ಯಾರ್ಥಿಗಳಿಗೆ ಕಾಲೇಜ್ ಒಳಗೆ ತೆರಳಲು ಪ್ರಾಂಶುಪಾಲರು ಅವಕಾಶ ನೀಡಿದ್ದಾರೆ.  

ಇದನ್ನೂ ಓದಿ: Hijab Row: ಕಾಲೇಜಿಗೆ ಕೇಸರಿ ಪೇಟಾ ಧರಿಸಿ ಬಂದ ಎಂಜಿಎಂ ಕಾಲೇಜು ವಿದ್ಯಾರ್ಥಿಗಳು!

ಗದಗ: ಗದಗ ನಗರದಲ್ಲಿ ಹಿಜಾಬ್ ಕೇಸರಿ  ವಿವಾದ ಹಬ್ಬಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮಂಗಳವಾರ ಹಿಜಾಬ್ ಹಾಕಿಮಕ್ಕಳು ಹಾಗೂ ಪಾಲಕರು ಕಾಲೇಜಿಗೆ ಆಗಮಿಸಿದ್ದಾರೆ.  ರಾಜ್ಯ ಸರ್ಕಾರ ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶಿಸಿದೆ. ಹಿಜಾಬ್ ಹಾಕಿಕೊಂಡು ತರಗತಿಗೆ ಕುಳಿತುಕೊಳ್ಳುವ ಅವಕಾಶವಿಲ್ಲ. ಈಗಾಗಲೇ ಕೇಸರಿ ಶಾಲು ಹಾಕಿಕೊಂಡು ಬಂದವರನ್ನು ಹೊರಗಡೆ ಕಳಿಸಲಾಗಿತ್ತು. ಆದರೆ  ಹಿಜಾಬ್ ಹಾಕಿ ಬಂದಿ ವಿದ್ಯಾರ್ಥಿಗಳಿಗೆ  ಅವಕಾಶ ಇಲ್ಲ ಎಂದ ಪ್ರಾಚಾರ್ಯರ ಹೇಳಿಕೆಯಿಂದ  ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ಹಾಗೂ ಪಾಲಕರು ಕೆರಳಿದ್ದಾರೆ. ಪರಿಸ್ಥಿತಿ ತಿಳಿಗೊಳ್ಳದ ಹಿನ್ನೆಲೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

ರಾಮನಗರ: ಕರಾವಳಿಯಿಂದ ರಾಮನಗರಕ್ಕೂ  ಹಿಜಾಬ್ ವಿವಾದ ಕಾಲಿಟ್ಟಿದೆ. ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ರಾಮನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಪ್ರತಿಭಟಿನೆ ಮಾಡಿದ್ದಾರೆ. ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ  ವಿದ್ಯಾರ್ಥಿಗಳು ಹಾಗೂ ಪೋಷಕರು  ಒತ್ತಾಯ ಮಾಡಿದ್ದಾರೆ. 

ಬೆಳಗಾವಿ:  ಬೆಳಗಾವಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸುವ ಮೂಲಕ ಕಾಲೇಜಿಗೆ ತೆರಳಿದ್ದಾರೆ. ವಿವಿಧ ಕಾಲೇಜು ಆವರಣದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಜೈ ಶ್ರೀರಾಮ ಘೋಷಣೆ ಕೂಗಿದ್ದಾರೆ. ಬೆಳಗಾವಿ ನಗರದ ಜೈನ್‌, ಕೆಎಲ್‌ಎಸ್, ಆರ್‌ಪಿಡಿ, ಜ್ಯೋತಿ ಜಿಎಸ್‌ಎಸ್ ಸೇರಿದಂತೆ ಇನ್ನಿತರ ಕಾಲೇಜು ವಿದ್ಯಾರ್ಥಿಗಳು  ಕೇಸರಿ ಶಾಲುಗಳನ್ನು ಧರಿಸಿ ಕಾಲೇಜುಗಳಿಗೆ ತೆರಳಿದ್ದಾರೆ.

