Asianet Suvarna News Asianet Suvarna News

ಕಲುಷಿತ ನೀರು‌ ಸೇವಿಸಿ ಆರು ಮಂದಿ ಸಾವು ಹಿನ್ನೆಲೆ, ಕಾವಾಡಿಗರಹಟ್ಟಿಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾದ ಸರ್ಕಾರ

ಕಲುಷಿತ ನೀರು‌ ಸೇವಿಸಿ ಚಿತ್ರದುರ್ಗದಲ್ಲಿ ಆರು ಮಂದಿ  ಸಾವನ್ನಪ್ಪಿದ ದುರಂತ‌ ಕಣ್ಮುಂದೆಯೇ ಇದೆ. ಹೀಗಾಗಿ ಕಾವಾಡಿಗರಹಟ್ಟಿಗೆ ಹೈಟೆಕ್ ಸ್ಪರ್ಶ ನೀಡಲು  ಸರ್ಕಾರ ಮುಂದಾಗಿದೆ.

 high-tech touch to Kavadigarahatti area after Contaminated water supply  in  Chitradurga  gow
Author
First Published Jan 17, 2024, 9:09 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜ.17): ಕಲುಷಿತ ನೀರು‌ ಸೇವಿಸಿ ಚಿತ್ರದುರ್ಗದಲ್ಲಿ ಆರು ಮಂದಿ  ಸಾವನ್ನಪ್ಪಿದ ದುರಂತ‌ ಕಣ್ಮುಂದೆಯೇ ಇದೆ. ಹೀಗಾಗಿ ಕಾವಾಡಿಗರಹಟ್ಟಿಗೆ ಹೈಟೆಕ್ ಸ್ಪರ್ಶ ನೀಡಲು  ಸರ್ಕಾರ ಮುಂದಾಗಿದೆ. ಆದ್ರೆ ಮತ್ತೆ ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಕೈಗನ್ನಡಿ ಎಂಬಂತೆ  ಗಾಂಧಿನಗರದ ಜನರಿಗೆ ಕಲುಷಿತ ನೀರೇ ಪೂರೈಕೆಯಾಗ್ತಿದೆ. ಹೀಗಾಗಿ ಜನರು ಆ ನೀರನ್ನು ಸೇವಿಸಲು ಆತಂಕ ಪಡುತ್ತಿದ್ದು, ಶುದ್ದ ಕುಡಿಯುವ ನೀರು ಒದಗಿಸಿ ಎಂದು ಆಗ್ರಹಿಸಿದ್ದಾರೆ.  

ಹೀಗೆ ನೀರನ್ನು ಸೋಸುತ್ತಿರುವ ನಾಗರೀಕರು.‌ ನೀರು ಸೇವಿಸಲು ಒಮ್ಮೆ ಯೋಚಿಸಬೇಕಾದ ಸ್ಥಿತಿ.‌ ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗದ ಗಾಂಧಿನಗರದಲ್ಲಿ.  ಈ ಬಡಾವಣೆಯಲ್ಲಿ 450ರಿಂದ 500 ಕುಟುಂಬಗಳು ವಾಸವಾಗಿವೆ. ಬಹುತೇಕ ಕೂಲಿ ಕಾರ್ಮಿಕರು ಸೇರಿದಂತೆ ಕಡುಬಡ ಜನರೇ ಇಲ್ಲಿ ನೆಲೆಸಿದ್ದಾರೆ. ಆದ್ರೆ ಹಲವು ದಿನಗಳಿಂದ ಈ ಬಡಾವಣೆಗೆ ಕಲುಷಿತ ನೀರು ಸರಬರಾಜಾಗ್ತಿದೆ. ನೀರಲ್ಲಿ‌ ಕಸ ಕಡ್ಡಿಯ ರಾಶಿಯೇ ಪೈಪುಗಳಲ್ಲಿ ಹರಿದು ಬರ್ತಿದೆ. ಓವರ್ ಹೆಡ್  ಟ್ಯಾಂಕ್ ನಿಂದ ಗಾಂಧಿನಗರಕ್ಕೆ ನೀರು ಪೂರೈಕೆಯಾಗ್ತಿದ್ದು,ಮದ್ಯದಲ್ಲಿ ಪೈಪ್ ಶಿಥಿಲಗೊಂಡಿರುವ ಪರಿಣಾಮ ಕಲುಷಿತ ನೀರು ಬಡಾವಣೆಗೆ ಪೂರೈಕೆಯಾಗ್ತಿದೆ‌.