ಇದನ್ನೂ ಓದಿ: Hijab Row: ಹಿಜಾಬ್ ನನ್ನ ಹಕ್ಕು, ಆದರೆ ಶಾಲೆ, ಕಾಲೇಜಿನ ಒಳಗೆ ಬೇಡ: ಮುಸ್ಲಿಂ ವಕ್ತಾರೆ

 ಮಂಗಳವಾರದಿಂದ ಬೆಳಗಾವಿಯ ಎಲ್ಲ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬರಬೇಕು ಎಂಬ ಮೇಸೆಜ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈಗ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ಕಾಲೇಜು ಆವರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಕಾಲೇಜಿನಲ್ಲಿ ಹೊತ್ತಿಕೊಂಡ ಹಿಜಾಬ್‌ ಕೇಸರಿ ವಿವಾದ ಈಗ ಉತ್ತರ ಕರ್ನಾಟಕದ ಬೆಳಗಾವಿಗೂ ಹಬ್ಬಿದೆ.

ಶಿವಮೊಗ್ಗ: ಹಿಜಬ್ ಹಾಗೂ ಕೇಸರಿ ಶಾಲಿನ ನಡೆಯುತ್ತಿದ್ದ ವಾಗ್ವಾದ ಶಿವಮೊಗ್ಗದ ಬಾಪೂಜಿ ನಗರ ಸರ್ಕಾರಿ ಕಾಲೇಜಿನಲ್ಲಿ ಸಂಘರ್ಷಕ್ಕೆ ತಿರುಗಿದ್ದು, ಸದ್ಯ ಪರಿಸ್ಥಿತಿ ಪೊಲೀಸರ ನಿಯಂತ್ರಣದಲ್ಲಿದ್ದರೂ ಬಿಗುವಿನ ವಾತಾವರಣವಿದೆ. ಕೇಸರಿ ಧ್ವಜವನ್ನು ಕಾಲೇಜು ಆವರಣದಲ್ಲಿರುವ ಧ್ವಜ ಸ್ತಂಭಕ್ಕೆ ವಿದ್ಯಾರ್ಥಿಗಳು ಕಟ್ಟುತ್ತಿದ್ದ ವೇಳೆ ಕಾಲೇಜು ಕಟ್ಟಡದ ಮೇಲ್ಭಾಗದಿಂದ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಲ್ಲು ತೂರಾಟದಿಂದಾಗಿ ತತಕ್ಷಣವೇ ಎಚ್ಚೆತ್ತ ಪೊಲೀಸರು ವಿದ್ಯಾರ್ಥಿಗಳನ್ನು ಚದುರಿಸಲು ಮುಂದಾದರು ಆದರೆ ಆದರೆ ಪರಿಸ್ಥಿತಿ ಮತ್ತಷ್ಟು ಹದಗೆಡುವ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಖುದ್ದು ಅಕಾಡಕ್ಕಿಳಿದು ವಿದ್ಯಾರ್ಥಿಗಳನ್ನು ಹಾಗೂ ಸ್ಥಳದಲ್ಲಿ ನೆರೆದಿದ್ದ ನಾಗರಿಕರನ್ನು ಚದುರಿಸಬೇಕಾಯಿತು. ಈ ಹಂತದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಘು ಲಾಠಿ ಪ್ರಹಾರವನ್ನು ನಡೆಸಬೇಕಾಯಿತು. 

ವಿದ್ಯಾರ್ಥಿಗಳ ಮನವೊಲಿಸಿ ಶಾಂತಿ ಕಾಪಾಡುವಂತೆ ಹಾಗೂ ಮನೆಗಳಿಗೆ ತೆರಳುವಂತೆ ಖುದ್ದು ಎಸ್‌ಪಿ ಅವರೇ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಭೇಟಿ ಇನ್ನು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಸೆಲ್ವಮಣಿ, ಕಾಲೇಜಿನ ಪ್ರಾಂಶುಪಾಲರು ಹಾಗೂ ಜಿಲ್ಲಾರಕ್ಷಣಾಧಿಕಾರಿಗಳೀಂದ ಮಾಹಿತಿ ಪಡೆದು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಕಾಲೇಜು ಕಟ್ಟಡದ ಮೇಲ್ಭಾಗಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಜರಂಗದಳ ಜಿಲ್ಲಾ ಸಂಚಾಲಕ ದೀನದಯಾಳು, ಪಾಲಿಕೆ ಸದಸ್ಯ ಸುರೇಖಾ ಮುರಳೀಧರ್ ಸೇರಿದಂತೆ ಹಲವರು ಸ್ಥಳದಲ್ಲಿದ್ದು, ವಿದ್ಯಾರ್ಥಿಗಳ ಮನವೊಲಿಸುವ ಕಾರ್ಯ ಮಾಡುತ್ತಿದ್ದಾರೆ.

Latest Videos
Follow Us:
Download App:
  • android
  • ios