ಅಮೆರಿಕದಲ್ಲಿ ವಿಶ್ವದ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಹೊರಹೊಮ್ಮಿದ 9ರ ಹರೆಯದ ಭಾರತೀಯ ಬಾಲಕಿ

ಹೀಗಾಗಿ ಈ ನೀರನ್ನು ಸೇವಿಸುವ ಗಾಂಧಿನಗರದ‌ ಜನರಲ್ಲಿ ಆತಂಕ ಮನೆ ಮಾಡಿದೆ. ಸಾಂಕ್ರಮಿಕ ರೋಗದ ಬೀತಿ ಜನರಲ್ಲಿ ಶುರುವಾಗಿದೆ‌. ಅಲ್ಲದೇ ಶುದ್ಧ ಕುಡಿಯುವ ನೀರು ತರಲು ಒಂದು ಕಿಲೋಮೀಟರ್ ಅಂತರದಲ್ಲಿರುವ ಐಯುಡಿಪಿ‌ ಬಡಾವಣೆಗೆ ಈ ನಾಗರೀಕರು ತೆರಳಬೇಕಿದೆ. ಹೀಗಾಗಿ ದಿಕ್ಕು ತೋಚದ ಮಹಿಳೆಯರು, ಮಕ್ಕಳು‌ ಹಾಗು ವಯೋವೃದ್ಧರು ಇದೇ ಕಲುಷಿತ ನೀರನ್ನೇ ಸೇವಿಸುವಂತಾಗಿದೆ ಎಂದು ನಿರ್ಲಕ್ಷ್ಯ ತೋರಿರುವ ನಗರಸಭೆ ಅಧಿಕಾರಿಗಳ ವಿರುದ್ಧ ನಾಗರೀಕರು ಕಿಡಿಕಾರಿದ್ದಾರೆ‌.

ಇನ್ನು ಕಲುಷಿತ ನೀರು ಸೇವಿಸಿ ಐವರು ಸಾವನ್ನಪ್ಪಿದ ದುರಂತ ಮಾಸಿಲ್ಲ. ಇದರ ಬೆನ್ನಲ್ಲೇ ಚಿತ್ರದುರ್ಗ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರೋದು ವಿಪರ್ಯಾಸ. ಅಲ್ಲದೇ ಈ ಸಮಸ್ಯೆ ಬಗ್ಗೆ ಹಲವು ಬಾರಿ ನಗರಸಭೆ ಅಧಿಕಾರಿಗಳು ಹಾಗು ಕ್ಷೇತ್ರದ ಶಾಸಕರಾದ ವೀರೇಂದ್ರ ಪಪ್ಪಿ ಗಮನಕ್ಕೆ‌ ತಂದರೂ ಯಾವ್ದೇ ಪ್ರಯೋಜನವಾಗಿಲ್ಲ.ಹೀಗಾಗಿ ಹಲವು ವರ್ಷಗಳಿಂದ ಈ ಕಲುಷಿತ ನೀರನ್ನೇ ಗಾಂಧಿನಗರದ  ಜನರು ಸೇವಿಸುವಂತಾಗಿದೆ. ಆಗಾಗ ವಿಪರೀತ ಕಸಕಡ್ಡಿ ಬರಲಿದ್ದು,ನೀರಿನ ಬಣ್ಣವೇ ಬದಲಾಗಲಿದೆ. ಆದ್ದರಿಂದ ನಗರಸಭೆಯಿಂದ  ನೂತನ ಶುದ್ಧನೀರಿನ ಘಟಕ ಆರಂಭಿಸುವ ಮೂಲಕ ಈ ಸಮಸ್ಯೆಗೊಂದು ಶಾಶ್ವತ ಪರಿಹಾರ‌ನೀಡುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.

ಕೊಡಗಿನಲ್ಲೇ ವಿಷವಾಗುತ್ತಿದೆ ಜೀವಜಲ ಕಾವೇರಿ, ಒಡಲು ಸೇರುತ್ತಿದೆ ಶುಂಠಿ ಶುದ್ಧೀಕರಣದ ತ್ಯಾಜ್ಯ, ಶೌಚಾಲಯದ ನೀರು

ಒಟ್ಟಾರೆ ಕಲುಷಿತ ನೀರಿನಿಂದ ಚಿತ್ರದುರ್ಗದಲ್ಲಿ  ದೊಡ್ಡ ದುರಂತವೇ ನಡೆದಿದೆ. ಹೀಗಾಗಿ ಮತ್ತೆ ಅಂತಹ ಪ್ರಕರಣ ಗಾಂಧಿನಗರದಲ್ಲಿ ಮರುಕಳಿಸುವ ಮುನ್ನ  ನಗರಸಭೆ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಎಚ್ಚೆತ್ತು ಕಲಿಷಿತ‌ ನೀರು ಸರಬರಾಜಿಗೆ ಬ್ರೇಕ್ ಹಾಕಿ, ಜನರಿಗೆ ಶುದ್ದ ಕುಡಿಯುವ ನೀರನ್ನು ಪೂರೈಸಲು‌ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. 

Follow Us:
Download App:
  • android
  • ios